ನವದೆಹಲಿ: ಕಚ್ಚಾ ತೈಲವನ್ನು ಅಗ್ಗದ ದರದಲ್ಲಿ ರಷ್ಯಾದಿಂದ ಖರೀದಿ ಮಾಡುತ್ತಿರುವ ಭಾರತ ಈಗ ದ್ರವೀಕೃತ ನೈಸರ್ಗಿಕ ಅನಿಲವನ್ನು(LNG) ಕಡಿಮೆ ದರದಲ್ಲಿ ಖರೀದಿ ಮಾಡಿದೆ.
ಗುಜರಾತ್ ಸ್ಟೇಟ್ ಪೆಟ್ರೋಲಿಯಂ ಕಾರ್ಪೊರೇಷನ್(ಜಿಎಸ್‌ಪಿಸಿ) ಮತ್ತು ಗೇಲ್ ಇಂಡಿಯಾ ಲಿಮಿಟೆಡ್ ಸೇರಿದಂತೆ ಕಂಪನಿಗಳು ಇತ್ತೀಚೆಗೆ ರಷ್ಯಾದಿಂದ ಹಲವಾರು ಎಲ್‌ಎನ್‌ಜಿ ಸ್ಪಾಟ್ ಶಿಪ್‌ಮೆಂಟ್‌ಗಳನ್ನು ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತದ ಜೊತೆ ವ್ಯಾಪಾರ – ತನ್ನ ಹಳೆಯ ಪ್ರಸ್ತಾಪವನ್ನು ಮುಂದಿಟ್ಟ ರಷ್ಯಾ
ಈ ವಿಚಾರದ ಬಗ್ಗೆ ತಿಳಿದ ವ್ಯಕ್ತಿಗಳು ಮಾಹಿತಿ ನೀಡಿದ್ದು, ಮತ್ತಷ್ಟು ಖಾಸಗಿ ಮಾಹಿತಿಗಳನ್ನು ಅವರು ನೀಡಲು ನಿರಾಕರಿಸಿದ್ದಾರೆ. ಜಿಎಸ್‌ಪಿಸಿ, ಗೇಲ್ ಮತ್ತು ಭಾರತದ ಪೆಟ್ರೋಲಿಯಂ ಸಚಿವಾಲಯಕ್ಕೆ ಈ ಬಗ್ಗೆ ಕೇಳಿದ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಮತ್ತಷ್ಟು ಕಡಿಮೆ ಬೆಲೆಯಲ್ಲಿ ತೈಲ ನೀಡಿ – ರಷ್ಯಾ ಜೊತೆ ಭಾರತ ಚೌಕಾಶಿ
ಎಲ್‌ಎನ್‌ಜಿ ಮೇಲೆ ಯಾವುದೇ ನೇರ ನಿರ್ಬಂಧಗಳಿಲ್ಲ. ಆದರೆ ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಕೆಲ ದೇಶಗಳು ಭವಿಷ್ಯದ ದೃಷ್ಟಿಯನ್ನು ಇಟ್ಟುಕೊಂಡು ರಷ್ಯಾದಿಂದ ಎಲ್‌ಎನ್‌ಜಿ ಖರೀದಿಯನ್ನು ಸ್ಥಗಿತಗೊಳಿಸಿದೆ.