ಮಕ್ಕಳು ಅಟವಾಡುತ್ತ ಕೆಲ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಇಲ್ಲೊಂದು ಮಗು (Baby) ಕೂಡ ಇದೇ ರೀತಿ ಮಾಡಿದೆ. ತನ್ನ ತಲೆಯನ್ನು ಚೇರ್ (Chair) ಕೈಗಳಿಗೆ ಹಾಕಿ ತಲೆ ತೆಗೆಯಲಾರದೆ ಪೋಷಕರಿಗೆ ಭಯ ಹುಟ್ಟಿಸಿದೆ.
ಮಗುವಿನ ತಲೆ ಚೇರ್ ಕೈಯಲ್ಲಿ ಸಿಲುಕಿಕೊಂಡು ಅದನ್ನು ಹೊರತೆಗೆಯಲು ಪೋಷಕರು ಪ್ರಯತ್ನಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ವೀಡಿಯೋದಲ್ಲಿ ಮಗು ತಲೆಯನ್ನು ಚಯರ್ನ ಕೈಗಳಿಗೆ ಹಾಕಿದೆ. ಆ ಬಳಿಕ ಹೊರ ತೆಗೆಯಲಾಗದೆ ಒದ್ದಾಡಿದೆ.
???? That's why Gynecologist are so important in life ! RESPECT !!???? pic.twitter.com/FaG3JHfo5c
— Dr. Nitin Shinde (@DrNitinShinde5) October 5, 2022
ಇತ್ತ ಮಗುವಿನ ತಲೆ ಚೇರ್ ಕೈನಲ್ಲಿ ಸಿಲುಕಿಕೊಂಡಂತೆ ಪೋಷಕರು ಹೇಗಪ್ಪ ತೆಗೆಯೋದು ಎಂದು ಹಲವು ಪ್ರಯತ್ನ ನಡೆಸಿದರು. ಆದರೆ ಆಪ್ರಯತ್ನವೆಲ್ಲ ವಿಫಲಗೊಂಡಿತು. ಕಡೆಗೆ ಮಗು ಯಾವ ರೀತಿ ತಲೆಯನ್ನು ಹಾಕದೆ ಅದೇ ಪೂರ್ತಿ ದೇಹವನ್ನು ನುಗ್ಗಿಸಿ ಮಗುವನ್ನು ಹೊರತೆಗೆದಿದ್ದಾರೆ.