ಹಾವೇರಿ: ಅಂಬೇಡ್ಕರ್ (B R Ambedkar) ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಬೌದ್ಧಧರ್ಮ ಸ್ವೀಕರಿಸಿದ್ದರು. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸದಿದ್ದರೆ ದಲಿತರೆಲ್ಲಾ ಮುಸ್ಲಿಮರಾಗುತ್ತಿದ್ದರು ಎಂದು ಶಿಗ್ಗಾಂವಿಯ (Shiggaon) ‘ಕೈ’ ಮುಖಂಡ ಅಜ್ಜಂಪೀರ್ ಖಾದ್ರಿ ವಿವಾದಿತ ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಬೌದ್ಧಧರ್ಮ ಸ್ವೀಕರಿಸಿದ್ದರು. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸದಿದ್ದರೆ ದಲಿತರೆಲ್ಲಾ ಮುಸ್ಲಿಮರಾಗುತ್ತಿದ್ದರು. ಆರ್.ಬಿ ತಿಮ್ಮಾಪುರ್ ಹೋಗಿ ರಹೀಮ್ ಖಾನ್, ಡಾ.ಜಿ ಪರಮೇಶ್ವರ್ ಬದಲು ಫೀರ್ ಸಾಹೇಬ್, ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಿದ್ದರೆ ಎಲ್ ಹನುಮಂತಯ್ಯ ಹೋಗಿ ಹಸನ್ ಸಾಬ್ ಆಗುತ್ತಿದ್ದರು. ಆದರೆ ಈಗಲೂ ಎಲ್ಲೆಲ್ಲಿ ದಲಿತ ಕೇರಿ ಇದೆಯೋ ಅಲ್ಲೆಲ್ಲ ಪಕ್ಕದಲ್ಲೇ ಮುಸ್ಲೀಂ ದರ್ಗಾ ಇದೆ. ದಲಿತರಿಗೂ ಮುಸ್ಲಿಮರಿಗೂ ಇರುವ ಬಾಂಧವ್ಯ ಹಾಗೆ ಇದೆ ಎಂದು ಸೋಮವಾರ ಶಿಗ್ಗಾಂವಿಯ ಹನುಮಂತ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ನಡೆದಿದ ಆದಿಜಾಂಬವ ಜಾಗೃತಿ ಸಮಾವೇಶ ಖಾದ್ರಿ (Ajjampir Khadri) ಹೇಳಿದ್ದರು. ಇದಕ್ಕೆ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ವಕ್ಫ್ ಬೋರ್ಡ್ ವಿರುದ್ಧ ತಿರುಗಿ ಬಿದ್ದ ಅಥಣಿಯ 60 ಮುಸ್ಲಿಂ ಕುಟುಂಬಗಳು
Advertisement
Advertisement
ಈ ಬೆನ್ನಲ್ಲೇ, ಖಾದ್ರಿ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ (Eshwara Khandre) ಹೇಳಿದ್ದಾರೆ. ಇಷ್ಟೆಲ್ಲಾ ಆದಮೇಲೆ, ಅಜ್ಜಂಪೀರ್ ಖಾದ್ರಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Madikeri| ಕೊಲೆಯಾದ 18 ವರ್ಷಗಳ ಬಳಿಕ ಬಾಲಕಿಯ ದಫನ – ಪ್ರಕರಣ ಇತ್ಯರ್ಥ
Advertisement
Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಇರಲಿಲ್ಲ. ನಾನು ಎಲ್ಲೋ ಕಾರ್ಯಕ್ರಮದಲ್ಲಿ ಕೇಳಿದ್ದೆ, ಅದನ್ನು ನಿನ್ನೆ ಭಾಷಣ ಮಾಡುವಾಗ ಹೇಳಿದ್ದೇನೆ. ನಮ್ಮ ಕ್ಷೇತ್ರದಲ್ಲಿ ನಾವು ದಲಿತ ಬಾಂಧವರು ತುಂಬಾ ಪ್ರೀತಿಯಿಂದ ಇದ್ದೇವೆ. ಅಂಬೇಡ್ಕರ್ ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಇದರಿಂದ ಯಾವುದೇ ತಪ್ಪು ಸಂದೇಶ ಹೋಗುವುದಿಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ನಾನು ಅಂಬೇಡ್ಕರ್, ವಾಲ್ಮೀಕಿ ಎಲ್ಲರ ಫೋಟೋ ಹಾಕಿದ್ದೇನೆ. ನಾವೆಲ್ಲರೂ ಜೊತೆಗೆ ಉತ್ತಮವಾದ ಸಂಬಂಧ ಹೊಂದಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Shiggaon| ವಿವಾದದ ಬಳಿಕ ಸಂತೆ ಮೈದಾನದಲ್ಲಿ ಹಸಿರು ಬಾವುಟ, ಭಗವಾಧ್ವಜ ತೆರವು