ಮೆಟ್ರೋ ಸಿಟಿಗಳಲ್ಲಿರುವ ಬ್ಯಾಚುಲರ್‌ಗಳು ಸದಾ ಬ್ಯುಸಿನಲ್ಲೇ ಇರ್ತಾರೆ. ಅಡುಗೆ ಮಾಡೋದಕ್ಕೂ ಟೈಮ್ ಇರಲ್ಲ. ಅಡುಗೆ ಮಾಡಬೇಕಂದ್ರೆ ಗಂಟೆಗಟ್ಟಲೇ ಕೂರಬೇಕು ಅಂತ ಹೋಟೆಲ್, ಸಣ್ಣ ಸಣ್ಣ ಮೆಸ್‌ಗಳ ಮೇಲೆ ಡಿಪೆಂಡ್ ಆಗಿಬಿಡ್ತಾರೆ. ಮನಾನ್‌ವೆಜ್‌ನಲ್ಲೂ ಕ್ವಿಕ್ ಆಗಿ ಮಾಡುವ ರೆಸಿಪಿ ನಾವ್ ಹೇಳಿಕೊಡ್ತೇವೆ. ಅದ್ರಲ್ಲೂ ನಾನ್‌ವೆಜ್ ಪ್ರಿಯರು ಕ್ವಿಕ್ ಆಗಿ ಮಟನ್ ಫ್ರೈ ಮಾಡಬೇಕು ಅಂತಿದ್ರೆ ಈ ರೆಸಿಪಿಯನ್ನೊಮ್ಮೆ ಓದಿ…
ಬೇಕಾಗುವ ಪದಾರ್ಥಗಳು
ಮಟನ್ – 500 ಗ್ರಾಂ
ಅರಿಶಿನ ಪುಡಿ – ½ ಚಮಚ
ಮೆಣಸಿನ ಪುಡಿ – 1 ಚಮಚ
ಕೊತ್ತಂಬರಿ ಪುಡಿ – 1 ಚಮಚ
ಉಪ್ಪು – 1 ಚಮಚ
ನೀರು – 1.5 ಕಪ್
ಪ್ರತ್ಯೇಕವಾಗಿ ಮಸಾಲಾ ಮಾಡಲು ಎಣ್ಣೆ – 2 ಚಮಚ
ಜೀರಿಗೆ – 1 ಚಮಚ
ಸೋಂಪು – 1/2 ಚಮಚ
ದಾಲ್ಟಿನ್ನಿ – 1/2 ಇಂಚಿನ, 3 ಲವಂಗ
ಈರುಳ್ಳಿ – 2, 1 ಹಸಿಮೆಣಸಿನಕಾಯಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಟೊಮೆಟೋ – 2 ರುಬ್ಬಿದ ಪೇಸ್ಟ್
ಉಪ್ಪು – ಕಾಲು ಚಮಚ
ಅರಿಶಿನ ಪುಡಿ – ಕಾಲು ಚಮಚ
ಮೆಣಸಿನ ಪುಡಿ – ಕಾಲು ಚಮಚ
ಸಂಬಾರ ಪುಡಿ – 1 ಚಮಚ
ಗರಂ ಮಸಾಲ-ಮಟನ್ ಮಸಾಲ – 1 ಚಮಚ
ತಯಾರಿಸುವ ವಿಧಾನ:
* ಮಟನ್ ಅನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ಕುಕ್ಕರ್‌ನಲ್ಲಿ ಮಟನ್ ತುಂಡುಗಳನ್ನ ಉಪ್ಪು, ಅರಿಶಿನ ಪುಡಿ, ಮೆಣಸಿನ ಪುಡಿ ಮತ್ತು ಕೊತ್ತಂಬರಿ ಪುಡಿಯೊಂದಿಗೆ ತೆಗೆದುಕೊಳ್ಳಿ.
* ನಂತರ, ನೀರು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಮಟನ್ ಅನ್ನು 4-5 ಸೀಟಿ ಬರುವವರೆಗೆ ಬೇಯಿಸಿ.
* ಪ್ರತ್ಯೇಕ ಮಸಾಲಾ ಮಾಡಲು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ
* ಜೀರಿಗೆ, ಸೋಂಪು, ದಾಲ್ಚಿನ್ನಿ, ಲವಂಗ, ಈರುಳ್ಳಿ ಹಾಕಿ ಕಂದುಬಣ್ಣ ಬರುವವರೆಗೆ ಹುರಿಯಿರಿ.
* ನಂತರ ಹಸಿಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಬೇಯಿಸಿ. ಆ ನಂತರ ಟೊಮೆಟೋ ಪೇಸ್ಟ್ ಸೇರಿಸಿ.
* ಒಂದು ನಿಮಿಷ ಬೇಯಿಸಿದ ಬಳಿಕ ಉಪ್ಪು, ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಮಟನ್ ಮಸಾಲ ಅಥವಾ ಗರಂ ಮಸಾಲ ಸೇರಿಸಿ ಮತ್ತು ಎಣ್ಣೆ ಹೊರಹೋಗುವವರೆಗೆ ಮಸಾಲಾವನ್ನ ಬೇಯಿಸಿ.
* ಆ ಬಳಿಕ ನೀರಿನೊಂದಿಗೆ ಬೇಯಿಸಿದ ಮಟನ್ ಸೇರಿಸಿ. 5 ರಿಂದ 10 ನಿಮಿಷ ಬೇಯಿಸಿದ ಬಳಿಕ ಮಟನ್‌ಪ್ರೈ ಅನ್ನದೊಂದಿಗೆ ತಿನ್ನಲು ಸಿದ್ಧವಾಗಿರುತ್ತದೆ.



