ಉಸ್ಮನಾಬಾದ್: ಹುಟ್ಟಿದ ತಕ್ಷಣ ನಾವು ಸಿಹಿ ಹಂಚುವುದು, ಮಗುವಿಗೆ ಏನು ಹೆಸರು ಇಡಬೇಕು ಎಂದು ಯೋಚಿಸುತ್ತೇವೆ. ಆದರೆ ಮಹಾರಾಷ್ಟ್ರದ ಉಸ್ಮನಾಬಾದ್ ಜಿಲ್ಲೆಯಲ್ಲಿ ಆಗತಾನೆ ಜನಿಸಿದ ಹೆಣ್ಣು ಮಗುವಿಗೆ ತಮ್ಮ ಪೋಷಕರು ನಮ್ಮ ಪ್ರಮುಖ ಗುರುತಾದ ಆಧಾರ್ ಸಂಖ್ಯೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಭಾವನ ಸಂತೋಷ್ ಜಾಧವ್ ಆಧಾರ್ ನಂಬರ್ ಪಡೆದ ಹೆಣ್ಣು ಮಗು. ಜಿಲ್ಲೆಯ ಮಹಿಳಾ ಆಸ್ಪತ್ರೆಯಲ್ಲಿ ಭಾನುವಾರ ಮಗು ಜನಿಸಿದೆ. ತಕ್ಷಣ ಪೋಷಕರು 6 ನಿಮಿಷಗಳಲ್ಲಿ ತಮ್ಮ ಮಗುವಿಗೆ ಆಧಾರ್ ಮಾಡಿಸಿದ್ದಾರೆ.
Advertisement
ಆಸ್ಪತ್ರೆಯಲ್ಲಿ ಸುಮಾರು 12.03 ಗಂಟೆಗೆ ಮಗು ಜನಿಸಿದೆ. ತಕ್ಷಣ ಪೋಷಕರು ಸುಮಾರು 12.09 ಕ್ಕೆ ಆನ್‍ಲೈನ್ ಮೂಲಕ ಜನನ ಪ್ರಮಾಣ ಪತ್ರ ಪಡೆದು ನಂತರ ಆಧಾರ್ ನಂಬರ್ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ರಾಧಾ ಕೃಷ್ಣ ಗೇಮ್ ಹೇಳಿದರು.
Advertisement
ಇದು ಜಿಲ್ಲೆಯಲ್ಲಿಯೇ ಹೆಮ್ಮೆಯ ವಿಚಾರವಾಗಿದ್ದು, ಶೀಘ್ರವಾಗಿ ನಾವು ಎಲ್ಲಾ ಮಕ್ಕಳ ಆಧಾರ್ ನಂಬರ್ ನೊಂದಾಯಿಸಿಕೊಂಡು ಅವರ ಪೋಷಕರ ಆಧಾರ್ ಖಾತೆಗೆ ಲಿಂಕ್ ಮಾಡುತ್ತೇವೆ ಎಂದು ಹೇಳಿದರು.
Advertisement
ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಾ ಮಹಿಳಾ ಆಸ್ಪತ್ರೆಯಲ್ಲಿ ಜನಿಸಿದ 1,300 ಮಕ್ಕಳೆಲ್ಲರೂ ಆಧಾರ್ ನಂಬರ್ ಪಡೆದಿದ್ದಾರೆ. ಸದ್ಯಕ್ಕೆ ತಾಯಿ ಮಗು ಮತ್ತು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯ ಡಾ. ಏಕ್ನಾಥ್ ಮಾಲ್ ತಿಳಿಸಿದರು.