ನೆಲಮಂಗಲ: ದೇವಾಲಯಗಳ ತೆರವು ಕಾರ್ಯವನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ಶಿವಾಜಿ ರೀತಿ ಕತ್ತಿ ಭಜರಂಗಿ ರೀತಿ ಗದೆ ಹಿಡಿದು ನಿಂತರೆ, ಯಾವ ಅಧಿಕಾರಿಗಳು ನಮ್ಮನ್ನು ಏನು ಮಾಡಲಾರರು ಎಂದು ಭಜರಂಗದಳ ಕಾರ್ಯಕರ್ತ ನರೇಶ್ ರೆಡ್ಡಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ನಗದಲ್ಲಿಂದು ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತ ಹಿಂದೂ ದೇವಸ್ಥಾನಗಳ ತೆರವನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನಮ್ಮ ಕಾರ್ಯಕರ್ತರು ಶಿವಾಜಿ ರೀತಿ ಕತ್ತಿ, ಭಜರಂಗಿ ರೀತಿಯಲ್ಲಿ ಗದೆ ಹಿಡಿದು ನಿಂತರೆ ಅಧಿಕಾರಿಗಳು ನಮ್ಮನ್ನು ತಡೆಯಲಾಗುವುದಿಲ್ಲ ಎಂದು ಎಚ್ಚರಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಅವರನ್ನು ನಾನೇ ಬಿಜೆಪಿಗೆ ಕರೆ ತರುತ್ತೇನೆ: ರಾಜೂ ಗೌಡ
ಜಿಲ್ಲಾಡಳಿತ ಪಟ್ಟಿ ಮಾಡಿರುವ ದೇವಸ್ಥಾನಗಳನ್ನು ತೆರವು ವಿಚಾರ ಸರಿಯಿಲ್ಲ. 1992 ಡಿಸೆಂಬರ್ 6 ರಂದು ನಡೆದ ಬಾಬ್ರಿ ಮಸೀದಿ ನೆನಪು ಮಾಡಿಕೊಳ್ಳಿ. ಅಂದು ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ಇದೇ ಭಜರಂಗದಳ. ಈಗ ನೆಲಮಂಗಲದಲ್ಲಿರುವ ಅಕ್ರಮ ಮಸೀದಿಗಳನ್ನು ಭಜರಂಗದಳ ಹೊಡೆಯಬೇಕಾಗುತ್ತೆ, ಒಂದು ಹಿಂದೂ ದೇವಾಲಯ ತೆರವು ಮಾಡಿದ್ರೆ ತಾಲೂಕಿನ ಎಲ್ಲಾ ಅಕ್ರಮ ಮಸೀದಿಗಳನ್ನು ಹೊಡೆಯಬೇಕಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಎಲ್ಲಾ ಕ್ಷೇತ್ರದಲ್ಲೂ ಇಬ್ಬಿಬ್ಬರನ್ನು ಇಟ್ಟಿರ್ತಾರೆ: ಎಸ್.ಆರ್ ಶ್ರೀನಿವಾಸ್
ಆಂಜನೇಯ ದೇವಸ್ತಾನ ಕೆಡವಿದ್ದ, ಜಾಗದಲ್ಲಿ ದೇವಸ್ಥಾನ ಪುನರ್ ನಿರ್ಮಾಣ ಆಗಬೇಕು. ಇಲ್ಲದಿದ್ದರೆ 15 ದಿನದಲ್ಲಿ 6 ಜಿಲ್ಲೆಗಳ ಮುಖಾಂತರ ನೆಲಮಂಗಲ ಚಲೊ ಮಾಡಬೇಕಾಗುತ್ತೆ, ರಾಜ್ಯ ಸರ್ಕಾರ ಬಂದಿರೋದು ಹಿಂದುತ್ವ, ಹಿಂದೂ ಮತ್ತು ಶ್ರೀರಾಮನ ಹೆಸರಲ್ಲಿ. ಹಿಂದೂ ಹೆಸರಲ್ಲಿ ಅಧಿಕಾರಕ್ಕೆ ಬಂದ ಯಾವೊಬ್ಬ ಶಾಸಕ ಮಂತ್ರಿ ಕೂಡ ಈ ಬಗ್ಗೆ ಮಾತನಾಡುತ್ತಿಲ್ಲ. ಅವರಿಗೆಲ್ಲ ನಾಚಿಕೆಯಾಗಬೇಕು. ಎಲ್ಲರೂ ರಾಜೀನಾಮೆ ಕೊಟ್ಟು ಮನೆಯಲ್ಲಿ ಕೂರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.