ಪ್ರಭಾಸ್, ರಾಣಾ ಫೈಟಿಂಗ್, ಅನುಷ್ಕಾ ರೋಮ್ಯಾಂಟಿಕ್ ಸೀನ್: ಬಾಹುಬಲಿ ಟ್ರೇಲರ್ ರಿಲೀಸ್

Public TV
2 Min Read
bahubali ccc copy

ಹೈದರಾಬಾದ್: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಬಾಹುಬಲಿ-2 ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ದೇಶದ ಪ್ರಮುಖ ನಗರದ ಥಿಯೇಟರ್‍ಗಳಲ್ಲಿ ಬಾಹುಬಲಿ-2 ಚಿತ್ರದ ಆಫೀಶಲ್ ಟ್ರೇಲರನ್ನು ರಾಜಮೌಳಿ ಸಾರಥ್ಯದ ಚಿತ್ರತಂಡ ರಿಲೀಸ್ ಮಾಡಿದೆ. ಇಂದು ಸಂಜೆ 5 ಅಥವಾ 6ಗಂಟೆಗೆ ಬಾಹುಬಾಲಿ-2 ಟ್ರೈಲರ್ ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಇಂದು ಬೆಳಗ್ಗೆಯೇ ಟ್ರೇಲರ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ.

ಕಟ್ಟಪ್ಪ ಬಾಹುಬಲಿಯನ್ನು ಕೊಲ್ಲುತ್ತಿರುವ ದೃಶ್ಯ, ಅನುಷ್ಕಾ ಶೆಟ್ಟಿ ಪ್ರಭಾಸ್ ರೊಮ್ಯಾಂಟಿಕ್ ಸೀನ್, ರಾಣಾ ದಗ್ಗುಬಾಟಿ ಜೊತೆಗಿನ ಯುದ್ದದ ದೃಶ್ಯ ಟ್ರೇಲರ್ ನಲ್ಲಿದೆ.

ಬಾಹುಬಾಲಿಯ ಮೊದಲ ಭಾಗದ ಟ್ರೇಲರ್ ಪ್ರಾಮುಖ್ಯತೆಯನ್ನು ಇದಕ್ಕೂ ನೀಡಲಾಗಿದೆ. ಮೊದಲ ಭಾಗದ ಚಿತ್ರದ ಟ್ರೇಲರ್ ಗೆ ಬಳಸಿದ ತಂತ್ರಜ್ಞಾನ ಮತ್ತು ಫ್ಯಾಶನ್ ಈ ಟ್ರೇಲರ್ ನಲ್ಲಿ ಬಳಸಿದ್ದೇವೆ ಎಂದು ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.

ಮಹಾಶಿವರಾತ್ರಿ ಪ್ರಯುಕ್ತ ಬಾಹುಬಲಿ ಕನ್ ಕ್ಲೂಷನ್ ಟೀಸರ್ ಬಿಡುಗಡೆಯಾಗಿತ್ತು.‘ಬಲಿ ಬಲಿ ಬಲಿ ರಾ ಬಲಿ ಸಾಹೋರೆ ಬಾಹುಬಲಿ’ ಅನ್ನೋ ಹಾಡಿನ ತುಣುಕು ಹೊಂದಿರುವ ಟೀಸರ್ ವಿಡಿಯೋವನ್ನು ರಾಜಮೌಳಿ ಟ್ವೀಟ್ ಮಾಡಿದ್ದರು. ಈ ಟೀಸರ್‍ನಲ್ಲಿ ಪ್ರಭಾಸ್ ಆನೆಯ ಮೇಲೆ ನಿಂತುಕೊಂಡಿರುವ ದೃಶ್ಯವಿತ್ತು.

ಇದ್ನನೂ ಓದಿ: ಬಾಹುಬಲಿಯನ್ನು ಕೊಂದಿದ್ದು ಯಾಕೆ: ಕೊನೆಗೂ ಉತ್ತರ ಹೇಳಿದ ಕಟ್ಟಪ್ಪ!

ಜನವರಿ 26ರಂದು ರಾಜಮೌಳಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಒಟ್ಟಿಗೆ ನಿಂತುಕೊಂಡು ಬಾಣ ಬಿಡುತ್ತಿರುವ ಪೋಸ್ಟರ್ ಬಿಡುಗಡೆ ಮಾಡಿದ್ದರು. ಇದಕ್ಕೂ ಮೊದಲು ರಾಣಾ ದಗ್ಗುಬಾಟಿ ಮತ್ತು ಪ್ರಭಾಸ್ ಅವರ ಪೋಸ್ಟರ್ ಬಿಡುಗಡೆ ಮಾಡಿದ್ದರು.

ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬರೆದ ಕಥೆಯಾಧರಿತ ಬಾಹುಬಲಿ ಭಾಗ 2 ಚಿತ್ರದಲ್ಲಿ ಪ್ರಭಾಸ್, ರಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ಸತ್ಯರಾಜ್, ತಮನ್ನಾ, ರಮ್ಯಕೃಷ್ಣ ಅಭಿನಯಿಸಿದ್ದು ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ಏಪ್ರಿಲ್ 28 ರಂದು ತೆರೆಕಾಣಲಿದೆ.

ಬಾಹುಬಲಿ ದಿ ಬಿಗಿನಿಂಗ್ ಚಿತ್ರ 2015ರ ಜುಲೈ 10ರಂದು ಬಿಡುಗಡೆಯಾಗಿತ್ತು. ಅಂದಾಜು 120 ಕೋಟಿ ಬಜೆಟ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 650 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು.

ಸಿನಿಮಾಗಳಿಗೆ‌ ಟ್ರೇಲರ್ ರಿಲೀಸ್ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಟ್ರೇಲರ್ ರಿಲೀಸ್ ಗೆ ರಾಜಮೌಳಿ ಸಣ್ಣ ಪ್ರೋಮೋ ರಿಲೀಸ್ ಮಾಡಿದ್ದರು. ಟ್ರೇಲರ್ ಗೆ ಪ್ರೋಮೋ ರಿಲೀಸ್ ಮಾಡಿದ್ದು ಭಾರತೀಯ ಚಿತ್ರರಂಗದಲ್ಲಿ ಮೊದಲು ಎಂದು ಹೇಳಲಾಗುತ್ತಿದೆ. ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವ ಬಾಹುಬಲಿ ಟ್ರೇಲರ್ ಅನ್ನು ನೀಡಲಾಗಿದೆ.

bahubali 22 copy

rana baahubali

bahubali c copy

bahubali anushka copy

 

bahubali cc copy

bahubali 1

bahubali 2 1

Baahubali prabhas 768x384 1

bahubali 2

bahubali 2

 

Share This Article
Leave a Comment

Leave a Reply

Your email address will not be published. Required fields are marked *