ಬಾಲಿವುಡ್ ನಟ ವಿಕ್ಕಿ ಕೌಶಲ್, ತೃಪ್ತಿ ದಿಮ್ರಿ (Triptii Dimri), ಆಮಿ ವಿರ್ಕ್ ನಟನೆಯ ‘ಬ್ಯಾಡ್ ನ್ಯೂಸ್’ (Bad Newz) ಸಿನಿಮಾ ಇದೇ ಜು.19ರಂದು ಬಿಡುಗಡೆಯಾಗಲಿದೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಹಾಟ್ ಸಾಂಗ್‌ವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇನ್ನೂ ಚಿತ್ರದ 27 ಸೆಕೆಂಡ್‌ಗಳ ಕಿಸ್ಸಿಂಗ್ ದೃಶ್ಯಕ್ಕೆ ಸೆನ್ಸಾರ್ ಬೋರ್ಡ್ ಕತ್ತರಿ ಹಾಕಿದೆ.
ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಲಿಪ್‌ಲಾಕ್ ದೃಶ್ಯಗಳಿಗೆ ಕತ್ತರಿ ಹಾಕಿದೆ. ಈ ದೃಶ್ಯಗಳಲ್ಲಿ ಒಂದು 9 ಸೆಕೆಂಡುಗಳ ಕಾಲ ಕಿಸ್ಸಿಂಗ್ ಸೀನ್ ಇದ್ದರೆ, ಇನ್ನೆರಡು ದೃಶ್ಯಗಳಲ್ಲಿ 10 ಸೆಕೆಂಡುಗಳು ಮತ್ತು 8 ಸೆಕೆಂಡುಗಳು ಕಾಲ ಕಿಸ್ಸಿಂಗ್ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ:ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಬೆಚ್ಚಿಬಿದ್ದ ನಟಿ ಸುಚಿತ್ರಾ ಕೃಷ್ಣಮೂರ್ತಿ
View this post on Instagram
‘ಅನಿಮಲ್’ ಸಿನಿಮಾದ ಸಕ್ಸಸ್ ಬಳಿಕ ತೃಪ್ತಿ ದಿಮ್ರಿ ‘ಬ್ಯಾಡ್ ನ್ಯೂಸ್’ ಚಿತ್ರ ಒಪ್ಪಿಕೊಂಡಿದ್ದಾರೆ. ವಿಕ್ಕಿ ಕೌಶಲ್ (Vicky Kaushal) ಜೊತೆ ಮೊದಲ ಬಾರಿಗೆ ನಟಿಸಿದ್ದಾರೆ. ಚಿತ್ರದ ‘ತೌಬಾ ತೌಬಾ’ ಸಾಂಗ್ ಹಿಟ್ ಆದ ಬಳಿಕ ಇಬ್ಬರ ರೊಮ್ಯಾಂಟಿಕ್ ಸಾಂಗ್ ಕೂಡ ಪಡ್ಡೆಹುಡುಗರ ನಿದ್ದೆಗೆಡಿಸಿದೆ.
ಈ ಚಿತ್ರವನ್ನು ಆನಂದ್ ತಿವಾರಿ ನಿರ್ದೇಶನವನ್ನು ಮಾಡಿದ್ದಾರೆ. ಕರಣ್ ಜೋಹರ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಈ ಸಿನಿಮಾ ರಿಲೀಸ್‌ಗಾಗಿ ಪಡ್ಡೆಹುಡುಗರು ಎದುರು ನೋಡ್ತಿದ್ದಾರೆ.