ಚಿಕ್ಕಬಳ್ಳಾಪುರ: ಕಳೆದ ಚುನಾವಣೆ ವೇಳೆ ಎಚ್.ಡಿ ದೇವೇಗೌಡ ಕುಟುಂಬದ ವಿರುದ್ಧ ಹರಿಹಾಯ್ದಿದ್ದ ಮಾಜಿ ಸಚಿವ, ಈ ಬಾರಿಯ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಈಗ ಮೃದು ಧೋರಣೆ ತೋರಿದ್ದಾರೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಪುರಾಣ ಪ್ರಸಿದ್ಧ ಕೈವಾರ ಕ್ಷೇತ್ರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಮಾಧ್ಯಮಗಳು ಈ ಬಾರಿ ನೀವು ದೇವೇಗೌಡರ ಬಗ್ಗೆ ಮೃದು ಧೋರಣೆ ತಾಳಿದ್ದು ಯಾಕೆ ಎಂದು ಪ್ರಶ್ನೆ ಕೇಳಿದ್ದಕ್ಕೆ, ದೇವೇಗೌಡರು ಮಾಜಿ ಪ್ರಧಾನಿಗಳು ಹಾಗೂ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಗಳು. ಅವರು ದೊಡ್ಡವರು, ದೊಡ್ಡವರ ವಿಷಯ ನಮಗ್ಯಾಕೆ? ನಾವು ಅವರ ಮುಂದೆ ತುಂಬಾ ಸಣ್ಣವರು ಎಂದು ಹೇಳಿ ನಸುನಕ್ಕರು.
Advertisement
Advertisement
ಈ ಬಾರಿ ಮೋದಿ ಅಲೆಯ ಜೊತೆಗೆ, ಕಳೆದ ಬಾರಿ ಸೋತಿರುವ ಅನುಕಂಪ, ಹಾಗೂ ಮೊಯ್ಲಿ ಯವರ ಸುಳ್ಳು ಭರವಸೆಗಳು ಈಡೇರದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ನನ್ನ ಗೆಲುವಿನ ಹಾದಿ ಸುಗಮವಾಗಿದೆ ಎಂದು ತಿಳಿಸಿದರು.
Advertisement
ಈ ವೇಳೆ ಮಂಡ್ಯ ಚುನಾವಣೆಯಲ್ಲಿ ಬಿಜೆಪಿ ಸುಮಲತಾ ಅವರಿಗೆ ಬೆಂಬಲ ನೀಡುತ್ತಿದ್ಯಾ ಎನ್ನುವ ಪ್ರಶ್ನೆಗೆ, ನಾನು ಹೈಕಮಾಂಡಿನ ಜೊತೆ ಹೋಗಿ ಮಾತನಾಡಿಲ್ಲ. ಮಂಡ್ಯ ರಾಜಕೀಯದ ಬಗ್ಗೆ ನನಗೆ ಏನು ಗೊತ್ತಿಲ್ಲ. ನಮ್ಮ ಚಿಕ್ಕಬಳ್ಳಾಪುರದ ಬಗ್ಗೆ ಮಾತ್ರ ನನಗೆ ಗೊತ್ತು ಎಂದು ಹೇಳಿದರು.
Advertisement
ಕಳೆದ ಬಾರಿ ಏನಾಗಿತ್ತು?
ಕಳೆದ ಬಾರಿ ದೇವೇಗೌಡರ ಬಗ್ಗೆ ಹರಿಹಾಯ್ದ ಪರಿಣಾಮ ಕೊನೆ ಕ್ಷಣದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಚ್‍ಡಿ ಕುಮಾರಸ್ವಾಮಿ ಕಣಕ್ಕೆ ಇಳಿದಿದ್ದರು. ಹೀಗಾಗಿ ಓಕ್ಕಲಿಗರ ಮತ ವಿಭಜನೆಯಿಂದಾಗಿ ಕೇವಲ 9,520 ಮತಗಳ ಅಂತರದಿಂದ ಬಚ್ಚೇಗೌಡ ಅವರು ಸೋತಿದ್ದರು.
ಕಳೆದ ಬಾರಿ ಬಚ್ಚೇಗೌಡ ಅವರು ಗೆಲ್ಲಲ್ಲಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿತ್ತು. ಚುನಾವಣಾ ಪ್ರಚಾರದ ಸಮಯದಲ್ಲಿ ಬಚ್ಚೇಗೌಡರು ದೇವೇಗೌಡ ಮತ್ತು ಅವರ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಇದರ ಪರಿಣಾಮ ಕೊನೆಯ ಕ್ಷಣದಲ್ಲಿ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಎಚ್‍ಡಿಕೆ ಅಭ್ಯರ್ಥಿಯಾದ ಕೂಡಲೇ ಚುನಾವಣೆಯ ಸಂಪೂರ್ಣ ಚಿತ್ರಣವೇ ಬದಲಾಯಿತು. ಒಕ್ಕಲಿಗರ ಮತ ವಿಭಜನೆಯಾದ ಪರಿಣಮ ಬಚ್ಚೇಗೌಡ ಭಾರೀ ಸ್ಪರ್ಧೆ ನೀಡಿದರೂ ಕೊನೆ ಕ್ಷಣದಲ್ಲಿ ಮೋಯ್ಲಿ ಮುಂದೆ 9,520 ಮತಗಳ ಅಂತರದಿಂದ ಸೋಲನ್ನಪ್ಪಿದರು. ಈ ಕಾರಣಕ್ಕೆ ತಮ್ಮ ಗೆಲುವಿನ ಹಾದಿ ಕಷ್ಟ ಆಗುತ್ತದೆ ಎಂದುಕೊಂಡಿರುವ ಬಚ್ಚೇಗೌಡ ದೇವೇಗೌಡ ವಿರುದ್ಧ ತುಟಿ ಬಿಚ್ಚಲಿಲ್ಲ.
ಕಳೆದ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ಎಂ.ವೀರಪ್ಪ ಮೋಯ್ಲಿ 4,24,800 ವೋಟ್ ಗಳಿಸಿದ್ದರೆ ಬಿ.ಎನ್ ಬಚ್ಚೆಗೌಡ ಅವರಿಗೆ 4,15,280 ಮತಗಳು ಬಿದ್ದಿತ್ತು. ಎಚ್.ಡಿ ಕುಮಾರಸ್ವಾಮಿ ಅವರಿಗೆ 346,339 ಲಕ್ಷ ಮತ ಪಡೆದಿದ್ದರು.