ಭೋಪಾಲ್: ನ್ಯುಮೋನಿಯಾದಿಂದ (Pneumonia) ಬಳಲುತ್ತಿರುವ 3 ತಿಂಗಳ ಮಗುವಿನ (Baby) ಹೊಟ್ಟೆಯ (Stomach) ಮೇಲೆ ಕಾದ ಕಬ್ಬಿಣದ ರಾಡ್ನಿಂದ (Hot Iron Rod) 51 ಬಾರಿ ಇಟ್ಟ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 3 ತಿಂಗಳ ಮಗುವಿಗೆ ಆಸ್ಪತ್ರೆಗೆ ಸೇರಿಸುವ ಮೊದಲು ಮಂತ್ರವಾದಿಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಬಾಲಕಿಯ ರೋಗವನ್ನು ಗುಣಪಡಿಸಲು 51 ಬಾರಿ ಆಕೆಯ ಹೊಟ್ಟೆಗೆ ಬಿಸಿ ರಾಡ್ನಿಂದ ಇಟ್ಟಿದ್ದಾರೆ.
Advertisement
Advertisement
ಇದನ್ನು ಗಮನಿಸಿದ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಮಗುವಿಗೆ ಕಬ್ಬಿಣದ ರಾಡ್ನಿಂದ ಚುಚ್ಚುತ್ತಿರುವುದನ್ನು ನಿಲ್ಲಿಸಲು ಆ ಮಗುವಿನ ತಾಯಿಗೆ ಮನವರಿಕೆ ಮಾಡಿದ್ದಾಳೆ. ಅದಾದ ಬಳಿಕ ಆ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ, ಉಸಿರಾಟದ ತೊಂದರೆಯಿಂದಾಗಿ 15 ದಿನಗಳ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿ ಅಲೆ- 4 ತಂಡಗಳಲ್ಲಿ ವಿಜಯ ಸಂಕಲ್ಪ ಯಾತ್ರೆ: ನಳಿನ್ ಕುಮಾರ್ ಕಟೀಲ್
Advertisement
Advertisement
ಈ ಬಗ್ಗೆ ವೈದ್ಯರು ಮಾತನಾಡಿ, ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಆ ಮಗುವಿನ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದಕ್ಕೂ ಮುನ್ನವೇ ಆ ಮಗುವಿಗೆ ಸರಿಯಾದ ಚಿಕಿತ್ಸೆ ನೀಡಿದ್ದರೇ ಮಗು ಬದುಕುಳಿಯುತ್ತಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ತುಮಕೂರಿನ HAL ಭಾರತದಲ್ಲೇ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಕೇಂದ್ರ – ಏನಿದರ ವೈಶಿಷ್ಟ್ಯ?
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k