ಕೋಲ್ಕತ್ತಾ: 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ (Pakistan) ತಂಡ ಸೆಮಿ ಫೈನಲ್ (World Cup Semi Final) ಪ್ರವೇಶಿಸುವ ಹಾದಿಯನ್ನೇ ಕಿವೀಸ್ ಪಡೆ ಮುಚ್ಚಿಹಾಕಿದೆ. ಆದರೂ ಆತ್ಮವಿಶ್ವಾಸದಲ್ಲಿರುವ ಪಾಕಿಸ್ತಾನ ತಂಡ ಸೆಮಿಸ್ ಪ್ರವೇಶಿಸಿಯೇ ತೀರುತ್ತೇವೆ ಎಂಬ ವಿಶ್ವಾಸದಲ್ಲಿದ್ದಾರೆ. ಇದಕ್ಕೆ ನಾಯಕ ಬಾಬರ್ ಆಜಂ ನೀಡಿರುವ ಹೇಳಿಕೆ ಸಾಕ್ಷಿಯಾಗಿದೆ.
Babar Azam said, “if Fakhar Zaman stays till 20-30 overs, we can achieve big scores tomorrow”. pic.twitter.com/ZFmJrRIiTx
— Mufaddal Vohra (@mufaddal_vohra) November 10, 2023
Advertisement
ಕೋಲ್ಕತ್ತಾದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ಕುರಿತು ಮಾತನಾಡಿರುವ ಬಾಬರ್ (Babar Azam), ಫಕರ್ ಝಮಾನ್ 20-30 ಓವರ್ ವರೆಗೆ ಕ್ರೀಸ್‌ನಲ್ಲಿ ನಿಂತು ಆಡಿದ್ರೆ, ಖಂಡಿತವಾಗಿಯೂ ಇಂಗ್ಲೆಂಡ್ (England) ವಿರುದ್ಧ ದೊಡ್ಡ ಸ್ಕೋರ್ ಮಾಡುತ್ತೇವೆ ಎಂದಿದ್ದಾರೆ. ಅಲ್ಲದೇ, ನಾಳೆ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದ್ರೆ ಒಂದೇ ಒಂದು ಪಂದ್ಯವಷ್ಟೇ ನಮಗೆ ಬಾಕಿ ಉಳಿದಿದೆ ಎಂದು ಭಾವುಕರಾಗಿ ಹೇಳಿದ್ದಾರೆ. ಇದನ್ನೂ ಓದಿ: ಪಾಕ್ ಮುಂದಿರುವ ಘೋರ ಸವಾಲು ಯಾವುದು? – ಎಷ್ಟು ರನ್ ಅಂತರದಲ್ಲಿ ಗೆದ್ದರೆ ಸೆಮಿಸ್ ತಲುಪಬಹುದು?
Advertisement
Advertisement
2023ರ ಏಕದಿನ ವಿಶ್ವಕಪ್ ಟೂರ್ನಿ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದು, ಇನ್ನೊಂದು ತಂಡಕ್ಕೆ ಅವಕಾಶವಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಆಡಿದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಪಾಕಿಸ್ತಾನ ತಂಡ ಎದುರಿಸಲು ಸಾಧ್ಯವಾಗದ ಸವಾಲನ್ನೇ ಮುಂದಿಟ್ಟಿದೆ. ಒಂದು ವೇಳೆ ಕಿವೀಸ್ ಹಿಂದಿಕ್ಕೆ ಪಾಕ್ ಸೆಮಿಸ್ ಪ್ರವೇಶಿಸಲೇಬೇಕಾದರೆ ಪಾಕ್ ತಂಡ ಊಹಿಸಲು ಸಾಧ್ಯವಾಗಷ್ಟು ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಬೇಕಿದೆ.
Advertisement
ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಿ ಕನಿಷ್ಠ 300 ರನ್ ಗಳಿಸಿದರೆ, ಇಂಗ್ಲೆಂಡ್ ತಂಡವನ್ನು 13 ರನ್‌ಗಳಿಗೆ ಕಟ್ಟಿಹಾಕಬೇಕು. 400 ರನ್ ಗಳಿಸಿದ್ರೆ 112 ರನ್‌ಗಳಿಗೆ, 450 ರನ್ ಗಳಿಸಿದ್ರೆ 162 ರನ್‌ಗಳಿಗೆ, 500 ರನ್ ಗಳಿಸಿದ್ರೆ 211 ರನ್‌ಗಳಿಗೆ ಹಾಲಿ ಚಾಂಪಿಯನ್ಸ್‌ಗಳನ್ನ ಕಟ್ಟಿಹಾಕಬೇಕಾಗುತ್ತದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: World Cup 2023: ಲಂಕಾ ವಿರುದ್ಧ ಕಿವೀಸ್‌ಗೆ 5 ವಿಕೆಟ್‌ಗಳ ಜಯ – ಪಾಕ್ ಮುಂದಿದೆ ಅಸಾಧ್ಯ ಸವಾಲು
ಒಂದು ವೇಳೆ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿದ್ರೆ, ಆಂಗ್ಲರ ಗುರಿಯನ್ನು ಪಾಕಿಸ್ತಾನ ತಂಡ 3 ಓವರ್‌ಗಳ ಒಳಗೆ ಪೂರೈಸಬೇಕಾಗುತ್ತದೆ. ಇದು ಪಾಕ್‌ಗೆ ಅತ್ಯಂತ ಕಠಿಣ ಗುರಿಯಾಗಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಅನುಕೂಲಕರ ಪಿಚ್ ಆಗಿದೆ. ಪಾಕಿಸ್ತಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರೆ 350 ರನ್ ಗಳಿಸುವ ಅವಕಾಶವೂ ಇದೆ. ಆದ್ರೆ ಇಂಗ್ಲೆಂಡ್ ತಂಡವನ್ನು ಎಷ್ಟು ರನ್‌ಗಳಿಗೆ ಕಟ್ಟಿಹಾಕುತ್ತದೆ ಎಂಬುದರ ಮೇಲೆ ಸಮಿಸ್ ಕನಸು ನಿರ್ಧಾರವಾಗುತ್ತದೆ.
ಆದ್ರೆ ನ್ಯೂಜಿಲೆಂಡ್ 9 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ಸಾಧಿಸಿ +0.743 ರನ್‌ರೇಟ್‌ನೊಂದಿಗೆ 4ನೇ ಸ್ಥಾನದಲ್ಲಿದ್ದರೆ, 8ರಲ್ಲಿ 4 ಪಂದ್ಯ ಗೆದ್ದಿರುವ ಪಾಕಿಸ್ತಾನ +0.036 ರನ್‌ರೇಟ್‌ನೊಂದಿಗೆ 5ನೇ ಸ್ಥಾನದಲ್ಲಿದೆ. ಪಾಕಿಸ್ತಾನ ತಂಡ ಸೆಮಿಸ್‌ಗೆ ಪ್ರವೇಶಿಸಲೇಬೇಕೆಂದರೆ ಅತ್ಯಧಿಕ ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಬೇಕಾಗುತ್ತದೆ. ಇಲ್ಲದಿದ್ದರೆ, ಸೋಲು/ಗೆಲುವಿನೊಂದಿಗೆ 2023ರ ವಿಶ್ವಕಪ್ ಟೂರ್ನಿಗೆ ವಿದಾಯ ಹೇಳಲಿದೆ.