ಬೆಂಗಳೂರು: ನಟ ದರ್ಶನ್‌ಗೆ (Darshan) ಎರಡೆರಡು ಟೆನ್ಷನ್ ಇದೆ. ಒಂದು ಕಡೆ ರೆಗ್ಯೂಲರ್ ಬೇಲ್ ಟೆನ್ಷನ್, ಮತ್ತೊಂದು ಕಡೆ ಆಪರೇಷನ್ ಟೆನ್ಷನ್. ಈ ವಾರದಲ್ಲೇ ನಟ ದರ್ಶನ್‌ಗೆ ಆಪರೇಷನ್ ಮಾಡ್ತಾರೆ ಎಂದು ಹೇಳಲಾಗಿದೆ.
ಆಪರೇಷನ್ ಮಾಡೋದಕ್ಕೆ ವೈದ್ಯರು ಮನವೊಲಿಸಿದ್ದಾರೆ ಎನ್ನಲಾಗಿದೆ. ಆಪರೇಷನ್ ಮಾಡಿದರೆ ರಿಕವರಿ ಆಗೋಕೆ ಮತ್ತಷ್ಟು ಸಮಯ ಬೇಕಾಗುತ್ತದೆ. ಆಗಾಗಿ ಸಮಯಕ್ಕಾಗಿ ಮತ್ತಷ್ಟು ಕಾಲಾವಕಾಶ ಕೇಳುವ ಸಾಧ್ಯತೆ ಇದೆ. ಇದನ್ನೂ ಓದಿ: ರಾಜ್ಯದ ವಿವಿಧೆಡೆ ಮುಂದಿನ 3 ಗಂಟೆಯ ಒಳಗೆ ಭಾರೀ ಮಳೆಯ ಎಚ್ಚರಿಕೆ
ಬೆನ್ನು ನೋವಿರುವ ಕಾರಣ ಡಿಸ್ಕ್ ಆಪರೇಷನ್ ಮಾಡ್ತಾರಾ ಅಥವಾ ಬೆನ್ನು ಮೂಳೆಗೆ ರಾಡ್ ಅಳವಡಿಕೆ ಮಾಡಿ ಆಪರೇಷನ್ ಮಾಡ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಡಿಸ್ಕ್ ಆಪರೇಷನ್ ಹೇಗೆ ನಡೆಯುತ್ತೆ?
ಬೆನ್ನುಮೂಳೆಗಳ ಮಧ್ಯೆ ತೇವಾಂಶದ ಭಾಗ ಇರುತ್ತೆ. ಆ ತೇವಾಂಶದ ಭಾಗ ಬೆನ್ನುಮೂಳೆಗಳಿಂದ ಹೊರಗಡೆ ಬಂದು ಮೂಳೆಗಳಿಗೆ ಒತ್ತಡ ಆಗುತ್ತೆ. ಒತ್ತಡ ಹಾಕಿದಾಗ ನೋವು ಬರುತ್ತೆ. ಹೊರಗಡೆ ಬಂದಿರೋ ತೇವಾಂಶದ ಭಾಗವನ್ನ ಸರ್ಜರಿ ಮಾಡ್ತಾರೆ. ಡಿಸ್ಕ್ ಆಪರೇಷನ್ ಮಾಡಿದ್ರೆ ರಾಡ್ ಅಳವಡಿಕೆ ಮಾಡಲ್ಲ. ಇದನ್ನೂ ಓದಿ: We Have An Agreement – ಸಿಎಂ ಹುದ್ದೆ ಒಪ್ಪಂದದ ಬಗ್ಗೆ ಡಿಕೆಶಿ ಮೌನ ಮುರಿದ್ರಾ?
ಬೆನ್ನುಮೂಳೆಗೆ ರಾಡ್ ಅಳವಡಿಕೆ ಮಾಡುವ ಆಪರೇಷನ್ ಹೇಗೆ
ಬೆನ್ನುಮೂಳೆಗಳು ಒಂದಕ್ಕೊಂದು ಮುಂದೆ ಬಾಗಿರುತ್ತೆ. ಬೆನ್ನುಮೂಳೆ ಹೊರಗಡೆ ಬಂದಾಗ ನೋವು ಜಾಸ್ತಿ ಆಗುತ್ತೆ. ಹೊರಗಡೆ ಬಂದಿರುವ ಬೆನ್ನುಮೂಳೆಗೆ ಆಪರೇಷನ್ ಮಾಡಿ ರಾಡ್ ಅಳವಡಿಕೆ ಮಾಡಬೇಕಾಗುತ್ತೆ. ಯಾವುದೇ ಆಪರೇಷನ್ ಆದರೂ ಮೂರವರೆ ತಿಂಗಳು ರೆಸ್ಟ್ ಮಾಡಬೇಕು ಎಂದು ಆರ್ಥೋ ಸರ್ಜನ್ ಡಾ. ವಸುದೇವ್ ಪ್ರಭು ತಿಳಿಸಿದ್ದಾರೆ.