ಬಾಗಲಕೋಟೆ: ಅಯೋಧ್ಯೆ (Ayodhya) ರಾಮಮಂದಿರ (Rama Mandir) ಮಂಡಲರಾಧನೆ ಪೂಜೆಗೆ ಜಿಲ್ಲೆಯ ಮುಧೋಳ (Mudhol) ನಗರದ ಅರ್ಚಕರನ್ನು ಆಯ್ಕೆ ಮಾಡಲಾಗಿದೆ.
ಮೂಲತಃ ಮುಧೋಳ ತಾಲೂಕಿನ ಮಾಚಕನೂರು ನಿವಾಸಿಯಾದ ಗುರುನಾಥ ಜೋಷಿ (Gurunath Joshi) ಅವರು ರಾಮಮಂದಿರದ ಮಂಡಲರಾಧನೆ ಆಯ್ಕೆಯಾಗಿದ್ದಾರೆ. ಸದ್ಯ ಮೂಧೋಳ ನಗರದಲ್ಲಿ ವಾಸವಿದ್ದಾರೆ. ಇವರು ಮುರಗೋಡ ಚಿದಂಬರ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಯನ ಮಾಡಿದ್ದು, ಶುಕ್ಲ ಯಜುರ್ವೇದ ಅಧ್ಯಯನವನ್ನು ಮಾಡಿದ್ದಾರೆ. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳ ಮೂಲಕ ಜೋಷಿಯವರು ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಪಲ್ಸ್ ಪೋಲಿಯೋ ಯಾವಾಗ? – ಗೊಂದಲಕ್ಕೆ ಒಳಗಾಗಿದ್ದ ಪೋಷಕರಿಗೆ ಗುಡ್ ನ್ಯೂಸ್
Advertisement
Advertisement
ಜೋಷಿಯವರು ಪ್ರಸ್ತುತ ಮುಧೋಳ ನಗರದಲ್ಲಿ ಸದ್ಗುರು ಶ್ರೀ ಚಿದಂಬರ ವೈದಿಕ ಜ್ಯೋತಿಷ್ಯಾಲಯವನ್ನು ನಡೆಸುತ್ತಿದ್ದಾರೆ. ಮೂಲತಃ ಅರ್ಚಕ ವೃತ್ತಿ ಕುಟುಂಬದ ಹಿನ್ನೆಲೆ ಹೊಂದಿರುವ ಇವರು ಈ ಹಿಂದೆ ನಗರದ ಸಾಯಿ ಬಾಬಾ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಇದನ್ನೂ ಓದಿ: ನಿಮಗೆ ಕೊಟ್ಟ ಕೆಲಸ ಮಾತ್ರ ಪೂರ್ಣ ಮಾಡಿ – ಟಾರ್ಗೆಟ್ 28 ಗೆಲ್ಲಲು ಶಾ ಕ್ಲಾಸ್
Advertisement
Advertisement
ಅಯೋಧ್ಯೆ ರಾಮಮಂದಿರದಲ್ಲಿ 48 ದಿನಗಳ ಕಾಲ ಮಂಡಲಾರಾಧನೆ ನಡೆಯಲಿದೆ. ಇದೇ ಫೆ.16 ಮತ್ತು 16 ರಂದು ನಡೆಯುವ ಎರಡು ದಿನಗಳ ಮಂಡಲಾರಾಧನೆ ಪೂಜೆಯಲ್ಲಿ ಗುರುನಾಥ ಜೋಷಿಯವರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಕರೆಮ್ಮ ನಾಯಕ್ ಪಿ.ಎಗಳ ಮೇಲೆ ಜಾತಿ ನಿಂದನೆ ಕೇಸ್ – ರೊಚ್ಚಿಗೆದ್ದ ಶಾಸಕಿಯಿಂದ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ
ಈ ಕುರಿತು ಮಾತನಾಡಿದ ಅವರು, ಅಯೋಧ್ಯೆ ರಾಮಮಂದಿರ ಮಂಡಲಾರಾಧನೆಗೆ ನನ್ನನ್ನು ಆಯ್ಕೆ ಮಾಡಿದ್ದು ನಮ್ಮ ಪೂರ್ವಜರು ಮಾಡಿದ ಪುಣ್ಯ. ಇಂತಹ ಅವಕಾಶ ಸಿಕ್ಕಿದ್ದು ಎಂದು ಮರೆಯಲಾಗದು. ರಾಮದೇವರು ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಗುರುನಾಥ ಜೋಷಿಯವರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸುಮಲತಾಗೆ ಟಿಕೆಟ್ ನೀಡಿದ್ರೆ ಮಂಡ್ಯ ಗೆಲುವು ಸುಲಭ – ಅಮಿತ್ ಶಾ ಎದುರು ಬಿಜೆಪಿ ನಾಯಕರ ಬ್ಯಾಟಿಂಗ್