ಕುಡ್ಲದ ಬೆಡಗಿ ಅನುಷ್ಕಾ ಶೆಟ್ಟಿ ಅವರು ಬರೋಬ್ಬರಿ 7 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಾವೆಲ್ಲಾ ಸಿನಿಮಾಗಳು ನಟಿಯ ಕೈಯಲ್ಲಿವೆ ಎಂಬುದರ ಮಾಹಿತಿ ಇಲ್ಲಿದೆ. ಇದನ್ನೂ ಓದಿ:ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ಶ್ರುತಿ ಹಾಸನ್?
ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸುವ ಅದ್ಭುತ ನಟಿ ಅನುಷ್ಕಾ. ಅದಕ್ಕೆ ತಾಜಾ ಉದಾಹರಣೆ ಅಂದ್ರೆ ಬಾಹುಬಲಿ, ಅರುಂಧತಿ ಅಂತಹ ಸಿನಿಮಾಗಳೇ ಸಾಕ್ಷಿ. ಹಾಗಾಗಿ ಇದೇ ರೀತಿಯ ವಿಭಿನ್ನ ಎಂದೆಸಿದ ಸಿನಿಮಾಗಳಿಗೆ ನಟಿ ಓಕೆ ಎಂದಿದ್ದಾರೆ. ಬರೋಬ್ಬರಿ ಅರ್ಧ ಡಜನ್ ಸಿನಿಮಾ ಅನುಷ್ಕಾ ಕೈಯಲ್ಲಿವೆ. ಇದನ್ನೂ ಓದಿ:ಮೊದಲ ವರ್ಷದ ಎಂಗೇಜ್‌ಮೆಂಟ್ ಆ್ಯನಿವರ್ಸರಿ ಸಂಭ್ರಮದಲ್ಲಿ ಶೋಭಾ ಶೆಟ್ಟಿ
‘ಘಾಟಿ’ ಸಿನಿಮಾ, ಮತ್ತೊಂದು ಮಲಯಾಳಂನ ‘ಕಥನಾರ್’ ಚಿತ್ರದ ರಿಲೀಸ್‌ಗೆ ಸಜ್ಜಾಗಿದೆ. ತೆಲುಗಿನಲ್ಲಿ 3 ಸಿನಿಮಾ, ತಮಿಳಿನಲ್ಲಿ 2 ಸಿನಿಮಾ, ಮಲಯಾಳಂನ 2 ಚಿತ್ರಗಳಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದರ ಪೈಕಿ ಒಂದು ಪ್ರಾಜೆಕ್ಟ್‌ನಲ್ಲಿ ಪ್ರಭಾಸ್ ಜೊತೆ ಮತ್ತೊಮ್ಮೆ ಸ್ವೀಟಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಜೋಡಿಯ ಸಿನಿಮಾಗೆ ಪ್ರತಿಷ್ಠಿತ ಸಂಸ್ಥೆಯೊಂದು ನಿರ್ಮಾಣಕ್ಕೆ ಸಾಥ್ ಕೊಟ್ಟಿದೆ ಎಂದು ಹೇಳಲಾಗ್ತಿದೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಸಿಗಲಿದೆಯಂತೆ. ಈ ಬಗ್ಗೆ ಚಿತ್ರತಂಡ ಸ್ಪಷ್ಟಪಡಿಸುವವರೆಗೂ ಕಾದುನೋಡಬೇಕಿದೆ.
ಕಡೆಯದಾಗಿ 2023ರಲ್ಲಿ ತೆರೆಕಂಡ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಚಿತ್ರದಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದರು. ಈಗ ಬ್ಯಾಕ್ ಟು ಬ್ಯಾಕ್ 7 ಚಿತ್ರಗಳು ಒಪ್ಪಿಕೊಂಡಿದ್ದಾರೆ ಎಂದು ಕೇಳಿ ನಟಿಯ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.