ಬೆಂಗಳೂರು: 50 ಅಡಿ ಗುಂಡಿಗೆ ಬಿದ್ದು ಮೇಲೆ ಬಾರಲಾಗದ ಸ್ಥಿತಿಯಲ್ಲಿರುವ ಮರಿ ಆನೆಯನ್ನು ಅರಣ್ಯ ಸಿಬ್ಬಂದಿ ಸಾರ್ವಜನಿಕರ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.
ಆನೇಕಲ್ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಪಾವಡಪಟ್ಟಿ ಹಳ್ಳಿಯಲ್ಲಿ ಆನೆ ಮರಿ ಗುಂಡಿಗೆ ಬಿದ್ದಿತ್ತು. ಪ್ರತಿ ವರ್ಷ ಸುಗ್ಗಿ ಕಾಲದಲ್ಲಿ ಕಾಡಾನೆಗಳು ಆಹಾರ ಅರಸಿ ನಾಡಿಗೆ ಬರುವುದು ಸರ್ವೆ ಸಾಮಾನ್ಯ. ಹೀಗೆ ನಾಡಿಗೆ ಬಂದ ಆನೆಗಳು ರೈತರ ಬೆಳೆಗಳನ್ನು ನಾಶ ಮಾಡಿ ಹೋಗುತ್ತಿರುತ್ತವೆ. ಅದೇ ರೀತಿ ಈ ವರ್ಷವೂ 60ಕ್ಕೂ ಹೆಚ್ಚು ಕಾಡಾನೆಗಳ ಗುಂಪು ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದವು. ಕಾಡಾನೆಗಳನ್ನು ಅರಣ್ಯ ಸಿಬ್ಬಂದಿ ಇಂದು ಮುಂಜಾನೆ ಕಾಡಿಗೆ ಅಟ್ಟುವಾಗ ಮರಿ ಆನೆ ಗುಂಡಿಗೆ ಬಿದ್ದಿತ್ತು. ಇದನ್ನೂ ಓದಿ: ಮೃತಪಟ್ಟಿರುವ ತನ್ನ ಕಂದಮ್ಮನಿಗಾಗಿ ತಾಯಿ ಆನೆಯ ಹುಡುಕಾಟ-ಬಂಡೀಪುರದಲ್ಲೊಂದು ಮನಕಲಕುವ ಘಟನೆ
Advertisement
ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಗುಂಡಿಯಲ್ಲಿ ಬಿದ್ದಿದ್ದ ಅನೆ ಮರಿಯನ್ನು ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರ ಸಹಕಾರದಿಂದ ಗುಂಡಿಯಿಂದ ಮೇಲೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುಂಡಿಯಿಂದ ಮೇಲೆತ್ತುವಾಗ ಅನೆ ಮರಿ ಗಾಬರಿ ಆಗಬಾರದೆಂದು ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ರಕ್ಷಿಸಿದ ಮರಿಯಾನೆಯನ್ನು ಸಾನಮಾವು ಅರಣ್ಯ ಪ್ರದೇಶದಲ್ಲಿದ್ದ ತಾಯಿ ಮಡಿಲಿಗೆ ಸೇರಿಸುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
Advertisement
https://www.youtube.com/watch?v=pMKGHV1Bdao
Advertisement
Advertisement