ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ಬಾಹುಬಲಿ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಬಲ್ಲಾಳದೇವನಾಗಿ ಕಾಣಿಸಿಕೊಂಡ ರಾಣಾ ದಗ್ಗುಬಾಟಿ ಹೊಸ ಪ್ರಯೋಗಗಳತ್ತ ಗಮನ ಹರಿಸಿದ್ದಾರೆ. ಹೊಸ ಪ್ರಯೋಗವೆಂದರೆ ಅದು ಸಿನಿಮಾ ಇಂಡಸ್ಟ್ರಿಗೆ ಸಂಬಂಧಪಟ್ಟಿದೆ. ಹೌದು, ಸೌತ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುವತ್ತ ಹೊಸ ಹೆಜ್ಜೆ ಇಟ್ಟಿರುವ ರಾಣಾ ದಗ್ಗುಬಾಟಿ ಇದೀಗ ಬಾಲಿವುಡ್‌ನಲ್ಲೂ ನಿರ್ಮಾಣ ಮಾಡಲು ಮುಂದಾಗುತ್ತಿದ್ದಾರೆ.
ಸ್ಪಿರಿಟ್ ಹೆಸರಿನ ಸಂಸ್ಥೆಯನ್ನ ಆರಂಭಿಸಿ ಈ ಮೂಲಕ ವಿಎಫ್‌ಎಕ್ಸ್ ಸ್ಟುಡಿಯೋವನ್ನ ಆರಂಭಿಸಿದ್ದಾರೆ. ಅಲ್ಲದೇ ಉದ್ಯಮದಲ್ಲೂ ತೊಡಗಿಸಿಕೊಂಡಿರುವ ರಾಣಾ. ಇನ್ನು ದುಲ್ಕರ್ ಸಲ್ಮಾನ್ ನಟನೆಯ ಕಾಂತಾ ಸಿನಿಮಾಗೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ತೆರೆಗೆ ಬರುವ ಮುಂಚೆಯೇ ಮತ್ತೊಂದು ದಿಟ್ಟ ನಿರ್ಧಾರವನ್ನ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ವಿಭಿನ್ನ ರೀತಿಯ ಸಿನಿಮಾ ಮಾಡಲು ಘೋಷಣೆ ಮಾಡಿದ್ದಾರೆ.ಇದನ್ನೂ ಓದಿ: ಕಿಚ್ಚ ಸುದೀಪ್‌ಗೆ ವಿಶೇಷ ಗಿಫ್ಟ್ ನೀಡಲಿದ್ದಾರೆ ಮಲ್ಲಮ್ಮ
ನಟನೆ, ನಿರ್ಮಾಣದ ಜೊತೆ ಜೊತೆಗೆ ಉದ್ಯಮದಲ್ಲಿಯೂ ತಮ್ಮನ್ನ ತೊಡಗಿಸಿಕೊಂಡಿರುವ ರಾಣಾ ದಗ್ಗುಬಾಟಿ ಸದ್ಯದಲ್ಲಿಯೇ ಸಿನಿಮಾವನ್ನ ನಿರ್ಮಾಣ ಮಾಡಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೊಸ ರೀತಿಯ ಕಂಟೆಂಟ್ ಎದುರು ನೋಡ್ತಿರುವ ಸಿನಿಮಾ ಅಭಿಮಾನಿಗಳಿಗೆ ಹೊಸ ಹೊಸ ಕಂಟೆಂಟ್ ಕೊಡಲು ನಿರ್ಮಾಪಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ ರಾಣಾ.

