ರಾಯಚೂರು: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ನವಜಾತ ಶಿಶು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷದಿಂದ ಮಗು ಸಾವನ್ನಪ್ಪಿದೆ ಎಂದು ವೈದ್ಯರ ವಿರುದ್ಧ ಕುಟುಂಬಸ್ಥರು ಆರೋಪಿಸಿದ್ದಾರೆ.
ರಾಯಚೂರು (Raichuru) ತಾಲೂಕಿನ ಮರ್ಚೇಡ್ ಗ್ರಾಮದ ಪಾರ್ವತಮ್ಮ ಹಾಗೂ ಚಂದ್ರಶೇಖರ್ ದಂಪತಿಯ ಮಗು ಸಾವನ್ನಪ್ಪಿದೆ.ಇದನ್ನೂ ಓದಿ: ಫ್ರಾನ್ಸ್‌ಗೆ ಪ್ರಯಾಣ ಬೆಳೆಸಿದ ಮೋದಿ – ಅಮೆರಿಕ ಭೇಟಿ ಬಗ್ಗೆ ಹೇಳಿದ್ದೇನು?
Advertisement
Advertisement
ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯನ್ನು ವೈದ್ಯರು ತಪಾಸಣೆ ಮಾಡಿ ನಾರ್ಮಲ್ ಡೆಲಿವರಿ ಆಗುತ್ತದೆ ಎಂದು ತಿಳಿಸಿ 2 ದಿನ ಕಾಯಿಸಿದ್ದರು. ಗರ್ಭಿಣಿ ನೋವಿನಿಂದ ಬಳಲುತ್ತಿದ್ದರೂ ಕೂಡ ಹೆರಿಗೆ ಮಾಡಲು ವಿಳಂಬ ಮಾಡಿದ್ದರು.
Advertisement
Advertisement
ಇದರಿಂದ ಗರ್ಭಿಣಿಯ ಕುಟುಂಬಸ್ಥರು ಸಿಸೇರಿಯನ್ ಮಾಡುವಂತೆ ವೈದ್ಯರಿಗೆ ತಿಳಿಸಿದ್ದಾರೆ. ಆದರೂ ಕೂಡ ವಿಳಂಬ ಮಾಡಿ ನಾರ್ಮಲ್ ಡೆಲಿವರಿ ಮಾಡಿದ್ದಾರೆ. ಈ ವೇಳೆ ಹೆರಿಗೆ ಮಾಡುವಾಗ ಮಗು ಸಾವನ್ನಪ್ಪಿದೆ. ಇದರಿಂದ ಹೆರಿಗೆ ಮಾಡಲು ತಡ ಮಾಡಿದ್ದಕ್ಕೆ ಮಗು ಸಾವನ್ನಪ್ಪಿದೆ ಎಂದು ಬಾಣಂತಿಯ ಪತಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಎಚ್‌ಓ ಡಾ.ಸುರೇಂದ್ರಬಾಬು ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾರಣ ತಿಳಿದು ಸಮಗ್ರವಾಗಿ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.ಇದನ್ನೂ ಓದಿ: ಕೇಂದ್ರ ಸಚಿವ ಪಿಯೂಷ್ ಗೋಯಲ್‌ಗೆ ಕಾಮನ್ ಸೆನ್ಸ್ ಇಲ್ಲ: ರಾಮಲಿಂಗಾ ರೆಡ್ಡಿ ಆಕ್ರೋಶ