ಬಾಗಲಕೋಟೆ: ಪೊಲೀಸರೆಂದು ನಂಬಿಸಿ, ಚಿನ್ನ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ ನಡೆದಿದೆ.
ವಿದ್ಯಾಗಿರಿಯ 18 ನೇ ಕ್ರಾಸ್‍ನ ಅಯೋಧ್ಯಾ ಹೋಟೆಲ್ ಎದುರಿಗೆ ಈ ಘಟನೆ ನಡೆದಿದ್ದು, ವಸಂತ ಕೋನರೆಡ್ಡಿ ಮತ್ತು ವಿಠ್ಠಲ ಬೆನಕಟ್ಟಿ ಎಂಬುವರಿಂದ ಚಿನ್ನ ದೋಚಿ ಪರಾರಿಯಾಗಿದ್ದಾರೆ. ನಡೆದುಕೊಂಡು ಹೋದಾಗ ಬೈಕ್ ಮೇಲೆ ಬಂದ ಇಬ್ಬರು ಅಪರಿಚಿತರು ನಾವು ಪೊಲೀಸರೆಂದು ಐಡಿ ಕಾರ್ಡ್ ತೋರಿಸಿ 45 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದಾರೆ.
ಈ ದಾರಿಯಲ್ಲಿ ದರೋಡೆ ಆಗುತ್ತಿದೆ. ನೀವು ಈ ದಾರಿಯಲ್ಲಿ ಹೋಗಬೇಡಿ ಎಂದು ಬೇರೆ ದಾರಿಯಲ್ಲಿ ಹೋಗಲು ಹೇಳಿದ್ದಾರೆ. ಚಿನ್ನ ಒಡವೆ ಧರಿಸಿ ಇಲ್ಲಿ ಹೋಗಬೇಡಿ ಚಿನ್ನ ಬಿಚ್ಚಿ ಜೇಬಿನಲ್ಲಿ ಇಟ್ಟಿಕೊಂಡು ಹೋಗಿ ಎಂದು ಹೇಳಿದ್ದಾರೆ.
ಕಳ್ಳರ ಮಾತಿನಂತೆ ವಸಂತ ಕೋನರೆಡ್ಡಿ ಮತ್ತು ವಿಠ್ಠಲ ಬೆನಕಟ್ಟಿ ಚಿನ್ನ ತೆಗೆಯುತ್ತಿದ್ದಾಗ ಅದನ್ನು ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ನವನಗರ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.