ಟಾಲಿವುಡ್ ನಟ ಪ್ರಭಾಸ್ (Prabhas) ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು. ವಿಶೇಷ ವ್ಯಕ್ತಿಯ ಆಗಮನವಾಗುತ್ತಿದೆ ಎಂದು ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿದ್ದರು. ಎಲ್ಲರೂ ನಟನ ಮದುವೆ ಮ್ಯಾಟರ್ ಎಂದೇ ಭಾವಿಸಿದ್ದರು. ಈಗ ಅಸಲಿ ವಿಚಾರ ಏನು ಎಂಬುದನ್ನು ಪ್ರಭಾಸ್ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಬುಲೆಟ್ ರೈಲು ಎಲ್ಲಿ- ಅಟಲ್ ಸೇತುವನ್ನು ಹೊಗಳಿದ್ದ ರಶ್ಮಿಕಾಗೆ ಅಂಜಲಿ ನಿಂಬಾಳ್ಕರ್ ಪ್ರಶ್ನೆ
‘ಡಾರ್ಲಿಂಗ್ಸ್.. ಕೊನೆಗೂ ನಮ್ಮ ಜೀವನಕ್ಕೆ ವಿಶೇಷವಾದ ವ್ಯಕ್ತಿಯೊಬ್ಬರು ಪ್ರವೇಶಿಸಲಿದ್ದಾರೆ. ಕಾಯುತ್ತಾ ಇರಿ ಎಂದು ಪ್ರಭಾಸ್ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಎಲ್ಲರೂ ಮದುವೆ ಬಗ್ಗೆ ಸಿಹಿಸುದ್ದಿ ಕೊಡಲು ಪ್ರಭಾಸ್ ರೆಡಿಯಾಗಿದ್ದಾರೆ ಎಂದು ಭಾವಿಸಿದ್ದರು. ಆದರೆ ಈಗ ನಟ ನೀಡಿರುವ ಮಾಹಿತಿನೇ ಬೇರೆ.
‘ಡಾರ್ಲಿಂಗ್ಸ್.. ನಿಮಗೆಲ್ಲಾ ನನ್ನ ‘ಬುಜ್ಜಿ’ಯನ್ನು ತೋರಿಸಲು ಕಾತರದಿಂದ ಕಾಯುತ್ತಿದ್ದೇನೆ’ ಎಂದು ಪ್ರಭಾಸ್ ಬರೆದುಕೊಂಡಿದ್ದಾರೆ. ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಪ್ರಚಾರಕ್ಕಾಗಿ ‘ಬುಜ್ಜಿ’ ಎಂಬ ಹೊಸ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಇದೇ ಮೇ 18ರಂದು ಸಂಜೆ 5ಕ್ಕೆ ಘೋಷಿಸಲಿದ್ದಾರೆ. ಸಿನಿಮಾ ಪ್ರಚಾರಕಾಗಿ ಚಿತ್ರತಂಡ ಈ ತಂತ್ರ ರೂಪಿಸಿದೆ. ವಿಶೇಷ ವ್ಯಕ್ತಿ ಎಂದು ಹೇಳಿ ಸಿನಿಮಾಗಾಗಿ ಹೊಸ ರೀತಿಯ ಪ್ರಚಾರ ಮಾಡಿದ್ದಾರೆ.
ಕಲ್ಕಿ 2898 ಎಡಿ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone) ಜೊತೆ ಅಮಿತಾಭ್ ಬಚ್ಚನ್, ಕಮಲ್ ಹಾಸನ್ ನಟಿಸಿದ್ದಾರೆ. ಕಲ್ಕಿ ಸಿನಿಮಾಗಾಗಿ ಕನ್ನಡದಲ್ಲೂ ದೀಪಿಕಾ ಡಬ್ಬಿಂಗ್ ಮಾಡಿದ್ದಾರೆ. ಇದೇ ಜೂನ್ 27ಕ್ಕೆ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.