ಶ್ರೀಲೀಲಾಗೆ ಸೆಡ್ಡು ಹೊಡೆದ ವೈಷ್ಣವಿ- ‘ಬೇಬಿ’ ನಾಯಕಿಗೆ ಬಂಪರ್ ಆಫರ್ಸ್

Public TV
3 Min Read
vaishnavi chaitanya 1

ಟಾಲಿವುಡ್ (Tollywood) ಅಂಗಳದಲ್ಲಿ ತೆಲುಗು ಅಮ್ಮಾಯಿ ನಟಿ ವೈಷ್ಣವಿ ಚೈತನ್ಯ (Vaishnavi Chaitanya) ಹವಾ ಶುರುವಾಗಿದೆ. ‘ಬೇಬಿ’ (Baby Film) ಸಿನಿಮಾದ ಸಕ್ಸಸ್ ನಂತರ ನಾಯಕಿ ವೈಷ್ಣವಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಸಾಲು ಸಾಲು ಸಿನಿಮಾಗಳ ಭರ್ಜರಿ ಆಫರ್ ಬಾಚಿಕೊಳ್ತಿದ್ದ ನಟಿ ಶ್ರೀಲೀಲಾಗೆ ವೈಷ್ಣವಿ ಸೆಡ್ಡು ಹೊಡೆದಿದ್ದಾರೆ. ಇದನ್ನೂ ಓದಿ:ಅಮ್ಮನ ಜೊತೆ ಅಮರನಾಥ ಯಾತ್ರೆಯಲ್ಲಿ ಸಾನ್ಯ ಅಯ್ಯರ್

Baby FIlm 2

ರಶ್ಮಿಕಾ ಮಂದಣ್ಣಗೆ (Rashmika Mandanna) ಪೈಪೋಟಿ ನೀಡಿ ಭರಾಟೆ ಬ್ಯೂಟಿ ಶ್ರೀಲೀಲಾ (Sreeleela) ತೆಲುಗಿನಲ್ಲಿ ಬಂಪರ್ ಅವಕಾಶಗಳನ್ನ ಬಾಚಿಕೊಳ್ತಿದ್ದರು. ಪೆಳ್ಳಿ ಸಂದಡಿ, ಧಮಾಕ (Dhamaka) ಸಿನಿಮಾದ ನಂತರ ಶ್ರೀಲೀಲಾ ನಟನೆ, ಡ್ಯಾನ್ಸ್ ನೋಡಿ ಫಿದಾ ಆದರು. ರಶ್ಮಿಕಾ ಕೈಬಿಟ್ಟ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗುವ ಮೂಲಕ ಠಕ್ಕರ್ ಕೊಟ್ಟಿದ್ರು. ಈಗ ಶ್ರೀಲೀಲಾ ಆಟಕ್ಕೆಲ್ಲಾ ಬ್ರೇಕ್ ಬೀಳುವ ಸಮಯ ಬಂತಾ ಅಂತಾ ಗುಸು ಗುಸು ಟಾಲಿವುಡ್‌ನಲ್ಲಿ ಶುರುವಾಗಿದೆ.

