ಆನ್‌ಲೈನ್‌ನಲ್ಲಿ ಬುಕ್‌ ಮಾಡಿ – ಪಾರ್ಸೆಲ್ ಪಡೆಯಲು ಮನೆಗೆ ಬರ್ತಾರೆ ಪೋಸ್ಟ್‌ಮ್ಯಾನ್‌!

Public TV
2 Min Read
Bagalkote district selected in the country to provide online postal service facility on a trial basis 2

– ಅಂಚೆ ಇಲಾಖೆಯಿಂದ ಆನ್‌ಲೈನ್‌ ಸೇವೆ
–  ಪ್ರಾಯೋಗಿಕ ಸೇವೆಗೆ ದೇಶದಲ್ಲೇ ಬಾಗಲಕೋಟೆ ಜಿಲ್ಲೆ ಆಯ್ಕೆ

ಬಾಗಲಕೋಟೆ: ಭಾರತೀಯ ಅಂಚೆ ಇಲಾಖೆಯ (Department of Post) ಹಲವು ಸೇವೆಗಳು ಈಗ ಆನ್‌ಲೈನ್‌ನಲ್ಲಿ (Online) ದೊರೆಯಲಿದ್ದು, ಪ್ರಾಯೋಗಿಕವಾಗಿ ಈ ಸೌಲಭ್ಯ ಒದಗಿಸಲು ದೇಶದಲ್ಲೇ ಬಾಗಲಕೋಟೆ (Bagalkote) ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ.

ಅಂಚೆ ಇಲಾಖೆಯಿಂದ ಹೊಸ ತಂತ್ರಾಂಶ ಅಳವಡಿಸಿ ಸರಕು, ಪತ್ರಗಳ ರವಾನೆಯನ್ನು ಆನ್‌ಲೈನ್ ಸೌಲಭ್ಯದಡಿ ಒದಗಿಸಲಾಗುತ್ತಿದೆ. ಮೈಸೂರು ವಿಭಾಗ ಹಾಗೂ ಬಾಗಲಕೋಟೆ ವಿಭಾಗಗಳು ಪ್ರಾಯೋಗಿಕವಾಗಿ ಸೌಲಭ್ಯ ಒದಗಿಸಲು ಆಯ್ಕೆಯಾಗಿವೆ. ಈ ವಿಭಾಗಗಳಲ್ಲಿನ ಯಶಸ್ಸು ನೋಡಿಕೊಂಡು ರಾಷ್ಟ್ರಾದ್ಯಂತ ಸೇವೆ ಒದಗಿಸಲು ಇಲಾಖೆ ಯೋಜನೆ ರೂಪಿಸಿದೆ.

ಇಲಾಖೆ ಅಡ್ವಾನ್ಸ್‌ಡ್ ಪೋಸ್ಟಲ್ ಟೆಕ್ನಾಲಜಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶದಡಿ ಹೊಸ ಸೌಲಭ್ಯ ಒದಗಿಸಲಾಗುತ್ತಿದೆ. ಈಗ ಬುಕ್ಕಿಂಗ್ ಹಾಗೂ ಡೆಲಿವರಿ ಸೌಲಭ್ಯ ಆನ್‌ಲೈನ್ ಆಗಲಿವೆ. ಗ್ರಾಹಕರು ಅಂಚೆ ಮೂಲಕ ವಸ್ತುವೊಂದನ್ನು ಕಳಿಸಬೇಕಿದ್ದರೆ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ನಿಗದಿತ ಶುಲ್ಕ ಪಡೆದು ಈ ಸೇವೆ ಒದಗಿಸಲಾಗುತ್ತಿದೆ. ಬುಕ್ ಮಾಡಿದ ನಂತರ ಪೋಸ್ಟ್‌ಮನ್ ಮನೆಗೆ ಬಂದು ಪಾರ್ಸೆಲ್ ಪಡೆಯುತ್ತಾರೆ. ಪಾರ್ಸಲ್ ಕಳುಹಿಸಿದ ನಂತರ ಗ್ರಾಹಕರಿಗೆ ಮಾಹಿತಿ ದೊರೆಯುತ್ತದೆ. ಈ ಸೌಲಭ್ಯದಡಿ ತಮ್ಮ ಪಾರ್ಸೆಲ್ ಎಲ್ಲಿದೆ ಎಂಬ ಬಗ್ಗೆ ಗ್ರಾಹಕರು ಮಾಹಿತಿ ಪಡೆಯಬಹುದು. ಇದನ್ನೂ ಓದಿ: ದೇಶದಲ್ಲಿ ಇಂಗ್ಲಿಷ್ ಮಾತನಾಡುವವರು ಶೀಘ್ರದಲ್ಲೇ ನಾಚಿಕೆ ಪಡುತ್ತಾರೆ: ಅಮಿತ್ ಶಾ

