ಮೆಕ್ಸಿಕೋ: ಬೀಚ್‍ನಲ್ಲಿ ಬೇಬಿ ಡೈನೋಸಾರ್‌ಗಳ ಗುಂಪು ಓಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿ ಕೆಲವರು ಆಶ್ಚರ್ಯರಾಗಿದ್ದಾರೆ.
ಡೈನೋಸಾರ್ ಮರಿಗಳು ಸಮುದ್ರದ ಬೀಚ್‍ನಲ್ಲಿ ಓಡಾಡುತ್ತಿವೆ ಎಂಬ ಶೀರ್ಷಿಕೆಯನ್ನು ನೀಡಿ ಈ ವೀಡಿಯೋ ಒಬ್ಬರು ಹಂಚಿಕೊಂಡಿದ್ದಾರೆ. ಈ ವೀಡಿಯೋ 14 ಸೆಕೆಂಡಿದ್ದು, ನೋಡಗರನ್ನು ಗೊಂದಲಕ್ಕಿಡು ಮಾಡುತ್ತದೆ. ಈಗಾಗಲೇ ಈ ವೀಡಿಯೋವನ್ನು 9.9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 47 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ.
Advertisement
Advertisement
ವೀಡಿಯೋದಲ್ಲಿ ಏನಿದೆ?:
ಉದ್ದನೆಯ ಕುತ್ತಿಗೆಯ ಡೈನೋಸಾರ್ ಜಾತಿಯ ಪ್ರಾಣಿಯೊಂದು ಸಮುದ್ರದ ಕಡೆಗೆ ಓಡುತ್ತಿವೆ. ಇದನ್ನು ಒಮ್ಮೆಲೆ ನೋಡಿದಾಗ ಡೈನೋಸಾರ್ ರೀತಿಯೇ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ನೋಡಿದಾಗ ಡೈನೋಸಾರ್ ಅಲ್ಲ ಎನ್ನುವುದು ನಮ್ಮ ಅರಿವಿಗೆ ಬರುತ್ತದೆ.
Advertisement
This took me a few seconds.. ???? pic.twitter.com/dPpTAUeIZ8
— Buitengebieden (@buitengebieden) May 4, 2022
ಅಂದ ಹಾಗೆ ಈ ವೀಡಿಯೋದಲ್ಲಿರುವ ಪ್ರಾಣಿ ಡೈನೋಸಾರ್ ಅಲ್ಲ, ಬದಲಿಗೆ ಕೋಟಿಸ್ ಎನ್ನುವ ಪ್ರಾಣಿ. ಇದರ ಬಾಲ ಉದ್ದವಿರುವುದರಿಂದ ಇದು ನೋಡಲು ಡೈನೋಸಾರ್ ಹಾಗೆ ಕಾಣುತ್ತಿದೆ. ಈ ವೀಡಿಯೋವನ್ನು ಸೂಕ್ಷ್ಮವಾಗಿ ನೋಡಿದಾಗ ಕೋತಿಸ್ ಓಡುತ್ತಿರುವುದನ್ನು ಉಲ್ಟಾ ತೋರಿಸಿದ್ದಾರೆ ಎನ್ನುವುದು ತಿಳಿಯುತ್ತದೆ. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್
Advertisement
ಕೋಟಿಸ್ ಅಮೆರಿಕ, ಮೆಕ್ಸಿಕೊ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವು 33 ರಿಂದ 68 ಇಂಚು ಎತ್ತರವಿದ್ದು, 2ರಿಂದ 8 ಕ.ಜಿಯವರೆಗೆ ತೂಕವಿರಲಿದೆ. ಇದನ್ನೂ ಓದಿ: ಹಿಮಾಚಲ ಅಸೆಂಬ್ಲಿ ಗೇಟ್‌ನಲ್ಲಿ ಖಲಿಸ್ತಾನ್ ಧ್ವಜ – ಸಿಎಂ ಜೈರಾಮ್ ಠಾಕೂರ್ ಕಿಡಿ