sreeleela 2

ಅದಕ್ಕೆಲ್ಲಾ ಕಾರಣ ‘ಬೇಬಿ’ ಸಿನಿಮಾದ ಸಕ್ಸಸ್. ಹೌದು, ಆನಂದ ದೇವರಕೊಂಡ (Anand Devarakonda) ಮತ್ತು ವಿರಾಜ್‌ಗೆ ನಾಯಕಿಯಾಗುವ ಮೂಲಕ ವೈಷ್ಣವಿ ಚೈತನ್ಯ ಅದ್ಭುತವಾಗಿ ನಟಿಸಿದ್ದಾರೆ. ಇತ್ತೀಚಿಗೆ ತೆರೆಕಂಡ ‘ಬೇಬಿ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡ್ತಿದೆ. ಸಿನಿಮಾ ಕಂಟೆಂಟ್ ಮತ್ತು ಪ್ರಮುಖ ಪಾತ್ರಧಾರಿಗಳ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲು ಅರ್ಜುನ್ ಅವರು ಅಂದಿರುವ ಅಂದಿನ ಮಾತು ನಿಜವಾಗುವ ಕಾಲ ಬಂದಿದೆ. ತೆಲುಗು ಸಿನಿಮಾರಂಗದಲ್ಲಿ ಮೊದಲು ತೆಲುಗಿನ ನಟಿಯರು ಸದ್ದು ಮಾಡುವಂತೆ ಆಗಲಿ ಎಂದಿದ್ದರು. ಅದನ್ನ ನಿರ್ಮಾಪಕರು ಕೂಡ ಕೊಂಚ ಸೀರಿಯಸ್ ಆಗಿ ತೆಗೆದುಕೊಂಡಂತಿದೆ.

Baby FIlm 1

ಇತ್ತೀಚಿಗೆ ‘ಬೇಬಿ’ ಸಿನಿಮಾ ಸಕ್ಸಸ್ ಸಮಾರಂಭದಲ್ಲಿ ಅಲ್ಲು ಅರ್ಜುನ್ (Allu Arjun) ಸತ್ಯವನ್ನೇ ಹೇಳಿದ್ದಾರೆ. ಒಬ್ಬ ತೆಲುಗು ಸ್ಟಾರ್ ತೆಲುಗು ನೆಲದಲ್ಲಿ ನಿಂತು ಏನು ಮಾತಾಡಬೇಕೊ ಅದನ್ನೇ ನುಡಿದಿದ್ದಾರೆ. ಕನ್ನಡ ನಟಿಯರನ್ನು ಕಂಡರೆ ಅವರಿಗೆ ಹೊಟ್ಟೆ ಉರಿ ಇದೆ ಎನ್ನುವುದು ಸತ್ಯ. ಅದು ಈಗ ಅವರಿಗೆ ಮಾತ್ರ ಅಲ್ಲ ಇಡೀ ಟಾಲಿವುಡ್ ಸಿನಿಮಾರಂಗಕ್ಕೆ ನುಂಗಲಾರದ ತುಪ್ಪ. ಬೇರೆ ಸ್ಟಾರ್ಸ್, ನಿರ್ಮಾಪಕರು, ನಿರ್ದೇಶಕರು ಈ ಬಗ್ಗೆ ಮಾತನಾಡಿಲ್ಲ. ಅಲ್ಲು ಅರ್ಜುನ್ ಕೆಂಡದ ಮೇಲಿನ ಬೂದಿಯನ್ನು ಸರಿಸಿದ್ದಾರೆ ಅಷ್ಟೇ. ಅದೇ ಸತ್ಯ. ಈಗ ಅವರು ಹೇಳಿರುವುದು ಏನು? ನಮ್ಮ ನೆಲದಲ್ಲಿ ಕನ್ನಡದ ನಟಿಯರು, ಪರಭಾಷಾ ನಾಯಕಿಯರು ಬೆಳೆಯುತ್ತಿದ್ದಾರೆ. ಅದರ ಬದಲು ನಮ್ಮ ತೆಲುಗು ಹುಡುಗಿಯರು ಬಣ್ಣದ ಲೋಕಕ್ಕೆ ಬರಬೇಕು ಮಿಂಚಬೇಕು ಎಂದು ಮಾತನಾಡಿದ್ದರು.

