ಗದಗ: ದೇವರ ದಯದಿಂದ 2023ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬಂದರೆ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆ ಅಡವಿಟ್ಟ ವಿಚಾರವಾಗಿ ಮಾತನಾಡಿದರು. ಇಲಾಖೆ ಆಸ್ತಿ ಅಡವಿಟ್ಟಿರುವುದು ನಿಜ. ಅಡವಿಟ್ಟ ಉದ್ದೇಶ ಸಿಬ್ಬಂದಿ ಭವಿಷ್ಯದ ನಿಧಿಗಾಗಿ. ಹೆಚ್ಚು ಬಡ್ಡಿ ಬರಿಸಬೇಕಾಗಿತ್ತು. ಅದನ್ನು ತಪ್ಪಿಸಲು ಕಡಿಮೆ ಬಡ್ಡಿದರ ದೊರೆಯುವ ಹಿನ್ನಲೆ, ಅಡಮಾನ ಇಡಲಾಗಿದೆ. ವೈಯಕ್ತಿಕವಾಗಿ ಇಲ್ಲಿ ಬಳಕೆ ಮಾಡುವದು ಏನೂ ಇಲ್ಲ. ಎಲ್ಲವೂ ಭವಿಷ್ಯದ ನಿಧಿ ಸಲುವಾಗಿ ಕೊಟ್ಟಿದ್ದು. ಸಾರಿಗೆ ಲಾಭದಾಯಕದ ಉದ್ದೇಶವಿಲ್ಲ, ಜನರ ಸೇವೆ ನೀಡುವ ಉದ್ದೇಶವಿದೆ. ಸಿದ್ಧರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸದಸ್ಯತ್ವಕ್ಕೆ ಗಿಫ್ಟ್ ನೀಡುವ ವಿಚಾರಕ್ಕೆ ವ್ಯಂಗ್ಯವಾಡಿದರು.
Advertisement
Advertisement
ಸಿದ್ಧರಾಮಯ್ಯ ತಮ್ಮ ಸ್ವಕ್ಷೇತ್ರದಲ್ಲಿ ಹೊಸ ಸಂಪ್ರದಾಯ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸದಸ್ಯತ್ವ ಹೆಚ್ಚಿಗೆ ಮಾಡಿದವರಿಗೆ ಟಂಟಂ, ಬೈಕ್, ಟಿವಿ, ಪ್ರಿಜ್, ಮೊಬೈಲ್ ಹೀಗೆ ಅನೇಕ ವಸ್ತುಗಳನ್ನು ಕೊಡುತ್ತೆವೆ ಅಂತಿದ್ದಾರೆ. ಕಾಂಗ್ರೆಸ್ ಈಗ ಎಂತಹ ದುಸ್ಥಿತಿಗೆ ಬಂದಿದೆ ನೋಡಿ. ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಆಮಿಷ ಒಡ್ಡುವ ಪರಿಸ್ಥಿತಿಗೆ ಕಾಂಗ್ರೆಸ್ ಬಂದಿದೆ. ಆದರೆ ನಾವು ಎಂಥಹ ಪರಿಸ್ಥಿತಿ ಬಂದರೂ ರಾಜಿಯಾಗೋ ಪ್ರಶ್ನೆ ಇಲ್ಲ. ಸಿದ್ಧರಾಮಯ್ಯ ಹಾಗೂ ಡಿಕೆಶಿ ಕೇವಲ ರಾಜಕಾರಣಕ್ಕೆ ಫೋಟೋ ಪೋಸ್‍ಗಾಗಿ ಇಬ್ಬರು ಜೊತೆಯಾಗಿರ್ತಾರೆ. ಇಬ್ಬರೂ ನಾನು ಸಿಎಂ ಆಗಬೇಕು ನಾನು ಸಿ.ಎಂ ಆಗಬೇಕು ಎಂದು ಪೈಪೋಟಿ ಜೊತೆ ಹಗಲು ಕಸನು ಕಾಣುತ್ತಿದ್ದಾರೆ. ಆದರೆ ಇಬ್ಬರೂ ಮುಖ್ಯಮಂತ್ರಿ ಆಗಲ್ಲ. ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲ್ಲ ಅಂದಮೇಲೆ ಮುಖ್ಯಮಂತ್ರಿ ಹೇಗೆ ಆಗ್ತಾರೆ ಅಂತ ವ್ಯಂಗ್ಯವಾಡಿದ್ರು. ಇದನ್ನೂ ಓದಿ: ಮೈಸೂರು ವಿವಿಯಿಂದ ಪುನೀತ್‌ಗೆ ಮರಣೋತ್ತರ ಗೌರವ ಡಾಕ್ಟರೇಟ್
Advertisement
Advertisement
ಕಾಂಗ್ರೆಸ್ ಹಿಂದುಳಿದ ಜಾತಿಗಳ ಆಧಾರದ ಮೇಲೆ ರಾಜಕಾರಣ ಮಾಡ್ತಿದ್ದಾರೆ ಎಂದು ಆರೋಪಿಸಿದರು. ಪಂಚರಾಜ್ಯ ಚುನಾವಣೆ ನೋಡಿದರೆ ಗೊತ್ತಾಗುತ್ತೆ, ಕಾಂಗ್ರೆಸ್ ದೂಳಿಪಟ ಆಗಿದೆ. ಕಾಂಗ್ರೆಸ್ ಪಕ್ಷ ಈಗ ಪಾರ್ಟ್ ಟೈಮ್ ಪಾರ್ಟಿ ಆಗಿ ಉಳದಿದೆ ಎಂದು ಲೇವಡಿ ಮಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ್ರೆ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತೆವೆ ಎಂದು ಚುನಾವಣೆಗೂ ಮುನ್ನ ಬಂಪರ್ ಗಿಪ್ಟ್ ಆಫರ್ ನೀಡುವ ಮೂಲಕ ಮಹಿಳೆಯರ ಮತಕ್ಕೆ ಶ್ರೀರಾಮುಲು ಕಣ್ಣು ಹಾಕಿದ್ದಾರೆ. ಇದನ್ನೂ ಓದಿ: ತಾಯಿಗಾಗಿ ಔಷಧಿ ಹುಡುಕುತ್ತಾ ಹೊರಟ ಮಗಳು- ರಷ್ಯಾ ದಾಳಿಗೆ ಬಲಿ