Connect with us

ಅಮೆರಿಕ ಆಸ್ಪತ್ರೆಗೆ ಬಾಹುಬಲಿ ಪ್ರಭಾಸ್ ದಾಖಲು!

ಅಮೆರಿಕ ಆಸ್ಪತ್ರೆಗೆ ಬಾಹುಬಲಿ ಪ್ರಭಾಸ್ ದಾಖಲು!

ಹೈದರಾಬಾದ್: ಪ್ರಭಾಸ್ ಇತ್ತೀಚಿನ ದಿನಗಳಲ್ಲಿ ತಮ್ಮ ಸಾಹೋ ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ. ಹೀಗಿರುವಾಗ ಪ್ರಭಾಸ್ ಹೊಸ ವರ್ಷದಂದು ಅಮೇರಿಕಾಗೆ ಹೋಗಿದ್ದಾರೆ.

ಪ್ರಭಾಸ್ `ಬಾಹುಬಲಿ’ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ತಮ್ಮ ಎಡ ಬುಜಕ್ಕೆ ಬಲವಾದ ಪೆಟ್ಟು ಮಾಡಿಕೊಂಡಿದ್ದರು. ಆ ನೋವು ತಡೆಯಲಾರದೇ 2016ರಲ್ಲೇ ಅಮೆರಿಕ ದೇಶಕ್ಕೆ ಶಸ್ತ್ರ ಚಿಕಿತ್ಸೆಗೆಂದು ಹೋಗಿದ್ದರು. ಆ ಚಿಕಿತ್ಸೆ ಹಾಗೇ ಬಾಕಿ ಇತ್ತು. ಆದರೆ ಈಗ ಮತ್ತೆ ಪ್ರಭಾಸ್ ಗೆ ಆ ನೋವು ಕಾಣಿಸಿಕೊಂಡಿದೆ.

ಹೌದು. `ಸಾಹೋ’ ಸಿನಿಮಾದ ಮೇಜರ್ ಫೈಟಿಂಗ್ ಸಿಕ್ವೇನ್ಸ್ ನಲ್ಲಿ ಇರೋ ಕಾರಣ ಮತ್ತೆ ಭುಜದ ನೋವು ಕಾಣಿಸಿಕೊಂಡಿದೆ. ತಮ್ಮಿಂದ ಶೂಟಿಂಗ್ ಗೆ ತೊಂದರೆ ಆಗಬಾರದೆಂದು ಹೊಸವರ್ಷದ ದಿನ ಅಮೆರಿಕಗೆ ಹಾರಿದ್ದಾರೆ. ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ ಎಂದು ಟಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

ಸದ್ಯ ಪ್ರಭಾಸ್ ಸಾಹೋ ಚಿತ್ರದಲ್ಲಿ ನಟಿಸುತ್ತಿದ್ದು, ಶ್ರದ್ಧಾ ಕಪೂರ್ ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Advertisement
Advertisement