ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ (Anushka Shetty) ಅವರು ತೆಲುಗು ಮತ್ತು ಮಲಯಾಳಂ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಚಿತ್ರದ ನಂತರ ಒಪ್ಪಿಕೊಂಡಿದ್ದ 2 ಬಿಗ್ ಪ್ರಾಜೆಕ್ಟ್‌ಗಳ ಶೂಟಿಂಗ್ ಅನ್ನು ನಟಿ ಮುಗಿಸಿಕೊಟ್ಟಿದ್ದಾರೆ. ಬೆಳ್ಳಿಪರದೆಯಲ್ಲಿ ಅನುಷ್ಕಾ ಸಿನಿಮಾ ನೋಡಲು ಕಾಯುತ್ತಿರುವ ಫ್ಯಾನ್ಸ್‌ಗೆ ಈಗ ಅವರ ಮುಂದಿನ ಸಿನಿಮಾಗಳ ಅಪ್‌ಡೇಟ್ ಸಿಕ್ಕಿದೆ. ಇದನ್ನೂ ಓದಿ:ಕಿಚ್ಚನ ಅನುಪಸ್ಥಿತಿಯಲ್ಲಿ ನಡೆಯಿತು ಎಲಿಮಿನೇಷನ್ ಪ್ರಕ್ರಿಯೆ- ಮಾನಸಾ ಔಟ್?
ಅನುಷ್ಕಾ ಶೆಟ್ಟಿ ಕ್ಯಾಮೆರಾ ಮುಂದೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಕೆಲಸದ ಮೂಲಕ ಅವರು ಉತ್ತರ ಕೊಡೋಕೆ ರೆಡಿಯಾಗಿದ್ದಾರೆ. ತೆಲುಗಿನ ‘ಘಾಟಿ’ ಹಾರರ್ ಮತ್ತು ಮಲಯಾಳಂನಲ್ಲಿ ಜಯಸೂರ್ಯ ಜೊತೆ ಅನುಷ್ಕಾ ನಟಿಸಿದ್ದಾರೆ. ಈ 2 ಪ್ರಾಜೆಕ್ಟ್‌ಗಳ ಶೂಟಿಂಗ್ ಮುಗಿದಿದೆ.
ಅದರಲ್ಲೂ ಮಲಯಾಳಂ ಸಿನಿಮಾದಲ್ಲಿ ಅವರು ನೀಲಿ ಎಂಬ ಮಾಟಗಾತಿಯ ಪಾತ್ರಕ್ಕೆ ಅನಷ್ಕಾ ಜೀವತುಂಬಿದ್ದಾರೆ. ಈ ಚಿತ್ರ 2 ಭಾಗಗಳಲ್ಲಿ ಮೂಡಿ ಬರಲಿದೆ. ಅನುಷ್ಕಾ ಭಾಗದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಈ ಚಿತ್ರಕ್ಕೆ ರೊಜಿನ್ ಥಾಮಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಅಂದಹಾಗೆ, ಮಲಯಾಳಂ ಸಿನಿಮಾ, ಕಾಂಚೆ, ಘಾಟಿ, ಗೌತಮಿಪುತ್ರ ಶತಕರ್ಣಿ, ಕ್ರಿಷ್ ಜಗರ್ಲಮುಡಿ ನಿರ್ದೇಶನ ಮಹಿಳಾ ಪ್ರಧಾನ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಅನುಷ್ಕಾ ಕೈಯಲ್ಲಿವೆ. ಮುಂದಿನ ವರ್ಷ ಒಂದೊಂದೇ ಸಿನಿಮಾಗಳು ರಿಲೀಸ್ ಆಗಲಿವೆ.