ಲಕ್ನೋ: ಮಗುವಿನೊಂದಿಗೆ ಪ್ರಯಾಣಿಸುವ ತಾಯಂದಿರು ಆರಾಮದಾಯಕವಾಗಿ ಪ್ರಯಾಣಿಸಲು ಭಾರತೀಯ ರೈಲ್ವೆ ಇಲಾಖೆಯು ಆಯ್ದ ರೈಲುಗಳಲ್ಲಿ ಮಡಚಬಹುದಾದ ಬೇಬಿ ಬರ್ತ್‍ನ್ನು ಪರಿಚಯಿಸಿದೆ.
ಉತ್ತರ ರೈಲ್ವೆಯ ಲಕ್ನೋ ಮತ್ತು ದೆಹಲಿ ವಿಭಾಗಗಳ ಸಹಯೋಗದಲ್ಲಿ ಈ ನೂತನ ಪ್ರಯತ್ನವನ್ನು ಮಾಡಿದ್ದಾರೆ. ಇದನ್ನು ಲಕ್ನೋ ಮೇಲ್ ಸೂಪರ್ ಎಕ್ಸ್‌ಪ್ರೆಸ್ ರೈಲಿನ ಎಸಿ ಬೋಗಿಯಲ್ಲಿ ಇದನ್ನು ಅಳವಡಿಸಲಾಗಿದೆ. ಇದರಿಂದಾಗಿ ತಾಯಂದಿರು ತಮ್ಮ ಮಕ್ಕಳೊಂದಿಗೆ ಆರಾಮವಾಗಿ ಮಲಗುತ್ತಾರೆ.
Advertisement
Advertisement
ಈ ಬಗ್ಗೆ ಉತ್ತರ ರೈಲ್ವೆ ತನ್ನ ಅಧಿಕೃತ ಖಾತೆಯಲ್ಲಿ ಈ ಕುರಿತು ಟ್ವೀಟ್ ಮಾಡಿದ್ದು, ಮಗುವಿನ ಸೀಟ್ ಕೆಲವು ಫೋಟೋಗಳನ್ನು ಸಹ ಹಂಚಿಕೊಂಡಿದೆ. ಇದರಲ್ಲಿ ಮಗುವಿನ ಆಸನವು ಮಡಚಬಹುದಾದ ಮತ್ತು ಮಗುವಿನೊಂದಿಗೆ ಸುರಕ್ಷಿತವಾಗಿ ಪ್ರಯಾಣ ಮಾಡಬಹುದಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ತಾಜ್ ಮಹಲ್ ನಿಜಕ್ಕೂ ವಿಶ್ವದ ಅದ್ಭುತ: ಭಾರತದ ಭೇಟಿಯನ್ನು ನೆನಪಿಸಿಕೊಂಡ ಮಸ್ಕ್
Advertisement
On Mother’s Day, Lucknow Divn of N.Rly. introduced a baby berth on experimental basis in Coach No.194129/B4, berth No 12 & 60. This will facilitate mothers travelling with their babies.
The fitted baby seat is foldable & secured with a stopper. @AshwiniVaishnaw @RailMinIndia pic.twitter.com/4jNEtchuVh
— Northern Railway (@RailwayNorthern) May 9, 2022
ಮಗು ಮಲಗುವಾಗ ಸೀಟಿನಿಂದ ಕೆಳಗೆ ಬೀಳದ ರೀತಿಯಲ್ಲಿ ಮಗುವಿನ ಸೀಟ್‌ನ್ನು ಜೋಡಿಸಲಾಗಿದೆ. ಇದು ಮಗು ಬೀಳದಂತೆ ಭದ್ರಪಡಿಸಲು ಪಟ್ಟಿಗಳನ್ನು ಹೊಂದಿದೆ. ಇದನ್ನು ಹಂತಹಂತವಾಗಿ ಎಲ್ಲಾ ರೈಲಿನಲ್ಲೂ ಅಳವಡಿಸಲು ಚಿಂತಿಸಿದೆ. ಇದನ್ನೂ ಓದಿ: ರಷ್ಯಾದಿಂದ ಅಗ್ಗದ ದರದಲ್ಲಿ ಎಲ್‌ಎನ್‌ಜಿ ಖರೀದಿಸಿದ ಭಾರತ