ದುಬೈ: ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ಚಾಂಪಿಯನ್ಸ್ ಟ್ರೊಫಿಯ (Champions Trophy) ʻಎʼ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಭಾನುವಾರ (ಇಂದು) ಬದ್ಧ ವೈರಿ ಪಾಕಿಸ್ತಾನ ತಂಡದ ಸವಾಲು ಎದುರಿಸಲಿದೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2:30ಕ್ಕೆ ಪಂದ್ಯ ಆರಂಭವಾಗಲಿದೆ. ಇತ್ತ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಳ್ಳುವ ಉತ್ಸಾಹದಲ್ಲಿ ಭಾರತ ಇದ್ದರೆ, ಮೊಹಮದ್ ರಿಜ್ವಾನ್ (Mohammad Rizwan) ನೇತೃತ್ವದ ಪಾಕಿಸ್ತಾನ, ಟೂರ್ನಿಯಿಂದ ಹೊರಗುಳಿಯುವುದನ್ನು ತಪ್ಪಿಸಬೇಕಾದ ಒತ್ತಡದಲ್ಲಿದೆ. ಈ ನಡುವೆ ಪಾಕ್ ತಂಡದಲ್ಲಿ ಹೈಡ್ರಾಮಾ ನಡೆದಿದೆ.
Advertisement
ಪಾಕಿಸ್ತಾನದ (Pakistan) ಸ್ಟಾರ್ ಕ್ರಿಕೆಟರ್ ಬಾಬರ್ ಆಜಂ (Babar Azam) ಅಭ್ಯಾಸಕ್ಕೆ ಗೈರಾಗುತ್ತಿರುವುದು ಕಂಡುಬಂದಿದೆ. ಶನಿವಾರ ಪಾಕ್ ತಂಡದ ಅಭ್ಯಾಸ ವೇಳೆ ಬಾಬರ್ ಕಾಣದ ಹಿನ್ನೆಲೆಯಲ್ಲಿ ಅವರನ್ನು ಭಾನುವಾರದ ಪಂದ್ಯಕ್ಕೆ ಪರಿಗಣಿಸಲಾಗುವುದಿಲ್ಲ ಎಂಬ ವದಂತಿ ಹಬ್ಬಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಬಾಬರ್ ಕಣಕ್ಕಿಳಿಯುತ್ತಾರೆ ಎನ್ನುವ ಬಗ್ಗೆ ಪಿಸಿಬಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದರ ಹೊರತಾಗಿ ʻಏನೇ ಆಗಲಿ ಭಾರತದ ವಿರುದ್ಧ ಗೆಲ್ಲಲೇಬೇಕುʼ ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಹೇಳಿದ್ದಾರೆ. ಇದನ್ನೂ ಓದಿ: `ಮಹಾ’ ಸಾರಿಗೆ ನಿಗಮಕ್ಕೆ `ಗ್ಯಾರಂಟಿ’ ಭಾರ; ಉಚಿತ ಯೋಜನೆಯಿಂದ ದಿನಕ್ಕೆ 3 ಕೋಟಿ ನಷ್ಟ: ಸಚಿವ ಪ್ರತಾಪ್
Advertisement
Advertisement
ಬಾಬರ್ ಅಜಂ ಮೇಲೆ ಭಾರೀ ಒತ್ತಡ
ಅತ್ತ ಪಾಕಿಸ್ತಾನ ಪ್ರಮುಖ ಬ್ಯಾಟರ್‌ಗಳ ಪೇಲವ ಪ್ರದರ್ಶನದಿಂದ ಚಿಂತಕ್ರಾಂತವಾಗಿದೆ. ತಂಡದ ಸ್ಟಾರ್ ಎನಿಸಿರುವ ಬಾಬರ್ ಅಜಂ, ಕಿವೀಸ್ ವಿರುದ್ಧ 90 ಎಸೆತಗಳಲ್ಲಿ 64 ರನ್ ಗಳಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಗಾಯದಿಂದಾಗಿ ಫಖರ್ ಜಮಾನ್ ಹೊರಗುಳಿದಿರುವುದು ಕೂಡ ಪಾಕ್‌ನ ಒತ್ತಡವನ್ನು ತೀವ್ರಗೊಳಿಸಿದೆ. ಇವರ ಬದಲಿಗೆ ಇಮಾಮ್ ಉಲ್ ಹಕ್ ತಂಡವನ್ನು ಸೇರ್ಪಡೆಗೊಂಡಿದ್ದು, ಅವರ ಸ್ಥಾನವನ್ನು ಎಷ್ಟರ ಮಟ್ಟಿಗೆ ತುಂಬಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.
Advertisement
ನಿವೃತ್ತಿ ಅಂಚಿನಲ್ಲಿರುವ ರನ್ ಮಷಿನ್ ವಿರಾಟ್ ಕೊಹ್ಲಿ, ಇತ್ತೀಚಿಗೆ ಉತ್ತಮ ಆಟವಾಡುವಲ್ಲಿ ಎಡವಿದ್ದಾರೆ. ಆದರೆ ಪಾಕಿಸ್ತಾನ ವಿರುದ್ಧದ ತಮ್ಮ ಅಮೋಘ ಫಾರ್ಮ್ ಮರುಕಳಿಸುವ ಜಾಣ್ಮೆಯನ್ನು ಹೊಂದಿದ್ದಾರೆ. ಇದನ್ನೂ ಓದಿ: Publictv Explainer: ದತ್ತು ಸ್ವೀಕಾರದ ಬಗ್ಗೆ ನಿಮಗೆಷ್ಟು ಗೊತ್ತು? – ನಿಯಮ ಏನು, ಪ್ರಕ್ರಿಯೆ ಹೇಗೆ?
ಬೌಲಿಂಗ್ ವಿಭಾಗದಲ್ಲಿ ಲಯ ಕಂಡುಕೊಂಡಿರುವ ವೇಗಿ ಮೊಹಮ್ಮದ್ ಶಮಿಗೆ ಹರ್ಷಿತ್ ರಾಣಾ ಉತ್ತಮ ಸಾಥ್ ನೀಡುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಶಮಿ, ಗಾಯಾಳು ಜಸ್‌ಪ್ರೀತ್ ಬುಮ್ರಾ ಅವರ ಅಲಭ್ಯತೆಯನ್ನು ಕಾಡದಂತೆ ನೋಡಿಕೊಂಡಿದ್ದರು. 2017ರ ಫೈನಲ್‌ನಲ್ಲಿ ಅರ್ಧ ಶತಕ ಗಳಿಸಿಯೂ ತಂಡವನ್ನು ಸೋಲಿನಿಂದ ಪಾರು ಮಾಡಲು ವಿಫಲಗೊಂಡ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಈ ಬಾರಿ ನಿರಾಸೆಯನ್ನು ಸರಿದೂಗಿಸುವ ವಿಶ್ವಾಸದಲ್ಲಿದ್ದಾರೆ. ಸದ್ಯ ಬದ್ಧವೈರಿಗಳ ನಡುವಿನ ಕಾದಾಟಕ್ಕೆ ದುಬೈ ಕ್ರೀಡಾಂಗಣ ಸಾಕ್ಷಿಯಾಗಲಿದ್ದು, ಕುತೂಹಲ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಪಾಕ್ ವಿರುದ್ಧ ಭಾರತದ ಗೆಲುವುಗಾಗಿ ವಿಶೇಷ ಪೂಜೆ- ಬೆಂಗಳೂರು ಕ್ರೀಡಾಭಿಮಾನಿಗಳಿಂದ ಶುಭ ಹಾರೈಕೆ