Bagalkote district selected in the country to provide online postal service facility on a trial basis 1 1

ಪಾರ್ಸೆಲ್‌ ತಲುಪಿಸಿದ ನಂತರ ಪೋಸ್ಟ್‌ಮನ್ ಗ್ರಾಹಕರ ಡಿಜಿಟಲ್ ಸಹಿ ಪಡೆಯಲಿದ್ದಾರೆ. ಪಾರ್ಸೆಲ್‌ ತಲುಪಿದ ಬಗ್ಗೆ ಕಳುಹಿಸಿದವರಿಗೂ ಸಂದೇಶ ರವಾನೆಯಾಗುತ್ತದೆ. ಸಾಮಾನ್ಯ ಪತ್ರಗಳು, ಲಕೋಟೆಗಳನ್ನು ಕಳುಹಿಸಲು ಭವಿಷ್ಯದಲ್ಲಿ ಬಾರ್ ಕೋಡ್ ಸೌಲಭ್ಯ ಒದಗಿಸಲಾಗುತ್ತದೆ. ಈ ಸೇವೆಯಡಿ ತಮ್ಮ ಲಕೋಟೆ, ಪತ್ರ ಯಾವ ಸ್ಥಳದಲ್ಲಿದೆ ಎಂಬ ಮಾಹಿತಿಯನ್ನು ಗ್ರಾಹಕರು ಆನ್‌ ಲೈನ್ ಮೂಲಕ ಪಡೆಯಬಹುದು. ಇದನ್ನೂ ಓದಿ: ಬಮೂಲ್ ಅಧ್ಯಕ್ಷರಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಅವಿರೋಧ ಆಯ್ಕೆ

ಜಿಲ್ಲೆಯಲ್ಲಿ ಜೂನ್ 17 ರಿಂದ ಹೊಸ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯಾದ್ಯಂತ ನಗರ, ಗ್ರಾಮೀಣ ಪ್ರದೇಶ ಸೇರಿದಂತೆ 46 ಅಂಚೆ ಕಚೇರಿಗಳಲ್ಲಿ ಸೌಲಭ್ಯ ದೊರೆಯಲಿದೆ. ಎಲ್ಲ ಕಚೇರಿಗಳು ಗಣಕೀಕರಣಗೊಂಡಿದ್ದು, ಸೌಲಭ್ಯ ಜಾರಿಗೆ ಸಿದ್ಧತೆ ಪೂರ್ಣಗೊಂಡಿದೆ. ಉತ್ತಮ ನೆಟ್ವರ್ಕ್, ತಾಂತ್ರಿಕ ತರಬೇತಿ ಪಡೆದ ಸಿಬ್ಬಂದಿ ಹಾಗೂ ಮೂಲ ಸೌಕರ್ಯವಿರುವ ಕಾರಣ ಜಿಲ್ಲೆ ಪೈಲೆಟ್ ಯೋಜನೆಗೆ ಆಯ್ಕೆಯಾಗಿದೆ.

Share This Article