ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಬಾಬಾ ರಾಮದೇವ್‌

Public TV
1 Min Read
BABA RAMDEV

ತಿರುಪತಿ: ಗೋವನ್ನು ಭಾರತದ ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಲು ಯೋಗ ಗುರು ಬಾಬಾ ರಾಮದೇವ್‌ ಒತ್ತಾಯಿಸಿದ್ದಾರೆ.

GOVU POOJA

ಟಿಟಿಡಿ ವತಿಯಿಂದ ಆಂಧ್ರ ಪ್ರದೇಶದ ತಿರುಪತಿಯಲ್ಲಿ ಆಯೋಜಿಸಿದ್ದ “ಗೋ ಮಹಾ ಸಮ್ಮೇಳನ”ದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಮಸೂದೆಯನ್ನು ತರಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ: ಮೋದಿ ಶುಭಾಶಯ

ಈ ಸಂಬಂಧ ಟಿಟಿಡಿ ಟ್ರಸ್ಟ್‌ ಬೋರ್ಡ್‌ ಪ್ರಸ್ತಾಪ ಹೊರಡಿಸಿದೆ ಎಂದು ಹೇಳಿದರು.

Cow copy

ಪತಂಜಲಿ ಪೀಠವು ಈಗಾಗಲೇ ಗೋ ಸಂರಕ್ಷಣಾ ಅಭಿಯಾನವನ್ನು ಆರಂಭಿಸಿದೆ. ಗೋವು ಮಹಾ ಸಮ್ಮೇಳನದ ನಿರ್ಣಯಗಳು ಎಲ್ಲ ಗೋ ಪ್ರೇಮಿಗಳಲ್ಲಿ ಪ್ರತಿಧ್ವನಿಸುತ್ತಿದೆ ಎಂದರು. ಇದನ್ನೂ ಓದಿ: ಕೋಟೆನಾಡಲ್ಲಿ ಅಸ್ಪೃಶ್ಯತೆ, ಕೋಮುವಾದ ವಿರೋಧಿಸಿ 101 ಜನ ಬೌದ್ಧ ಧರ್ಮಕ್ಕೆ ಮತಾಂತರ

ಗೋವು ಮಹಾ ಸಮ್ಮೇಳನ ಕಾರ್ಯಕ್ರಮ ಕುರಿತು ಟಿಟಿಡಿ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರಿಗೆ ಮಾಹಿತಿ ನೀಡಿತ್ತು. ಈ ವೇಳೆ ಹಿಂದೂ ಧಾರ್ಮಿಕ ಪ್ರಚಾರಕ್ಕಾಗಿ ಇತರ ಟಿಟಿಡಿ ಕಾರ್ಯಕ್ರಮಗಳನ್ನು ಸಿಎಂ ಶ್ಲಾಘಿಸಿದರು. ವಿಶೇಷವಾಗಿ ಟಿಟಿಡಿ ಅಧ್ಯಕ್ಷ ವೈ.ಬಿ.ಸುಬ್ಬಾ ರೆಡ್ಡಿ ಅವರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಬಾಬಾ ರಾಮದೇವ್‌ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *