-ಪ್ರಿಯಕರ ಹಾಗೂ ಆತನ ತಂದೆಗೂ ಜಾಮೀನು ಮಂಜೂರು
ಲಕ್ನೋ: ವೀಸಾ ಇಲ್ಲದೆ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ (Pakistani Woman) ಸೀಮಾ ಗುಲಾಮ್ ಹೈದರ್ (27) ಮತ್ತು ಗ್ರೇಟರ್ ನೋಯ್ಡಾ ನಿವಾಸಿಗಳಾದ ಸಚಿನ್ ಮೀನಾ (22) ಮತ್ತು ಇಬ್ಬರಿಗೆ ಆಶ್ರಯ ನೀಡಿದ ನೇತ್ರಪಾಲ್ ಮೀನಾ (50) ಅವರಿಗೆ ನೋಯ್ಡಾ ನ್ಯಾಯಾಲಯ ಶುಕ್ರವಾರ ಜಾಮೀನು (Bail) ನೀಡಿದೆ.
Advertisement
ಜುಲೈ 4ರಂದು ಗ್ರೇಟರ್ ನೋಯ್ಡಾ (Noida) ಪೊಲೀಸರು ವೀಸಾ (Visa) ಇಲ್ಲದೇ ಭಾರತಕ್ಕೆ ಪ್ರವೇಶಿಸಿದ್ದ ಮಹಿಳೆ ಮತ್ತು ಆತನ ಪ್ರಿಯಕರ ಹಾಗೂ ಅವರಿಬ್ಬರಿಗೆ ಆಶ್ರಯ ನೀಡಿದ್ದ ಪ್ರಿಯಕರನ ತಂದೆಯನ್ನು ಬಂಧಿಸಿದ್ದರು. ಇದೀಗ ಸ್ಥಳೀಯ ನ್ಯಾಯಾಲಯ (Court) ಈ ಮೂವರಿಗೂ ಜಾಮೀನು ನೀಡಿದ್ದು, ಕಾಗದ ಪತ್ರಗಳ ಪರಿಶೀಲನೆ ಕೆಲಸ ಮುಗಿದ ಬಳಿಕ ಶನಿವಾರ ಜೈಲಿನಿಂದ ಬಿಡುಗಡೆ ಮಾಡಲಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು. ಇದನ್ನೂ ಓದಿ: ಕುಸ್ತಿಪಟುಗಳಿಗೆ ಕಿರುಕುಳ ಆರೋಪ – ಬ್ರಿಜ್ ಭೂಷಣ್‍ಗೆ ಸಮನ್ಸ್ ಜಾರಿಗೊಳಿಸಿದ ಕೋರ್ಟ್
Advertisement
Advertisement
ಸಚಿನ್ ಮೀನಾ ಮೂಲತಃ ಉತ್ತರಪ್ರದೇಶದವನಾಗಿದ್ದು, 2019ರಲ್ಲಿ ಆನ್‌ಲೈನ್ ಗೇಮ್ ಪಬ್‌ಜೀ (PUBG) ಆಡಬೇಕಾದರೆ ಇವರಿಬ್ಬರ ಪರಿಚಯವಾಗಿ, ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿದೆ. ಬಳಿಕ ಸೀಮಾ ಗುಲಾಮ್ ಹೈದರ್ ಆತನೊಂದಿಗೆ ನೋಯ್ಡಾದಲ್ಲಿ ವಾಸಿಸುವ ಸಲುವಾಗಿ ಪಾಕಿಸ್ತಾನದಿಂದ ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಳೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ಹಿನ್ನಡೆ- ಮಾನನಷ್ಟ ಪ್ರಕರಣದಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ
Advertisement
ಆರೋಪಿಗಳ ಪರ ವಕೀಲ ಹೇಮಂತ್ ಕೃಷ್ಣ ಪರಾಶರ್ (Hemant Krishna Parashar) ವಾದ ಮಂಡಿಸಿದ್ದು, ಜೇವರ್ ಸಿವಿಲ್ ಕೋರ್ಟ್ ಜೂನಿಯರ್ ವಿಭಾಗದ ನ್ಯಾಯಮೂರ್ತಿ ನಾಜಿಮ್ ಅಕ್ಬರ್ (Justice Nazim Akbar) ಜಾಮೀನು ಮಂಜೂರು ಮಾಡಿದ್ದಾರೆ. ಪ್ರಕರಣ ಸಂಪೂರ್ಣವಾಗಿ ಕೊನೆಗೊಳ್ಳುವವರೆಗೂ ಸೀಮಾ ಗುಲಾಮ್ ಹೈದರ್ ದಂಪತಿ ವಾಸಸ್ಥಾನ ಬದಲಿಸದಂತೆ ಮತ್ತು ಪ್ರತಿದಿನ ತಪ್ಪದೇ ಕೋರ್ಟಿಗೆ ಹಾಜರಾಗುವಂತೆ ನ್ಯಾಯಾಲಯವು ಷರತ್ತನ್ನು ವಿಧಿಸಿದೆ ಎಂದು ಆರೋಪಿಗಳ ಪರ ವಾದ ಮಂಡಿಸಿದ್ದ ವಕೀಲ ಪರಾಶರ್ ಹೇಳಿದ್ದಾರೆ. ಇದನ್ನೂ ಓದಿ: ತಬ್ರೇಜ್ ಅನ್ಸಾರಿ ಹತ್ಯೆ ಕೇಸ್ – 10 ಅಪರಾಧಿಗಳಿಗೆ 10 ವರ್ಷ ಶಿಕ್ಷೆ
ಈ ವರ್ಷದ ಆರಂಭದಲ್ಲಿ ಸೀಮಾ ಗುಲಾಮ್ ಹೈದರ್ ಮತ್ತು ಸಚಿನ್ ನೇಪಾಳದಲ್ಲಿ ವಿವಾಹವಾಗಿದ್ದು, ಪಾಕಿಸ್ತಾನಕ್ಕೆ ತೆರಳಿದರೆ ಜೀವಬೆದರಿಕೆ ಇದೆ. ಅಲ್ಲದೇ ನೇಪಾಳದ ಕಠ್ಮಂಡುವಿನಲ್ಲಿ ತಾನು ಮತ್ತು ಸಚಿನ್ ಮದುವೆಯಾಗಿರುವುದಾಗಿ ಮಹಿಳೆ ಲಿಖಿತ ರೂಪದಲ್ಲಿ ತಿಳಿಸಿದ್ದು, ಪಾಕಿಸ್ತಾನದಿಂದ ನೇಪಳಕ್ಕೆ ಹೋಗಿ ಬಳಿಕ ಭಾರತಕ್ಕೆ ಬಂದಿರುವುದಾಗಿ ವಕೀಲ ಪರಾಶರ್ ತಮ್ಮ ವಾದವನ್ನು ಮಂಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಮಹಿಳೆಯ ನಾಲ್ವರು ಮಕ್ಕಳ ಕಾಳಜಿಯ ಬಗ್ಗೆಯೂ ವಕೀಲರು ವಾದ ಮಂಡಿಸಿದ್ದು, ಇವರ ವಾದದಿಂದ ತೃಪ್ತಗೊಂಡ ನ್ಯಾಯಾಲಯವು ದಂಪತಿಗೆ ಜಾಮೀನು ನೀಡಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ನಿಷೇಧ – ಮಧ್ಯಂತರ ತಡೆ ನೀಡಲು ಮದ್ರಾಸ್ ಹೈಕೋರ್ಟ್ ನಿರಾಕರಣೆ
Web Stories