ನವದೆಹಲಿ: ಭಾರತದ ಪ್ರಸಿದ್ಧ ಕುಸ್ತಿ ಪಟು ಭಜರಂಗ್ ಪುನಿಯಾ ಬಲ್ಗೆರಿಯಾ ಕುಸ್ತಿ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕ ಗಳಿಸಿದ್ದರು. ಈ ಪದಕವನ್ನು ಪಾಕ್ ಕಪಿಮುಷ್ಟಿಯಿಂದ ಭಾರತಕ್ಕೆ ವಾಪಾಸ್ ಬಂದಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಸಮರ್ಪಿಸಿ ಗೌರವ ಸಲ್ಲಿಸಿದ್ದಾರೆ.
ಬಲ್ಗೇರಿಯಾದಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿಯ 65 ಕೆಜಿ ವಿಭಾಗದಲ್ಲಿ ಭಾರತದ ಭಜರಂಗ್ ಅವರು ಅಮೆರಿಕಾದ ಜೋರ್ಡನ್ ಒಲಿವೇರ್ ಅವರನ್ನು ಮಣಿಸಿದ್ದಾರೆ. ಈ ಮೂಲಕ ಚಿನ್ನದ ಪದಕ ಗೆದ್ದು ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಲ್ಲದೆ ತಮಗೆ ಬಂದಿರುವ ಚಿನ್ನದ ಪದಕವನ್ನು ಅಭಿನಂದನ್ ಅವರಿಗೆ ಅರ್ಪಿಸಿ ವೀರ ಯೋಧನಿಗೆ ಗೌರವ ಸಲ್ಲಿಸಿದ್ದಾರೆ. ಇದನ್ನೂ ಓದಿ:ವೀರ ಯೋಧ ಅಭಿನಂದನ್‍ಗೆ `ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ’
Advertisement
Advertisement
ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ನಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಭಾರತದ ಕೆಚ್ಚೆದೆಯ ಈ ವೀರಯೋಧನ ಸ್ಪೂರ್ತಿಯಿಂದಲೇ ನಾನು ಇಂದು ಚಿನ್ನದ ಪದಕ ಗೆದ್ದಿದ್ದೇನೆ. ಹೀಗಾಗಿ ಈ ಪದಕವನ್ನು ಅವರಿಗೆ ಸಮರ್ಪಿಸಲು ಬಯಸಿದ್ದೇನೆ ಎಂದು ಭಜರಂಗ್ ಪುನಿಯಾ ತಿಳಿಸಿದ್ದಾರೆ.
Advertisement
मैं अपना गोल्ड मेडल हमारे बहादुर वायु योद्धा #WingCommandorAbhinandan को समर्पित करना चाहता हूं। उन्होंने मुझे बहुत प्रेरणा दी और मुझमें जोश भर दिया। मैं किसी दिन उनसे मिलकर उनसे हाथ मिलाना चाहता हूं।
???????? जय हिन्द जय भारत ???????????? pic.twitter.com/Ww54FKt1VU
— Bajrang Punia ???????? (@BajrangPunia) March 2, 2019
Advertisement
ಅಭಿನಂದನ್ ಅವರ ದೇಶಸೇವೆಗೆ ನನ್ನ ನಮನ, ಅವರನ್ನು ನಾನೂ ಒಮ್ಮೆ ಭೇಟಿಯಾಗಬೇಕು, ಕೈ ಕುಲಕಬೇಕು ಎನ್ನುವ ಆಸೆ ಇದೆ ಎಂದಿದ್ದಾರೆ. ಭಜರಂಗ್ ಪುನಿಯಾ ಒಲಂಪಿಕ್, ಕಾಮನ್ ವೆಲ್ತ್ ಕ್ರೀಡಾಕೂಟಗಳಲ್ಲಿ ಭಾರತದಿಂದ ಸ್ಪರ್ಧಿಸಿ ಪದಕ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಕಳೆದ 5 ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ 4 ಚಿನ್ನದ ಪದಕ ಹಾಗೂ 1 ಬೆಳ್ಳಿ ಪದಕ ಗೆದ್ದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv