ಎಲ್ಲರಿಗೂ ಆರೋಗ್ಯದ ಮೇಲೆ ಕಾಳಜಿ ಹೆಚ್ಚು. ಅದರಲ್ಲಿಯೂ ಇತ್ತೀಚೆಗೆ ಬರುತ್ತಿರುವ ಸೋಂಕಿನಿಂದ ಹೆಚ್ಚು ಷೌಷ್ಟಿಕ ಆಹಾರ ತಿನ್ನುವುದು, ಕುಡಿಯುವುದು ತುಂಬಾ ಮುಖ್ಯ. ಮಕ್ಕಳಿಂದ ಹಿಡಿದು ದೊಡ್ಡವರೆಗೂ ‘ಬಾದಾಮ್ ಹಾಲು’ ಎಂದರೆ ಇಷ್ಟ. ಇದರಲ್ಲಿ ಹೆಚ್ಚು ಪ್ರೋಟೀನ್ ಇರುತ್ತೆ. ಅದಕ್ಕೆ ಇಂದು ಮನೆಯಲ್ಲಿ ಆರೋಗ್ಯಕರವಾದ ‘ಬಾದಾಮ್ ಮಿಲ್ಕ್ ಪೌಡರ್’ ಮಾಡುವುದು ಹೇಗೆ ಎಂಬ ರೆಸಿಪಿ ಇಲ್ಲಿದೆ.
Advertisement
ಬೇಕಾಗಿರುವ ಪದಾರ್ಥಗಳು:
* ಬಾದಾಮಿ – 1 ಕಪ್
* ಕೆಂಪು ಕಲ್ಸಕ್ಕರೆ – 1/2 ಕಪ್
* ಸಕ್ಕರೆ – 1/2 ಕಪ್
* ಹಾಲಿನ ಪುಡಿ – 1/2 ಕಪ್
* ಏಲಕ್ಕಿ – 8 ರಿಂದ 10
Advertisement
Advertisement
* ಅರಿಶಿನ – 1/4 ಟೀಸ್ಪೂನ್
* ಕೇಸರಿ – 1/4 ಟೀಸ್ಪೂನ್
* ಚಿಟಿಕೆ ಪಚ್ಚಾ ಕರ್ಪೂರ
* ಪಿಸ್ತಾ – 5 ರಿಂದ 10
Advertisement
ಮಾಡುವ ವಿಧಾನ:
* ಮಧ್ಯಮ ಉರಿಯಲ್ಲಿ ಒಂದು ಬಾಣಲಿಗೆ ಬಾದಾಮಿಯನ್ನು 2-3 ನಿಮಿಷಗಳ ಕಾಲ ಬಿಸಿ ಮಾಡಿ. ಸ್ವಲ್ಪ ಕಂದು ಬಣ್ಣ ಬರುವವರೆಗೂ ಹುರಿಯಿರಿ. ನಂತರ ಗ್ಯಾಸ್ ಆಫ್ ಮಾಡಿ
* ಮಿಕ್ಸಿ ಜಾರ್‌ಗೆ ಕೆಂಪು ಕಲ್ಸಕ್ಕರೆ, ಸಕ್ಕರೆ, ಕೇಸರಿ, ಅರಿಶಿನ ಪುಡಿ, ಪಚ್ಚಾ ಕರ್ಪೂರ, ಏಲಕ್ಕಿ ಮತ್ತು ಹಾಲಿಪುಡಿಯನ್ನು ಸೇರಿಸಿ ರುಬ್ಬಿ.
* ಹುರಿದಿಟ್ಟುಕೊಂಡಿದ್ದ ಬಾದಾಮಿ ತಂಪಾದ ಮೇಲೆ ಮಿಕ್ಸಿಯಲ್ಲಿದ್ದ ರುಬ್ಬಿದ ಮಿಶ್ರಣ ಜೊತೆ ಸೇರಿಸಿ ಮತ್ತೆ ನುಣ್ಣಗೆ ರುಬ್ಬಿ.
* ಕೊನೆಗೆ ಬಾದಾಮಿ ಪುಡಿಯ ಮೇಲೆ ಕಟ್ ಮಾಡಿದ ಪಿಸ್ತಾ ತುಂಡುಗಳನ್ನು ಮಿಶ್ರಣ ಮಾಡಿ.
ಮನೆಯಲ್ಲಿ ತಯಾರಿಸಿದ ಬಾದಾಮ್ ಹಾಲಿನ ಪುಡಿ ಸಿದ್ಧವಾಗಿದೆ. ಈ ಪುಡಿಯನ್ನು ಹಾಲಿನ ಜೊತೆಗೆ ದಿನ ಕೂಡಿದರೆ ಆರೋಗ್ಯಕ್ಕೆ ಒಳ್ಳೆಯದು.