ಪಾಟ್ನಾ: ಪಾಕಿಸ್ತಾನದ ಮೇಲೆ ಭಾರತ ‘ಆಪರೇಷನ್ ಸಿಂಧೂರ’ (Operation Sindoor) ನಡೆಸಿದ್ದು ಭಾರತದ ಪಾಲಿಗೆ ಐತಿಹಾಸಿಕ ದಿನ. ಇದೀಗ ಆಪರೇಷನ್ ಸಿಂಧೂರದಿಂದ ಪ್ರೇರಿತರಾದ ಬಿಹಾರದ (Bihar) ದಂಪತಿ ತಮ್ಮ ನವಜಾತ ಹೆಣ್ಣು ಮಗುವಿಗೆ `ಸಿಂಧೂರ’ ಎಂದು ಹೆಸರಿಟ್ಟಿದ್ದಾರೆ.
ಭಾರತೀಯ ಸೇನೆ ಪಾಕಿಸ್ತಾನದಲ್ಲಿ ‘ಆಪರೇಷನ್ ಸಿಂಧೂರ’ ಪ್ರಾರಂಭಿಸಿದ ದಿನವೇ ಬಿಹಾರದ ಕತಿಹಾರ್‌ನಲ್ಲಿರುವ ನರ್ಸಿಂಗ್ ಹೋಂನಲ್ಲಿ ಹೆಣ್ಣು ಮಗು ಜನಿಸಿದೆ. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ದಿನವೇ ಜನಿಸಿದ ಹಿನ್ನೆಲೆ ‘ಸಿಂಧೂರ’ ಎಂದು ಹೆಸರಿಟ್ಟು ಗೌರವ ಸಮರ್ಪಣೆ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ಭಾರತದಿಂದ ದಾಳಿ ಭೀತಿ – ಊರುಬಿಟ್ಟ ಮುಜಾಫರಾಬಾದ್ ಜನತೆ
ತನ್ನ ಮಗುವಿಗೆ ‘ಸಿಂಧೂರ’ ಎಂದು ಹೆಸರಿಡೋದಕ್ಕೆ ಭಾರತೀಯ ಸೇನೆಯ ಆಪರೇಷನ್ ಸಿಂಧೂರವೇ ನನಗೆ ಪ್ರೇರಣೆ ಎಂದು ತಂದೆ ಭಾವುಕರಾಗಿದ್ದಾರೆ. ಇದನ್ನೂ ಓದಿ: ಉಗ್ರರ ನೆಲೆಗಳ ಮೇಲೆ ಬಿದ್ದ ಸೂಸೈಡ್ ಡ್ರೋನ್‌ಗಳು ತಯಾರಾಗಿದ್ದು ಬೆಂಗಳೂರಿನಲ್ಲಿ!