ಬೆಂಗಳೂರು: ಇಂದು ಸುಪ್ರೀಂಕೋರ್ಟ್ ಮುಂದೆ ನೂತನ ಸಿಎಂ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತುಪಡಿಸಬೇಕಿದೆ. ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಹೈಡ್ರಾಮಗಳ ಬಹುಮತ ಸಾಬೀತುಪಡಿಸಲು ಅಗತ್ಯವಿರುವ ಸಂಖ್ಯಾಬಲವನ್ನು ಹೊಂದಿಸೋ ಬಗ್ಗೆ ಹಾಗು ಮುಂದಿನ ರಣತಂತ್ರಗಳ ಬಗ್ಗೆ ರಾತ್ರಿಯಿಡೀ ಬಿಜೆಪಿ ನಾಯಕರು ಚರ್ಚೆ ನಡೆಸಿದ್ದಾರೆ.
ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸಭೆಯಲ್ಲಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್, ಜೆಪಿ ನಡ್ಡಾ, ಧಮೇಂದ್ರ ಪ್ರಧಾನ್ ಮತ್ತು ಅನಂತ್ ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ರು.
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜ್ಯದ ಬಾರ್ಡರ್ ದಾಟಿದ್ದು ಬಿಎಸ್‍ವೈಗೆ ಫುಲ್ ಟೆನ್ಶನ್ ತರಿಸಿದೆ. ರಾತ್ರಿ ಮನೆಗೆ ಕೂಡ ಹೋಗದೇ ಮುಂದೇನು ಮಾಡಬೇಕು ಅನ್ನೋ ಬಗ್ಗೆ ತಲೆಕೆಡಿಸಿಕೊಂಡು ಕುಳಿತಿದ್ರು ಅಂತಾ ಎನ್ನಲಾಗಿದೆ. ಕೆಲವೇ ಕ್ಷಣಗಳ ಹಿಂದೆ ಬಿಎಸ್‍ವೈ ಮನೆಗೆ ಹಿಂದಿರುಗಿದ್ದಾರೆ. ಈ ನಡುವೆ ನೇರವಾಗಿ ಎಲ್ಲೂ ಕಾಣಿಸಿಕೊಳ್ಳದಿರಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಬಹುಮತ ಹೇಗೆ ಸಾಬೀತು ಮಾಡಬಹುದು ಯಡಿಯೂರಪ್ಪ ಅನ್ನೋದನ್ನು ನೋಡೋದಾದ್ರೆ:
* ಶಾಸಕರು ಪ್ರಮಾಣ ಸ್ವೀಕಾರ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಕೆಲವರನ್ನು ಸೆಳೆದು ರಾಜೀನಾಮೆ ಕೊಡಿಸಬಹುದು.
* ಒಂದು ಪಕ್ಷದ ಒಟ್ಟು ಸಂಖ್ಯೆಯ 3ನೇ 2ರಷ್ಟು ಶಾಸಕರನ್ನು ಬಿಜೆಪಿಗೆ ಬರುವಂತೆ ಮಾಡುವುದು.
* ಕಾನೂನಿನ ರಿಸ್ಕ್ ತೆಗೆದುಕೊಂಡು ಶಾಸಕರಿಂದ ಅಡ್ಡ ಮತದಾನ ಮಾಡಿಸಬಹುದು.
* ಚುನಾಯಿತ ಸದಸ್ಯರನ್ನು ಪ್ರಮಾಣ ವಚನದಿಂದ ದೂರ ಉಳಿಸಿ ಸದನದ ಸಂಖ್ಯಾಬಲ ಕುಗ್ಗಿಸಬಹುದು.
* ಬಹುಮತ ಸಾಬೀತಿನ ಬಳಿಕ ಆ ಪ್ರತಿನಿಧಿಗಳನ್ನ ಶಪಥ ಸ್ವೀಕರಿಸುವಂತೆ ಮಾಡಬಹುದು.
* ಜೆಡಿಎಸ್ ಬೆಂಬಲ ಪಡೆಯಲು ಮತ್ತೊಂದು ಸುತ್ತು ಮಾತುಕತೆಗೆ ಮುಂದಾಗಬಹುದು.
* ಕಾಂಗ್ರೆಸ್ ರೀತಿಯಲ್ಲಿ ಭೇಷರತ್ ಬೆಂಬಲವನ್ನು ಜೆಡಿಎಸ್‍ಗೆ ಬಿಜೆಪಿಯೂ ನೀಡಬಹುದು.
ರಾಜ್ಯಪಾಲರಿಗೆ ಸರ್ಕಾರ ರಚನೆ ವಿಚಾರವಾಗಿ ಬಿಎಸ್ ಯಡಿಯೂರಪ್ಪ ಬರೆದಿರುವ ಪತ್ರದಲ್ಲಿ ಏನಿದೆ? ಬಹುಮತ ಸಾಬೀತಿಗೆ ಬೇಕಾದ ಬೆಂಬಲ ಯಾರು ನೀಡ್ತಾರೆ? ಎಂಬೆಲ್ಲ ಮಾಹಿತಿ ಆಧರಿಸಿ ವಿಚಾರಣೆ ನಡೆಯಲಿದೆ. ಇದರ ಜೊತೆಗೆ ಹಿರಿಯ ವಕೀಲ ರಾಮ್ ಜೇಠ್ಮಾಲಾನಿ ಕೂಡಾ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿದ್ದು, ಯಾವ ಆಯಾಮದಲ್ಲಿ ವಾದ ಮಂಡಸಿಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಈ ಎಲ್ಲ ಅರ್ಜಿಯ ಜೊತೆಗೆ ಆಂಗ್ಲೋ ಇಂಡಿಯನ್ ಶಾಸಕರನ್ನು ತರಾತುರಿಯಲ್ಲಿ ರಾಜ್ಯಪಾಲರು ನೇಮಕ ಮಾಡಿದ್ದಾರೆ ಅಂತಾ ಆರೋಪಿಸಿರುವ ಕಾಂಗ್ರೆಸ್ ಜೆಡಿಎಸ್ ಜಂಟಿಯಾಗಿ ಮತ್ತೊಂದು ಅರ್ಜಿಯೊಂದನ್ನ ಸುಪ್ರಿಂಕೊರ್ಟ್ ಗೆ ಸಲ್ಲಿಸಿದ್ದು, ಒಟ್ಟು ನಾಲ್ಕು ಅರ್ಜಿಗಳು ಏಕ ಕಾಲದಲ್ಲಿ ವಿಚಾರಣೆಗೆ ಬರಲಿದೆ. ಒಟ್ಟಿನಲ್ಲಿ ಇಂದು ಬಿಎಸ್‍ವೈ ಭವಿಷ್ಯ ನಿರ್ಧರವಾಗಿದೆ.