ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ (Bajaj Auto) ವಿಶ್ವದ ಮೊದಲ ಸಿಎನ್‌ಜಿ ಬೈಕ್ (CNG Bike) ‘ಬಜಾಜ್ ಫ್ರೀಡಂ 125’ (Bajaj Freedom 125) ಅನ್ನು ಬಿಡುಗಡೆಗೊಳಿಸಿದೆ. ಇದರ ಎಕ್ಸ್ ಶೋರೂಂ ಬೆಲೆ ರೂ.95,000 ದಿಂದ 1. 10 ಲಕ್ಷದವರೆಗೆ ಇದೆ.
Advertisement
ಬಜಾಜ್ ಫ್ರೀಡಂ ಬೈಕ್ 125 ಸಿಸಿ ಎಂಜಿನ್ ಹೊಂದಿದ್ದು 9.5 ಪಿಎಸ್ ಪವರ್ ಮತ್ತು 9.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 2 ಲೀಟರ್ ಪೆಟ್ರೋಲ್ ಟ್ಯಾಂಕ್ ಮತ್ತು ಸೀಟ್ ನ ಕೆಳಗೆ 2 ಕೆಜಿ ಸಿಎನ್‌ಜಿ ಸಿಲಿಂಡರ್ ಅನ್ನು ಈ ಬೈಕ್ ಹೊಂದಿದೆ. ಇದು CNGಯಲ್ಲಿ ಚಲಿಸುವಾಗ, ಪ್ರತಿ ಕಿಲೋಗ್ರಾಂಗೆ 102 ಕಿಲೋಮೀಟರ್ ಮೈಲೇಜ್ ಮತ್ತು ಪೆಟ್ರೋಲ್‌ನಲ್ಲಿ ಚಲಿಸುವಾಗ 67 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕೇವಲ ಒಂದು ಸ್ವಿಚ್ ಪ್ರೆಸ್ ಮಾಡುವ ಮೂಲಕ CNGಯಿಂದ ಪೆಟ್ರೋಲ್ ಮತ್ತು ಪೆಟ್ರೋಲ್‌ನಿಂದ CNGಗೆ ಬದಲಾವಣೆ ಮಾಡಿಕೊಳ್ಳಬಹುದು.
Advertisement
Advertisement
ಫ್ರೀಡಂ ಬೈಕ್ 147 ಕೆಜಿ ತೂಕವಿದ್ದು, 758 ಮಿಲಿಮೀಟರ್ ಉದ್ದದ ಸಿಂಗಲ್ ಪೀಸ್ ಸೀಟ್ ಹೊಂದಿದೆ. ನೋಡೋಕೆ ತುಂಬಾ ಸ್ಟೈಲಿಶ್ ಆಗಿರುವ ಫ್ರೀಡಂ ಬೈಕ್ ಸ್ಪೋರ್ಟಿ ಸ್ಟೈಲಿಂಗ್, ಪೂರ್ಣ ಡಿಜಿಟಲ್ ಸ್ಪೀಡೋ ಮೀಟರ್ ಜೊತೆ ಬ್ಲೂಟ್‌ಟೂತ್ ಕನೆಕ್ಟಿವಿಟಿ, ಫಸ್ಟ್-ಇನ್-ಕ್ಲಾಸ್ ಲಿಂಕ್ಡ್ ಮೊನೊಶಾಕ್ ಸಸ್ಪೆನ್ಷನ್, ಎಲ್‌ಇಡಿ ಹೆಡ್ ಲ್ಯಾಂಪ್, ಡ್ಯುಯಲ್ ಕಲರ್ ಸ್ಕೀಮ್ ಅನ್ನು ಹೊಂದಿದೆ.
Advertisement
ಈ ಬೈಕ್ ಡಿಸ್ಕ್ LED, ಡ್ರಮ್ LED ಮತ್ತು ಡ್ರಮ್ ಎಂಬ ಮೂರು ಮಾದರಿಗಳಲ್ಲಿ ಲಭ್ಯವಿದೆ. ಹೊಸ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌ಗಳ ಬುಕ್ಕಿಂಗ್ ಆರಂಭವಾಗಿದ್ದು, ಡೆಲಿವರಿಗಳು ಮೊದಲು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಪ್ರಾರಂಭವಾಗುತ್ತದೆ.
ಬಜಾಜ್ ಫ್ರೀಡಂ 125 ಮೋಟಾರ್‌ಸೈಕಲ್ 11 ಸುರಕ್ಷತಾ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿದೆ. ಬಜಾಜ್ ಕಂಪನಿಯು ಫ್ರೀಡಂ 125 ಬೈಕನ್ನು ಈಜಿಪ್ಟ್, ತಾಂಜಾನಿಯಾ, ಕೊಲಂಬಿಯಾ, ಪೆರು, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾದಂತಹ ದೇಶಗಳಿಗೆ ರಫ್ತು ಮಾಡಲು ಯೋಜಿಸಿದೆ.