ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಸಿ.ಕೆ.ರಾಮಮೂರ್ತಿರವರ ನೇತೃತ್ವದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ನಾಗರತ್ನ ರಾಮಮೂರ್ತಿರವರು 1,000 ಮಹಿಳೆಯರಿಗೆ ಗೌರಿ ಬಾಗಿನ ವಿತರಿಸಿದರು.
Advertisement
ಸಮಾರಂಭದಲ್ಲಿ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ತಾರಾ ಅನುರಾಧ, ಚಲನಚಿತ್ರ ನಟಿ ಮಾಳವಿಕಾ, ಗರುಡಾ ಫೌಂಡೇಷನ್ ಸಂಸ್ಥಾಪಕಿ ಮೇದಿನಿ ಗುರುಡಾಚಾರ್ ರವರು ಪಾಲ್ಗೊಂಡಿದ್ದರು. ಇದನ್ನೂ ಓದಿ: ದಶಪಥ ರಸ್ತೆಗೆ ಪ್ಲ್ಯಾನಿಂಗ್ ಕೊಟ್ಟವರಿಗೆ ಪದ್ಮಭೂಷಣ ಕೊಡಿ- ಸಿಎಂಗೆ ಡಿಕೆಶಿ ಟಾಂಗ್
Advertisement
Advertisement
ಇದೇ ಸಂದರ್ಭದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ನಾಗರತ್ನ ರಾಮಮೂರ್ತಿರವರು ಮಾತನಾಡಿ ಕಳೆದ 10 ವರ್ಷಗಳಿಂದ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಗೌರಿ ಬಾಗಿನ ವಿತರಣೆ ಮಾಡಲಾಗುತ್ತಿದೆ ಎಂದರು. ಇದನ್ನೂ ಓದಿ: ಮನೆಯೊಂದರಲ್ಲಿ ಸಾಮೂಹಿಕ ನಮಾಜ್ ಮಾಡಿದ್ದಕ್ಕೆ ಕೇಸ್ – ಪ್ರಕರಣ ರದ್ದುಗೊಳಿಸಿದ ಪೊಲೀಸರು
Advertisement
ಮಹಿಳೆಯರಿಗೆ ತವರು ಮನೆಯಿಂದ ಕೊಡುವ ಉಡುಗೂರೆ ಬಹು ದೊಡ್ಡ ಕೊಡುಗೆಯಾಗಿದೆ. ಜಯನಗರ ವಿಧಾನಸಭಾ ಕ್ಷೇತ್ರದ ಮಹಿಳೆಯರು ಒಂದು ಕುಟುಂಬದಂತೆ ಇಂದು ಗೌರಿ ಹಬ್ಬದ ದಿನ ಎಲ್ಲರು ಒಟ್ಟಾಗಿ ಸೇರಿ ಸಂಭ್ರಮಾಚರಣೆ ಮಾಡುವ ದಿನ. ಸಕಲ ಸಂಕಷ್ಟಗಳು ನಿವಾರಣೆಯಾಗಲಿ, ಎಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಲಿ ಎಂದು ಗೌರಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗೌರಿ ಬಾಗಿನದಲ್ಲಿ ಅರಿಶಿನ, ಕುಂಕುಮ ಮತ್ತು ಬಳೆ, ಆಹಾರ ಧಾನ್ಯಗಳ ಶುಭ ಕಾರ್ಯಕ್ಕೆ ಬಳಸುವ ವಸ್ತುಗಳನ್ನು ನೀಡಿ, ಶುಭ ಹಾರೈಸಲಾಗುತ್ತದೆ ಎಂದು ಹೇಳಿದರು.