ಟಾಲಿವುಡ್ ನಟಿ ವೈಷ್ಣವಿ ಚೈತನ್ಯ ‘ಬೇಬಿ’ (Baby Film) ಸಿನಿಮಾದ ಮೂಲಕ ಸೂಪರ್ ಸಕ್ಸಸ್ ಕಂಡಿದ್ದರು. ಇದೀಗ ‘ಲವ್ ಮಿ’ ಎನ್ನುತ್ತಾ ಮತ್ತೆ ಟಿಟೌನ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ತೆಲುಗಿನ ನಟ ಆಶಿಶ್‌ಗೆ ನಾಯಕಿ ಬೇಬಿ ವೈಷ್ಣವಿ (Vaishnavi Chaitanya) ಚೈತನ್ಯ ಎಂಟ್ರಿ ಕೊಟ್ಟಿದ್ದಾರೆ.
‘ಬೇಬಿ’ ಸಿನಿಮಾದಲ್ಲಿ ಆನಂದ್ ದೇವರಕೊಂಡಗೆ ನಾಯಕಿಯಾಗಿ ವೈಷ್ಣವಿ ನಟಿಸಿದ್ದರು. ಈ ಚಿತ್ರದ ಸಕ್ಸಸ್ ನಂತರ ನಟಿಗೆ ಬೇಡಿಕೆ ಹೆಚ್ಚಾಗಿತ್ತು. ತೆಲುಗಿನ ಹಲವು ಸಿನಿಮಾಗಳಿಗೆ ನಾಯಕಿಯಾಗಿ ಅವಕಾಶಗಳು ಹರಿದು ಬರುತ್ತಿವೆ. ಇದನ್ನೂ ಓದಿ:ಆತ್ಮಹತ್ಯೆಗೆ ಶರಣಾದ ನಟ ಚಂದ್ರು ಮೇಲೆ ಪತ್ನಿಯ ಆರೋಪಗಳೇನು?
View this post on Instagram
ಹೀಗಿರುವಾಗ ಈ ಬಾರಿ ಹೀರೋ ಆಶಿಶ್ (Ashish) ಜೊತೆ ಸೇರಿ ಹಾರರ್ ಕಥೆ ಹೇಳೋಕೆ ನಟಿ ವೈಷ್ಣವಿ ಹೊರಟಿದ್ದಾರೆ. ಎಂದೂ ನಟಿಸಿರದ ಡಿಫರೆಂಟ್ ಪಾತ್ರದಲ್ಲಿ ಬೇಬಿ ನಟಿ ಕಾಣಿಸಿಕೊಂಡಿದ್ದಾರೆ. ಸದ್ಯ ‘ಲವ್ ಮಿ’ (Love Me) ಸಿನಿಮಾದ ಟ್ರೈಲರ್ ರಿಲೀಸ್ ಆಗಿ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.
ಹಾರರ್ ಜೊತೆ ಒಂದು ಸುಂದರ ಲವ್ ಸ್ಟೋರಿ ಕೂಡ ಸಿನಿಮಾದಲ್ಲಿದೆ. ಇದೇ ಮೇ 25ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ‘ಬೇಬಿ’ ಮೂಲಕ ಗೆದ್ದಿರುವ ವೈಷ್ಣವಿ ಇದೀಗ ‘ಲವ್ ಮಿ’ ಚಿತ್ರದ ಮೂಲಕ ಗೆದ್ದು ಬೀಗುತ್ತಾರಾ? ಕಾದುನೋಡಬೇಕಿದೆ.