allu arjun

ನಮ್ಮ ಭಾಷೆ ನಮ್ಮ ನೆಲದ ಹೆಣ್ಣು ಮಕ್ಕಳು ಬೆಳೆಯಬೇಕು. ಉಳಿಯಬೇಕು. ಕನ್ನಡ ನಟಿಯರ ದರ್ಬಾರ್ ಇದೇ ರೀತಿ ಮುಂದುವರೆದರೆ ನಮ್ಮ ಹುಡುಗಿಯರಿಗೆ ಉಳಿಗಾಲ ಇಲ್ಲ ಎನ್ನುವ ಕಾಳಜಿಯೂ ಇದರಲ್ಲಿ ಸೇರಿದೆ. ಫೈನಲಿ ಇಷ್ಟೆಲ್ಲ ಕಾರಣ ಇಟ್ಟುಕೊಂಡು ಅಲ್ಲು ಅರ್ಜುನ್ ಬಾಯಿ ಬಿಟ್ಟಿದ್ದರು.

vaishnavi chaitanya

ಶ್ರೀಲೀಲಾ ಹತ್ತಕ್ಕೂ ಹೆಚ್ಚು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಡೇಟ್ಸ್ ಸಿಗದೇ ಕೆಲ ನಿರ್ಮಾಪಕರು ವೈಷ್ಣವಿ ಚೈತನ್ಯ ಅವರತ್ತ ಮುಖ ಮಾಡಿದ್ದಾರೆ. ಬೇಬಿ ಸಿನಿಮಾದಲ್ಲಿ ವೈಷ್ಣವಿ ಅವರನ್ನ ನೋಡಿ ಪಡ್ಡೆಹುಡುಗರು ಬೋಲ್ಡ್ ಆಗಿದ್ದಾರೆ. ಬೇಬಿ ನಾಯಕಿಗೆ ಈಗ ಭರ್ಜರಿ ಅವಕಾಶ ಸಿಕ್ತಿದೆ. ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ವೈಷ್ಣವಿ ಕಿರುಚಿತ್ರಗಳ ಮೂಲಕ ಮೊದಲಿಗೆ ಕ್ಯಾಮೆರಾ ಫೇಸ್ ಮಾಡಿದ್ದರು. ಕಿರುಚಿತ್ರದಿಂದ ದೊಡ್ಡ ಚಿತ್ರಕ್ಕೆ ಕೆಲಸ ಮಾಡಲು ಎಂಟು ವರ್ಷ ಬೇಕಾಯಿತು. ವೈಷ್ಣವಿ ಅಲ್ಲು ಅರ್ಜುನ್ ಅಭಿನಯದ ‘ಅಲಾ ವೈಕುಂಠಪುರಂನಲ್ಲಿ’ ಅಲ್ಲು ಅರ್ಜುನ್ ಅವರ ತಂಗಿ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಅಭಿನಯಕ್ಕೆ ಮೆಚ್ಚುಗೆ ಬಂದಿತ್ತು.

‘ಬೇಬಿ’ ಸಿನಿಮಾದ ಯಶಸ್ಸಿನ ನಂತರ ವೈಷ್ಣವಿ ಚೈತನ್ಯ ಅವರು ರಾಮ್ ಪೊತಿನೇನಿ-ಪುರಿ ಜಗನ್ನಾಥ್ ಕಾಂಬೋ ಸಿನಿಮಾಗೆ ನಾಯಕಿಯಾಗಿದ್ದಾರೆ. ಯುವ ನಟರ ಸಿನಿಮಾಗಳಿಗೆ ಬೇಬಿ ನಾಯಕಿ ಬುಕ್ ಆಗ್ತಿದ್ದಾರೆ. ಈ ಮೂಲಕ ಶ್ರೀಲೀಲಾಗೆ ವೈಷ್ಣವಿ ಸೆಡ್ಡು ಹೊಡೆದಿದ್ದಾರೆ. ಇನ್ಮುಂದೆ ಶ್ರೀಲೀಲಾ- ವೈಷ್ಣವಿ ಜಟಾಪಟಿ ಹೇಗಿರಲಿದೆ, ಏನಾಗಲಿದೆ ಎಂಬುದನ್ನ ಕಾದುನೋಡಬೇಕಿದೆ.

Share This Article