ಮುಂಬೈ: ನವೆಂಬರ್ 26, 2008ರಲ್ಲಿ ನಡೆದ ಮುಂಬೈ ದಾಳಿಯಲ್ಲಿ ತನ್ನ ಹೆತ್ತವರನ್ನು ಕಳೆದುಕೊಂಡ ಬಾಲಕ ಮೋಶೆ ಹೋಲ್ಟ್ಸ್ ಬರ್ಗ್ ಇಂದು ಮುಂಬೈಗೆ ಬಂದಿಳಿದಿದ್ದಾನೆ.
11 ವರ್ಷದ ಮೋಶೆ ಈ ಮೂಲಕ ಘಟನೆ ನಡೆದ 9 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಮುಂಬೈನ ನಾರಿಮನ್ ಹೌಸ್ ಗೆ ಭೇಟಿ ನಿಡಲಿದ್ದಾನೆ. ಮೋಶೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹೂ ಸಾಥ್ ನೀಡಲಿದ್ದಾರೆ.
Advertisement
Advertisement
ಮುಂಬೈನಲ್ಲಿ ನವೆಂಬರ್ 2008ರಲ್ಲಿ 10 ಮಂದಿ ಪಾಕ್ ಉಗ್ರರು ನಡೆಸಿದ್ದ ದಾಳಿ ಸಂದರ್ಭದಲ್ಲಿ ಮೋಶೆಗೆ 2 ವರ್ಷ ವಯಸ್ಸಾಗಿತ್ತು. ಈ ದಾಳಿಯಲ್ಲಿ ಮೋಶೆ ಹೆತ್ತವರಾದ ರಬ್ಬಿ ಗವಿರೆಲ್ ಹೋಲ್ಟ್ಸ್ ಬರ್ಗ್ ಹಾಗೂ ರಿವಿಕಾ ಸೇರಿ ಸುಮಾರು 166 ಮಂದಿ ಅಸುನೀಗಿದ್ದರು. ಘಟನೆಯಿಂದಾಗಿ ಪುಟ್ಟ ಬಾಲಕ ಮೋಶೆ ಅನಾಥವಾಗಿದ್ದ. ನಂತರ ಇಸ್ರೇಲ್ ನ ಆಫುಲಾ ನಗರದಲ್ಲಿರೋ ಆತನ ಅಜ್ಜ-ಅಜ್ಜಿ ಅಲ್ಲಿಗೆ ಕರೆದುಕೊಂಡು ಹೋಗಿ ಪೋಷಿಸುತ್ತಿದ್ದರು.
Advertisement
ಅಂದಿಗಿಂತ ಮುಂಬೈ ನಗರ ಇಂದು ತುಂಬಾ ಸೇಫ್ ಆಗಿದೆ. ಇಂದು ನನಗೆ ತುಂಬಾ ವಿಶೇಷವಾದ ದಿನವಾಗಿದೆ. ಮೋಶೆ ಮತ್ತೆ ಮುಂಬೈಗೆ ಬರುವ ಹಾಗೆ ಮಾಡಿದ ದೇವರಿಗೆ ಧನ್ಯವಾದ ಅಂತ ಮೋಶೆ ಜೊತೆ ಮುಂಬೈಗೆ ಆಗಮಿಸಿದ ಆತನ ಅಜ್ಜ ಹೇಳಿದ್ದಾರೆ.
Advertisement
ಮೋಶೆಯನ್ನು ಮುಂಬೈ ದಾಳಿ ವೇಳೆ ಕಾಪಾಡಿದ ಭಾರತೀಯ ದಾದಿ ಸಾಂಡ್ರಾ ಸಾಮ್ಯುಯಲ್ಸ್ ಕೂಡ ಜೊತೆಯಾಗಿದ್ದಾರೆ. ಜನವರಿ 19ರಂದು ಮೋಶೆ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಜೊತೆ ಮತ್ತೆ ಇಸ್ರೇಲ್ ಗೆ ವಾಪಸ್ಸಾಗಲಿದ್ದಾನೆ.
ಕಳೆದ ವರ್ಷ ಜುಲೈನಲ್ಲಿ ಇಸ್ರೆಲ್ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೋಶೆ ಮತ್ತು ಆತನ ಅಜ್ಜನನ್ನು ಭೇಟಿ ಮಾಡಿದ್ದರು. ಈ ವೇಳೆ ನಿನಗೆ ಯಾವಾಗ ಭಾರತಕ್ಕೆ ಬರಬೇಕು ಅನಿಸುತ್ತಿದೆಯೋ ಅಂದು ಬಾ. ನಿನ್ನನ್ನು ಸ್ವಾಗತಿಸಲು ಭಾರತ ಸದಾ ಸಿದ್ಧವಿದೆ ಎಂದು ಹೇಳಿದ್ದರು. ಅಂತೆಯೇ ಇದೀಗ ಮೋಶೆ ಭಾರತಕ್ಕೆ ಬಂದಿದ್ದಾನೆ.
ಲಷ್ಕರ್ ಇ ತೊಯ್ಬಾ ಭಯೋತ್ಪಾದಕ ಸಂಘಟನೆ ನಡೆಸಿದ್ದ ಈ ದಾಳಿಯಲ್ಲಿ 164 ಜನ ಮೃತರಾಗಿದ್ದರು, 300 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.