ಬಾಹುಬಲಿ (Bahubali) ಪ್ರಭಾಸ್‌ಗೆ (Prabhas) ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವಿದೆ. ಕರ್ನಾಟಕದಲ್ಲೂ ಪ್ರಭಾಸ್‌ಗೆ ಫ್ಯಾನ್ಸ್ ಇದ್ದಾರೆ. ಮೈಸೂರಿನಲ್ಲಿ ವ್ಯಾಕ್ಸ್ ಮ್ಯೂಸಿಯಂನಲ್ಲಿ ಪ್ರಭಾಸ್ ಮೇಣದ ನಿರ್ಮಿಸಿಲಾಗಿದೆ. ಈ ಮ್ಯೂಸಿಯಂನಲ್ಲಿ ಸ್ಥಾನ ಪಡೆದ ಮೊದಲ ದಕ್ಷಿಣ ಭಾರತದ ನಟ ಎನ್ನುವ ಹೆಗ್ಗಳಿಕೆಗೆ ಪ್ರಭಾಸ್ ಪಾತ್ರರಾಗಿದ್ದಾರೆ. ಪ್ರಭಾಸ್ ಮೇಣದ ಪ್ರತಿಮೆ ನಿರ್ಮಿಸಿದ್ದಕ್ಕೆ ಬಾಹುಬಲಿ ನಿರ್ಮಾಪಕ ಗರಂ ಆಗಿದ್ದಾರೆ.
ಮೈಸೂರಿನ ಮ್ಯೂಸಿಯಂನಲ್ಲಿ (Mysuru Museum) ಪ್ರಭಾಸ್ ಪ್ರತಿಮೆ ನಿರ್ಮಾಣ ಮಾಡಿರುವ ವಿಚಾರಕ್ಕೆ ಸ್ವತಃ ಬಾಹುಬಲಿ ನಿರ್ಮಾಪಕ ಶೋಬು ಯರ್ಲಗಡ್ಡ ಅಸಮಾಧಾನ ಹೊರಹಾಕಿದ್ದಾರೆ. ಮ್ಯೂಸಿಯಂನಲ್ಲಿ ಪ್ರಭಾಸ್ ಬಾಹುಬಲಿ ಲುಕ್ ವೈರಲ್ ಆಗ್ತಿದ್ದಂತೆ ನಿರ್ಮಾಪಕ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಮೆ ನೋಡಲು ಬಾಹುಬಲಿ ರೀತಿ ಇದೆ. ಆದರೆ ಬಾಹುಬಲಿ ಲುಕ್‌ಗೂ ಪ್ರಭಾಸ್‌ಗೂ ಹೊಂದಾಣಿಕೆ ಆಗುತ್ತಿಲ್ಲ. ಇದನ್ನೂ ಓದಿ:ಶ್ರೀಲೀಲಾ ಔಟ್, ವಿಜಯ್ ದೇವರಕೊಂಡಗೆ ಮತ್ತೆ ರಶ್ಮಿಕಾ ಮಂದಣ್ಣ ನಾಯಕಿ
ಕ್ರಿಕೆಟಿಗ ಡೇವಿಡ್ ವಾರ್ನರ್ ರೀತಿ ಕಾಣುತ್ತಿದೆ ಎಂದು ಟ್ರೋಲ್ ಮಾಡ್ತಿದ್ದಾರೆ. ಲೈಸೆನ್ಸ್ ಇಲ್ಲದೇ ಈ ರೀತಿ ಪ್ರತಿಮೆ ಮಾಡಿರೋದು ತಪ್ಪು ಎಂದು ನಿರ್ಮಾಪಕ ಟ್ವೀಟ್ ಮಾಡಿದ್ದಾರೆ. ಪ್ರಭಾಸ್ ಪ್ರತಿಮೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಅದನ್ನು ತೆಗೆದು ಹಾಕುವಂತೆ ಬಾಹುಬಲಿ ನಿರ್ಮಾಪಕ ಆಗ್ರಹಿಸಿದ್ದಾರೆ.
This not an officially licensed work and was done without our permission or knowledge. We will be taking immediate steps to get this removed. https://t.co/1SDRXdgdpi
— Shobu Yarlagadda (@Shobu_) September 25, 2023
ಅನುಮತಿ ಪಡೆಯದೇ ಯಾರ ಗಮನಕ್ಕೂ ತರದೇ ಈ ಪ್ರತಿಮೆ ಮಾಡಲಾಗಿದೆ. ಇದನ್ನೂ ತೆಗೆದು ಹಾಕಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ವತಃ ಬಾಹುಬಲಿ ನಿರ್ಮಾಪಕ ಶೋಬು ಯರ್ಲಗಡ್ಡ (Shobu Yarlagadda) ಪ್ರತಿಕ್ರಿಯೆ ನೀಡಿದ್ದಾರೆ.
2015ರಲ್ಲಿ ಬಾಹುಬಲಿ ಸಿನಿಮಾ ತೆರೆ ಕಂಡಿತ್ತು. ಪ್ರಭಾಸ್, ಅನುಷ್ಕಾ ಶೆಟ್ಟಿ (Anushka Shetty), ರಮ್ಯಾ ಕೃಷ್ಣನ್, ತಮನ್ನಾ (Tamanna Bhatia) ಸೇರಿದಂತೆ ಹಲವರು ನಟಿಸಿದ್ದರು. ರಾಜಮೌಳಿ ನಿದೇಶನಕ್ಕೆ, ನಿರ್ಮಾಪಕ ಶೋಬು ಯರ್ಲಗಡ್ಡ ಮತ್ತು ಪ್ರಸಾದ್ ದೇವಿನೇನಿ ನಿರ್ಮಿಸಿದ್ದರು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]