ಬೆಂಗಳೂರು: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯದು ಆತ್ಮಹತ್ಯೆ ಅಲ್ಲ, ಅದೊಂದು ಕೊಲೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಮಾತಾಡಿದ ವಿಜಯೇಂದ್ರ, ಶಾಸಕರ ವಿರುದ್ಧ ಎಫ್ಐಆರ್ ದಾಖಲಾಗದ ವಿಚಾರಕ್ಕೆ ಕಿಡಿಕಾರಿದರು. ಅಧಿಕಾರದ ದರ್ಪದಿಂದ ಕಾಂಗ್ತೆಸ್‌ನವ್ರು ಹೇಳಿಕೆ ಕೊಡ್ತಿದ್ದಾರೆ. ವಿನಯ್ ಸೋಮಯ್ಯದು ಆತ್ಮಹತ್ಯೆ ಅಲ್ಲ ಅದೊಂದು ಕೊಲೆ ಎಂದು ಆರೋಪಿಸಿದರು.
ಇದರ ಹಿಂದೆ ಯಾರೆಲ್ಲ ದುಷ್ಟ ಶಕ್ತಿಗಳು ಇವೆ ಅಂತ ಎಲ್ಲರಿಗೂ ಗೊತ್ತಿದೆ. ಅವರಿಗೆ ಶಿಕ್ಷೆ ಆಗಲೇಬೇಕು. ನಾವು ಕಾನೂನು ಹೋರಾಟ ಮಾಡ್ತೇವೆ. ಇವತ್ತು ಕಾನೂನು ತಜ್ಞರ ಜೊತೆ ಮುಂದಿನ ಹೋರಾಟ ಬಗ್ಗೆ ಚರ್ಚೆ ಮಾಡ್ತೇನೆ ಎಂದು ತಿಳಿಸಿದರು.