ಯಾದಗಿರಿ: ನೀರು ಸಂಗ್ರಹಿಸಿಟ್ಟಿದ್ದ ಬಕೆಟ್ ನಲ್ಲಿ ಹೆಣ್ಣು ಮಗು ಬಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಘಟನೆ ನಡೆದಿದೆ.
ಎರಡು ವರ್ಷದ ನಿಖಿತಾ ಮೃತ ದುರ್ದೈವಿ. ಪೋಷಕರು ಮನೆ ಮುಂದೆ ಬಕೆಟ್ ನಲ್ಲಿ ನೀರು ಸಂಗ್ರಹಿಸಿಟ್ಟಿದ್ದರು. ಈ ವೇಳೆ ನಿಖಿತಾ ಆಟವಾಡುತ್ತಾ ಹೋದಾಗ ನೀರು ತುಂಬಿದ್ದ ಬಕೆಟ್ ನಲ್ಲಿ ಬಿದ್ದಿದ್ದಾಳೆ. ತಕ್ಷಣ ಪೋಷಕರು ತೀವ್ರ ಅಸ್ವಸ್ಥಳಾಗಿದ್ದ ನಿಖಿತಾಳನ್ನು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋಗಿದ್ದಾರೆ.
Advertisement
ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಅಗತ್ಯ ಚಿಕಿತ್ಸೆ ನೀಡಲು ಸಾಧ್ಯವಾಗಿಲ್ಲ. ನಂತರ ಮಗುವನ್ನು ಅಲ್ಲಿಂದ ಶಹಾಪುರಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಈ ವೇಳೆ ಮಾರ್ಗ ಮಧ್ಯೆ ನಿಖಿತಾ ಮೃತಪಟ್ಟಿದ್ದಾಳೆ.
Advertisement
ಈ ಘಟನೆ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದ್ದು, ಮುದ್ದು ಮಗುವನ್ನು ಕಳೆದುಕೊಂಡ ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv