ಬಳ್ಳಾರಿ: ಕೇಂದ್ರ ಬಜೆಟ್ ಜನಪರ ಬಜೆಟ್ ಹಾಗೂ ದೇಶ ವೇಗವಾಗಿ ಬೆಳೆಯಲು ಅನುಕೂಲವಾಗುವ ಬಜೆಟ್ ಎಂದ ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಾಂಕ್ರಾಂಮಿಕ ಕಾಲದಲ್ಲೂ ಒಳ್ಳೆ ಬಜೆಟ್ ಮಂಡನೆ ಮಾಡಿದ್ದಾರೆ. ಪ್ರಧಾನಿ ಮೋದಿ ಹಾಗೂ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
Advertisement
Advertisement
100 ಕೋಟಿ ಜನರಿಗೆ ಲಸಿಕೆ ಕೊಟ್ಟು ಜನರ ಪ್ರಾಣ ಉಳಿಸಿದ್ದಾರೆ. ಈ ರೀತಿಯ ಕಷ್ಟ ಪರಿಸ್ಥಿತಿಯಲ್ಲಿ ಸಹ ಒಳ್ಳೆಯ ಬಜೆಟ್ ನೀಡಿದ್ದಾರೆ. ಈ ಬಜೆಟ್ ನಲ್ಲಿ ಮಾಹಿತಿ ತಂತ್ರಜ್ಞಾನ, ಐಟಿ ಬಿಟಿಗೆ ಒತ್ತು ಕೊಟ್ಟಿದ್ದಾರೆ ಎಂದರು.
Advertisement
ರೈತಪರ ಅನೇಕ ಯೋಜನೆಗಳಿಂದ ರೈತ ಹಿತ ಕಾದಿದ್ದಾರೆ. ಇದರ ಜೊತೆಗೆ ಆರೋಗ್ಯಕ್ಕೆ, ಶಿಕ್ಷಣಕ್ಕೆ, ರಸ್ತೆ, ಸಾರಿಗೆ, ಮೂಲಭೂತ ಸಮಸ್ಯೆಗೆ ಸ್ಪಂದಿಸಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ಬದಲಾವಣೆ ಮಾಡಿದ್ದಾರೆ. ಇನ್ನು 2022ರ 5ಜಿ ತರಲು ಮುಂದಾಗಿದ್ದು, ಬಹುದಿನದ ಕನಸು ನನಸಾಗಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಗ್ರಾಮೀಣ, ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕ: ಬಿಎಸ್‌ವೈ ಮೆಚ್ಚುಗೆ
Advertisement
ದೇಶದಲ್ಲಿ ಎಲ್ಲೇ ಇದ್ದರೂ ಭೂಮಿ ಖರಿದಿಸಲು ರಿಜಿಸ್ಟರ್ ಮಾಡಿಸಲು ಅನುಮಾಡಿರೋದು ಒಳ್ಳೆಯದು. ಇದರಿಂದ ದೇಶದ ಬಹುತೇಕ ಜನರಿಗೆ ಅನುಕೂಲ ಆಗಲಿದೆ. ಮಹಿಳೆಯ ಸಬಲಿಕರಣಕ್ಕಾರಿ ಮಿಷನ್ ಶಕ್ತಿ ಜಾರಿಗೆ ತಂದಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಬಸ್ ಉಚಿತ ಕೊಡಲು ಮುಂದಾಗಿರೋದು ಒಳ್ಳೆದು. ನದಿ ಜೋಡಣೆಗೆ ಪೂರಕವಾಗುವ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ: ಶಶಿ ತರೂರ್