ಕಲಬುರಗಿ: ಬಡವರ ಸೈಟ್‌ಗಳು ಶ್ರೀಮಂತರ ಪಾಲಾಗಿವೆ. ಬ್ರೋಕರ್‌ಗಳ ಮೂಲಕ ರಿಯಲ್ ಎಸ್ಟೇಟ್‌ಗಳ ಪಾಲಾಗಿವೆ ಎಂದು ಮುಡಾ ಹಗರಣ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ವಾಗ್ದಾಳಿ ನಡೆಸಿದರು.
ಮುಡಾದಲ್ಲಿ 700 ಕೋಟಿ ಅವ್ಯವಹಾರದ ಬಗ್ಗೆ ಇಡಿ ವರದಿ ಕೇಸ್ ಕುರಿತು ಕಲಬುರಗಿಯಲ್ಲಿ ಮಾತನಾಡಿದ ಅವರು, ಇ.ಡಿ ರಾಜಕೀಯ ಪ್ರೇರಿತವಾಗಿ ಕಾಂಗ್ರೆಸ್ ಅವರನ್ನ ಟಾರ್ಗೆಟ್ ಮಾಡ್ತಿದೆ ಅಂತಾ ಇವತ್ತೋ ನಾಳೆಯೋ ಮುಖ್ಯಮಂತ್ರಿ ಹೇಳಿಕೆ ಕೊಡಬಹುದು. ಮುಡದಲ್ಲಿ ಹಗರಣ ಆಗಿಲ್ಲ ಅಂತಾ ಸಿಎಂ ಹೇಳಿದ್ರು. ನಾವು ಕೂಡ ಹೋರಾಟ ಮಾಡಿದ್ದೇವೆ. ಬ್ರೋಕರ್‌ಗಳ ಮೂಲಕ ರಿಯಲ್ ಎಸ್ಟೇಟ್‌ಗಳ ಪಾಲಾಗಿವೆ. ಬಡವರ ಸೈಟ್‌ಗಳು ಶ್ರೀಮಂತರ ಪಾಲಾಗಿವೆ. ಮೊದಲ ಹಂತದಲ್ಲಿ ಇ.ಡಿ 700 ಕೋಟಿಯಲ್ಲಿ ಅವ್ಯವಹಾರ ಆಗಿದೆ ಅಂತ ಹೇಳಿದೆ. ಕಾನೂನು ಬಾಹಿರವಾಗಿ ಸೈಟ್‌ಗಳನ್ನ ಹಂಚಿಕೆ ಮಾಡಲಾಗಿದೆ ಅನ್ನೋದು ಇ.ಡಿ ವರದಿ ನೀಡಿದೆ ಎಂದು ತಿಳಿಸಿದರು.
ವಕ್ಫ್ ವಿವಾದ ಕುರಿತು ಮಾತನಾಡಿ, ರಾಜ್ಯದಲ್ಲಿ ಕೆಲವು ತಿಂಗಳಿನಿಂದ ರೈತರ ಜಮೀನು, ಮಠ-ಮಂದಿರಗಳ ಜಾಗವನ್ನು ವಕ್ಫ್ ಕಬಳಿಸುವ ಹುನ್ನಾರ ನಡೆದಿದೆ. ಹೀಗಾಗಿ, ವಕ್ಫ್ ವಿರುದ್ಧ ಹೋರಾಟ ಇಟ್ಟುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಆರ್.ಅಶೋಕ್ ದೆಹಲಿ ಪ್ರವಾಸ ಕುರಿತು ಮಾತನಾಡಿ, ಆರ್.ಅಶೋಕ್ ಅವರು ವಿಪಕ್ಷ ನಾಯಕರಿದ್ದಾರೆ. ವರಿಷ್ಠರ ಭೇಟಿಗೆ ದೆಹಲಿಗೆ ಹೋಗಿರಬಹುದು. ಅದರ ಬಗ್ಗೆ ನಂಗೆ ಮಾಹಿತಿ ಇಲ್ಲ ಎಂದರು.
ಬಣ ಫೈಟ್ ಬಗ್ಗೆ ಮಾತನಾಡಿ, ಡಿ.7 ರಂದು ಕೋರ್ ಕಮೀಟಿ ಸಭೆ ಇದೆ. ಅವತ್ತು ಎಲ್ಲವೂ ಸರಿ ಹೋಗುತ್ತೆ. ಯತ್ನಾಳ್, ಸೋಮಶೇಖರ್ ಬಗ್ಗೆ ದಿನ ಬೆಳಗಾದ್ರೆ ಮಾತನಾಡೋಕೆ ಹೋಗಲ್ಲ ಎಂದು ಗರಂ ಆದರು.
ಯಡಿಯೂರಪ್ಪ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಯಡಿಯೂರಪ್ಪ ಕಂಡ್ರೆ ಇನ್ನೂ ಸಿಎಂಗೆ ಭಯ. ಯಡಿಯೂರಪ್ಪ ಒಬ್ಬ ಹೋರಾಟಗಾರ. ಹಾಗಾಗಿ ಸಿಎಂ ಮತ್ತು ಸರ್ಕಾರಕ್ಕೆ ಭಯ. ಈ ನಿಟ್ಟಿನಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದಾರೆ. ನಾವು ಯಾವುದಕ್ಕೂ ಹೆದುರುವ ಬಗ್ಗುವ ಮಾತೆ ಇಲ್ಲ ಎಂದು ತಿಳಿಸಿದರು.