ಇಸ್ಲಾಮಾಬಾದ್: ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರ ಕವರ್ ಡ್ರೈವ್ ಕುರಿತಾದ ಪ್ರಶ್ನೆಯೊಂದು ಭೌತಶಾಸ್ತ್ರ ಪುಸ್ತಕದಲ್ಲಿ ಸೇರಿಸಿರುವ ಬಗ್ಗೆ ವೈರಲ್ ಆಗುತ್ತಿದೆ.
Advertisement
ಬಾಬರ್ ಅಜಮ್ ಪಾಕಿಸ್ತಾನ ತಂಡದ ರನ್ ಮಷಿನ್ ವಿಶ್ವಕ್ರಿಕೆಟ್‍ನಲ್ಲಿ ತನ್ನ ಅದ್ಭುತ ಕವರ್ ಡ್ರೈವ್ ಹೊಡೆತಗಳ ಮೂಲಕ ಗಮನಸೆಳೆದ ಆಟಗಾರ. ಇದೀಗ ಇವರ ಕವರ್ ಡ್ರೈವ್ ಕುರಿತಾದ ಪ್ರಶ್ನೆಯೊಂದು ಪಾಕಿಸ್ತಾನದ 9ನೇ ಗ್ರೇಡ್ ಭೌತಶಾಸ್ತ್ರ ಪಠ್ಯದಲ್ಲಿ ಪ್ರಶ್ನೆಯಾಗಿ ನೀಡಲಾಗಿದೆ. ಈ ಪ್ರಶ್ನೆ ಕುರಿತಾದ ಸ್ಕ್ರೀನ್ ಶಾಟ್‍ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಈಗ ಗ್ರೌಂಡ್ ಹೊರಗಡೆಯೂ ದಾಖಲೆ ಬರೆದ ಕೊಹ್ಲಿ
Advertisement
Advertisement
ಬಾಬರ್ ಅಜಮ್ ತನ್ನ ಬ್ಯಾಟ್‍ನಿಂದ ಚೆಂಡಿಗೆ 150 ಜೆ ಚಲನ ಶಕ್ತಿಯನ್ನು ನೀಡುವ ಮೂಲಕ ಕವರ್ ಡ್ರೈವ್ ಹೊಡೆದಿದ್ದಾರೆ. A) ಚೆಂಡಿನ ದ್ರವ್ಯರಾಶಿ 120 ಗ್ರಾಂ ಆಗಿದ್ದರೆ ಚೆಂಡು ಯಾವ ವೇಗದಲ್ಲಿ ಬೌಂಡರಿ ಹೋಗುತ್ತದೆ? B) ಈ ವೇಗದಲ್ಲಿ ಚಲಿಸುವಂತೆ ಮಾಡಲು 450 ಗ್ರಾಂ ದ್ರವ್ಯರಾಶಿಯ ಫುಟ್‍ಬಾಲ್‍ಗೆ ಫುಟ್‍ಬಾಲ್ ಆಟಗಾರ ಎಷ್ಟು ಚಲನ ಶಕ್ತಿಯನ್ನು ನೀಡಬೇಕು ಎಂದು ಪ್ರಶ್ನಿಸಲಾಗಿದೆ. ಇದನ್ನೂ ಓದಿ: ಭಾರತ-ಪಾಕಿಸ್ತಾನ ಪಂದ್ಯದ ವೇಳೆ ನನ್ನ ಮಗಳು ಭಾರತದ ಧ್ವಜವನ್ನೇ ಹಿಡಿದಿದ್ದಳು – ಶಾಹಿದ್ ಅಫ್ರಿದಿ
Advertisement
A question about Babar Azam's cover drive has made it to the Physics syllabus of Class 9 in Pakistan #Cricket pic.twitter.com/QXvH5irBoF
— Saj Sadiq (@SajSadiqCricket) September 14, 2022
ಇದೀಗ ಬಾಬರ್ ಅಜಮ್ ರನ್ ಬರ ಅನುಭವಿಸುತ್ತಿದ್ದಾರೆ. ಏಷ್ಯಾಕಪ್‍ನಲ್ಲಿ ಆಡಿದ ಒಟ್ಟು 6 ಪಂದ್ಯಗಳಿಂದ 68 ರನ್ ಬಾರಿಸಿದ್ದಾರೆ. ಏಷ್ಯಾಕಪ್‍ನಲ್ಲಿ 30 ರನ್ (29 ಎಸೆತ) ಹೆಚ್ಚಿನ ಗಳಿಕೆಯಾಗಿದೆ. ಹಾಗಾಗಿ ಇದೀಗ ಟ್ರೋಲ್‍ಗೆ ಗುರಿಯಾಗಿದ್ದು ಏಷ್ಯಾಕಪ್‍ನ ಸೂಪರ್ ಫೋರ್ ಮತ್ತು ಫೈನಲ್ ಪಂದ್ಯದಲ್ಲಿ ಸತತವಾಗಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಸೋಲು ಕಾಣಲು ಬಾಬರ್ ಅಜಮ್ ಬ್ಯಾಟಿಂಗ್ ಕೂಡ ಪ್ರಮುಖ ಕಾರಣ. ಹಲವು ವರ್ಷಗಳಿಂದ ಪ್ರತಿ ಪಂದ್ಯದಲ್ಲೂ ಮಿಂಚುತ್ತಿದ್ದ ಬಾಬರ್ ಏಷ್ಯಾಕಪ್‍ನಲ್ಲಿ ರನ್ ಗಳಿಸಲು ಪರದಾಡಿದರು. ಇದು ಪಾಕಿಸ್ತಾನ ದಿಢೀರ್ ಕುಸಿತಕ್ಕೆ ಕಾರಣವಾಗಿದೆ. ಹಾಗಾಗಿ ಮುಂದಿನ ಟಿ20 ವಿಶ್ವಕಪ್‍ಗೂ ಮುನ್ನ ಬಾಬರ್ ಫಾರ್ಮ್ ಕಂಡುಕೊಳ್ಳಬೇಕಾಗಿದೆ. ಇದನ್ನೂ ಓದಿ: ಕೊಹ್ಲಿಗೆ ಈ ಸಮಯ ಕಳೆದು ಹೋಗುತ್ತದೆ ಎಂದಿದ್ದ ಬಾಬರ್‌ಗೆ ಟಾಂಗ್ – ಈ ಸಮಯ ಕಳೆದು ಹೋಗಲ್ಲ ಎಂದ ಫ್ಯಾನ್ಸ್