– ಲತಾ ಮಂಗೇಶ್ಕರ್ ಹಾಡು ಹಾಡಿದ ಪೋರಿ
ಮುಂಬೈ: ಗಾಯಕಿ ರಾನು ಮೊಂಡಲ್ ಬಳಿಕ ಪುಟಾಣಿಯೊಂದ ತನ್ನ ಹಾಡುಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಎರಡು ವರ್ಷದ ಪ್ರಜ್ಞಾ ಮೇಧಾಳ ತೊದಲು ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಹರಿದಾಡುತ್ತಿವೆ. ಕೆಲ ಮಕ್ಕಳು ಎರಡು ವರ್ಷದಲ್ಲಿ ಮಾತು ಆರಂಭಿಸುತ್ತವೆ. ಆದರೆ ಪ್ರಜ್ಞಾ ಚಿನಕುರಳಿ ಮಾತಿನೊಂದಿಗೆ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ಹಾಡುಗಳನ್ನು ಹಾಡುತ್ತಾಳೆ. ಪ್ರಜ್ಞಾ ಹಾಡುಗಳನ್ನು ಕೇಳಿದ್ದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಸಿಂಗಿಂಗ್, ಕ್ಯಾಟ್ವಾಕ್ ನಂತ್ರ ರೇಡಿಯೋ ಸ್ಟೇಷನ್ನಲ್ಲಿ ರಾನು ಮೊಂಡಲ್: ವಿಡಿಯೋ
https://www.instagram.com/p/B0GuoA_nlJb/
ಇನ್ಸ್ಟಾಗ್ರಾಂನಲ್ಲಿ ಪ್ರಜ್ಞಾಳ ಖಾತೆ ತೆರೆಯಲಾಗಿದೆ. ಒಂದು ಸಾವಿರಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಪ್ರಜ್ಞಾ ಹೊಂದಿದ್ದಾಳೆ. ಪ್ರಜ್ಞಾಳ ಕ್ಯೂಟ್ ವಿಡಿಯೋಗಳನ್ನು ತಾಯಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ‘ಲಗ್ ಜಾ ಗಲೇ’ ಹಾಡಿನ ವಿಡಿಯೋ 29 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಇದನ್ನೂ ಓದಿ: ಮೈಸೂರು ಜನರಲ್ಲಿ ಕ್ಷಮೆ ಕೋರಿದ ರಾನು ಮೊಂಡಲ್
https://www.instagram.com/p/B5lFeNuAO1R/
ಸೋಶಿಯಲ್ ಮೀಡಿಯಾದಲ್ಲಿ ಯಾರು ಬೇಕಾದರೂ ಇಂದು ಸ್ಟಾರ್ ಆಗಬಹುದು. ಇದಕ್ಕೆ ತಾಜಾ ಉದಾಹರಣೆ ಗಾಯಕಿ ರಾನು ಮೊಂಡಲ್. ರೈಲ್ವೇ ನಿಲ್ದಾಣಗಳಲ್ಲಿ ಹಾಡು ಹೇಳುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ರಾನು ಬಹುತೇಕ ನೆಚ್ಚಿನ ಗಾಯಕಿಯಾಗಿದ್ದಾರೆ. ಗಾಯಕ ಹಿಮೇಶ್ ರೆಶ್ಮಿಯಾ ನೀಡಿದ ಅವಕಾಶದಿಂದ ರಾನು ಮೊಂಡಲ್ ಇಂದು ಸೆಲೆಬ್ರಿಟಿಯಾಗಿದ್ದಾರೆ. ಕೇವಲ ಹಾಡುಗಳಲ್ಲದೇ ಇನ್ನಿತರ ವಿಷಯಗಳಿಗೆ ರಾನು ಮೊಂಡಲ್ ಸುದ್ದಿ ಆಗುತ್ತಿದ್ದಾರೆ. ಇದನ್ನೂ ಓದಿ: ರಾನು ಮೊಂಡಲ್ಗೆ ಅವಕಾಶ ನೀಡಿದ್ದೇಕೆ – ಹಿಮೇಶ್ ಸ್ಪಷ್ಟನೆ