ದಿಸ್ಪುರ್: ಬಾಗಲಕೋಟೆ ಮೂಲದ ಬಿಎಸ್‍ಎಫ್ ಯೋಧ ಅಸ್ಸಾಂನಲ್ಲಿ ರಾತ್ರಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಅಶೋಕ್ ಮುಂಡಾಸ್(41) ಮೃತ ಬಿಎಸ್‍ಎಫ್ ಯೋಧ. ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದ ಅಶೋಕ್ ಅವರು ಬಿಎಸ್‍ಎಫ್ 31 ಬಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಸ್ಸಾಂನ ಬಾಂಗ್ಲಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಶನಿವಾರ ರಾತ್ರಿ ಸಿಡಿಲು ಬಡಿದ ರಭಸಕ್ಕೆ ಅಶೋಕ್ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಾಗತಿಕ ಪರಿಸರ ಉಪಕ್ರಮ ‘ಲೈಫ್ ಮೂವ್ಮೆಂಟ್’ಗೆ ಚಾಲನೆ ನೀಡಲಿರುವ ಮೋದಿ
ಅಶೋಕ್ ಅವರು ಬಿಎಸ್‍ಎಫ್‍ನಲ್ಲಿ 16 ವರ್ಷದಿಂದ ಸೇವೆಯಲ್ಲಿದ್ದು, ಈಗ ಪತ್ನಿ, ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಪಾರ್ಥೀವ ಶರೀರ ನಾಳೆ ಬೆಳಗ್ಗೆ ಗ್ರಾಮಕ್ಕೆ ಬರುವ ಸಾಧ್ಯತೆ ಇದೆ.