ಟಾಲಿವುಡ್ (Tollywood) ನಟ ಬಾಲಯ್ಯ (Balayya) ಸಿನಿಮಾ ಜೊತೆಗೆ ʻಅನ್ಸ್ಟಾಪಬಲ್ʼ ಎಂಬ ಶೋ ಕೂಡ ನಡೆಸಿಕೊಡುತ್ತಾರೆ. ಸ್ಟಾರ್ ತಾರೆಯರ ಸಂದರ್ಶನ ಮಾಡಿ, ಅವರ ಕುರಿತು ಅಚ್ಚರಿಯ ಮಾಹಿತಿಯನ್ನ ರಿವೀಲ್ ಮಾಡುತ್ತಾರೆ. ಈ ಶೋಗೆ (Actor Prabhas) ಪ್ರಭಾಸ್ ಕೂಡ ಸಾಥ್ ನೀಡಿದ್ದು, ತಮ್ಮ ಮದುವೆಯ ಬಗ್ಗೆ ನಟ ಬಾಯ್ಬಿಟ್ಟಿದ್ದಾರೆ.
Advertisement
ತೆಲುಗು ಚಿತ್ರರಂಗದ ಲೆಜೆಂಡ್ ಬಾಲಕೃಷ್ಣ ʻಅಖಂಡʼ ಸಕ್ಸಸ್ ನಂತರ ಸಿನಿಮಾ ಶೂಟಿಂಗ್, ತಾರೆಯರ ಸಂದರ್ಶನ ಅಂತಾ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಪ್ರಭಾಸ್ ಜೊತೆಗಿನ ಸಂದರ್ಶನದ ತುಣುಕು ಸಖತ್ ಸದ್ದು ಮಾಡುತ್ತಿದೆ. ಬಾಲಯ್ಯ ನಿರೂಪಣೆಯ ಅನ್ಸ್ಟಾಪಬಲ್ ಶೋಗೆ ಅತಿಥಿಯಾಗಿ ಬಾಹುಬಲಿ ನಟ ಪ್ರಭಾಸ್ ಭಾಗವಹಿಸಿದ್ದಾರೆ. ಅವರ ವಯಸ್ಸು 43 ಆದ್ರೂ ಎಲ್ಲರೂ ಕೇಳೋ ಪ್ರಶ್ನೆ ಮದುವೆ ಯಾವಾಗ ಅಂತಾ? ಹಾಗಾಗಿ ಈ ಬಗ್ಗೆ ಬಾಲಯ್ಯ, ಪ್ರಭಾಸ್ ಅವರನ್ನ ನೇರವಾಗಿ ಮದುವೆ ಯಾವಾಗ ಎಂದಿದ್ದಾರೆ.
Advertisement
Advertisement
ಈ ಹಿಂದಿನ ಶೋನಲ್ಲಿ ನಟ ಶರ್ವಾನಂದ್ಗೆ ಮದುವೆ ಯಾವಾಗ ಅಂತಾ ಕೇಳಲಾಗಿತ್ತು. ಆಗ ಪ್ರಭಾಸ್ ಮದುವೆ ಆದ ಮೇಲೆ ಎಂಬ ಉತ್ತರ ನೀಡಿದ್ದರು. ಇದೀಗ ಇದೇ ಪ್ರಶ್ನೆಯನ್ನು ನಿಮಗೆ ಕೇಳುತ್ತೇನೆ. ನಿಮ್ಮ ಮದುವೆ ಯಾವಾಗ ಎಂದು, ಅದಕ್ಕೆ ಸಲ್ಮಾನ್ ಖಾನ್ ಮದುವೆ ಆದ್ಮೇಲೆ ನನ್ನ ಮದುವೆ ಎಂದು ಪ್ರಭಾಸ್ ಉತ್ತರ ನೀಡಿದ್ದಾರೆ. ಈ ಮಾತು ಕೇಳಿ ಅಲ್ಲಿರುವ ಅಭಿಮಾನಿಗಳು ನಕ್ಕಿದ್ದಾರೆ. ಇದನ್ನೂ ಓದಿ: `ಕಾಂತಾರ’ ಎಫೆಕ್ಟ್, ಭೂತಕೋಲ ನೋಡಲು ಧರ್ಮಸ್ಥಳಕ್ಕೆ ಬರಲಿದ್ದಾರೆ ನಟ ವಿಶಾಲ್
Advertisement
ಸದ್ಯ ಪ್ರಭಾಸ್ (Prabhas) ಹೆಸರು ನಟಿ ಕೃತಿ ಸನೂನ್ (Kriti Sanon) ಜೊತೆ ಕೇಳಿ ಬರುತ್ತಿದೆ. ಇಬ್ಬರು ಡೇಟಿಂಗ್ (Dating) ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಿಬ್ಬರ ಮದುವೆಯ ಗುಡ್ ನ್ಯೂಸ್ ಸಿಗಲಿ ಅಂತಾ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.