ಹಾಸನ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲಿ ಎಂಬ ವಿಚಾರದಲ್ಲಿ ಸಮಯ ಸಂದರ್ಭ ಬಂದಾಗ ಏನು ಬೇಕಾದರೂ ಆಗಬಹುದು ‘ಕಾಲೈ ತಸ್ಮೈ ನಮಃ’ ಎಂದು ಹೇಳುವ ಮೂಲಕ ಉಮೇಶ್ ಕತ್ತಿ ಹೇಳಿಕೆಯನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ಪರೋಕ್ಷವಾಗಿ ಸಮರ್ಥಿಸಿ ಕೊಂಡಿದ್ದಾರೆ.
Advertisement
ಜಿಲ್ಲೆಯ ಹಾಸನ ತಾಲೂಕಿನ ಕಾರೆಕೆರೆಯಲ್ಲಿ ಕೃಷಿ ವಿಶ್ವವಿದ್ಯಾಲಯದ ವಸತಿ ನಿಲಯಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲಿ ಎಂಬುದು ಉಮೇಶ್ ಕತ್ತಿ ಅವರ ಅಭಿಪ್ರಾಯ ಆಗಿದೆ. ಅವರ ಅಭಿಪ್ರಾಯಕ್ಕೆ ಎಲ್ಲರೂ ಮನ್ನಣೆ ಕೊಡಬೇಕು ಅಂತ ಏನು ಇಲ್ಲ. ಆದರೆ ಸಮಯ ಸಂದರ್ಭ ಬಂದಾಗ ಏನು ಬೇಕಾದರೂ ಆಗಬಹುದು. ಆ ರೀತಿ ಆಗುವುದಿಲ್ಲ ಎಂದು ಪ್ರತಿಪಾದನೆ ಮಾಡುತ್ತಿಲ್ಲ ಹಾಗೂ ಯಾವುದು ಆಗಲ್ಲ ಅಂತ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಗಣಿತ ನೋಟ್ಸ್ ತರದಿದ್ದಕ್ಕೆ ಶಿಕ್ಷಕನಿಂದ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ
Advertisement
ನಿಜವಾದ ಸರ್ವೆ ಜನರದ್ದು:
ರಾಜ್ಯದಲ್ಲಿ ಕಾಂಗ್ರೆಸ್ ಸಮೀಕ್ಷೆ ನಡೆಸಿ 120ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸರ್ವೆ ಯಾರೂ ಮಾಡಿಸಿದ್ದಾರೆ ಅವರವರ ಸರ್ವೇ ಅವರು ಹೇಳಿಕೊಳ್ಳುತ್ತಾರೆ. ನಿಜವಾದ ಸರ್ವೇ ಮಾಡುವವರು ರಾಜ್ಯದ ಜನತೆ. ನಮ್ಮ ಸರ್ವೆ ಪ್ರಕಾರ ಬಿಜೆಪಿ ಪಕ್ಷ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಆಡಳಿತ ಚುಕ್ಕಾಣಿ ಮರು ಸ್ಥಾಪಿಸಲಿದೆ ಎಂದು ಹೇಳಿದರು.
Advertisement
Advertisement
ಕಾಂಗ್ರೆಸ್ ನಾಯಕರಲ್ಲೆ ಕಚ್ಚಾಟ:
ಕಾಂಗ್ರೆಸ್‍ನಲ್ಲಿ ಏನು ನಡೆಯುತ್ತಿದೆ ಎಂದು ಜನ ನೋಡುತ್ತಿದ್ದಾರೆ. ಒಂದು ಕಡೆ ಸಿದ್ದರಾಮಯ್ಯೋತ್ಸವ ಅಂತ ಹೇಳುತ್ತಾರೆ ಮತ್ತೊಂದು ಕಡೆ ಡಿ.ಕೆ ಶಿವಕುಮಾರ್ ಸಾಮೂಹಿಕ ನಾಯಕತ್ವ ಅಂತ ಹೇಳುತ್ತಿದ್ದು, ಅವರಲ್ಲಿಯೇ ಹೊಂದಾಣಿಕೆಯ ಕೊರತೆ ಇದ್ದು, ಪಕ್ಷದಲ್ಲಿ ಕಚ್ಚಾಟ ನಡೆಯುತ್ತಿದೆ. ಅವರ ಕಚ್ಚಾಟ ಅವರ ವೈಯಕ್ತಿಕ ವಿಚಾರ ನಮಗೂ ಸಂಬಂಧವಿಲ್ಲ ಆದರೆ. ಇಂದು ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲಿಯೂ ನಿರ್ನಾಮವಾಗಿದ್ದು ಇತ್ತೀಚೆಗೆ ಮಹಾರಾಷ್ಟ್ರದಲ್ಲೂ ಸಹ ಸರ್ಕಾರ ಅಸ್ತಿತ್ವ ಕಳೆದುಕೊಂಡಿದೆ ಹಾಗೂ ಪಂಜಾಬ್ ನಲ್ಲಿಯೂ ಸಹ ಹೀನಾಯ ಸೋಲು ಕಂಡಿರುವುದು ಕಾಂಗ್ರೆಸ್‍ನ ವಾಸ್ತವ ಸ್ಥಿತಿಯನ್ನು ತೋರಿಸುತ್ತಿದೆ. ಆದ್ದರಿಂದ ಕರ್ನಾಟಕದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಭ್ರಮಾಲೋಕದಲ್ಲಿ ಇರುವಂತಹ ಕಾಂಗ್ರೆಸ್ ನಾಯಕರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಮತ ಹಾಕಿ ವ್ಯರ್ಥ ಮಾಡಬೇಡಿ, ಬಿಜೆಪಿಯಿಂದ ತೃಪ್ತಿ ಹೊಂದದವರು ನಮಗೆ ಮತ ಹಾಕಿ: ಕೇಜ್ರಿವಾಲ್
ಕುಮಾರಸ್ವಾಮಿ ಎಷ್ಟು ಸ್ಥಾನ ಗೆಲ್ಲುತ್ತಾರೆ:
ಮುಂದಿನ ಬಾರಿ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಎಷ್ಟು ಸೀಟ್ ತೆಗೆದುಕೊಂಡು ಸಿಎಂ ಆಗುತ್ತಾರೆ ಎಂದು ಕುಮಾರಸ್ವಾಮಿ ಅವರನ್ನೇ ಕೇಳಿ. 122 ಅಥವಾ ಮ್ಯಾಜಿಕ್ ನಂಬರ್ 113 ಬರುತ್ತದೆ ಗೊತ್ತಿಲ್ಲ ಆದರೆ 113 ಮ್ಯಾಜಿಕ್ ನಂಬರ್ ಬಂದರೆ. ಯಾರು ಬೇಕಾದರೂ ಸಿಎಂ ಆಗಬಹುದು ಎಂದು ಹೇಳಿದರು.
ಸಮಯಕ್ಕೆ ಗೊಬ್ಬರ-ಬಿತ್ತನೆ ಬೀಜ ಪೂರೈಕೆ:
ರಾಜ್ಯದಲ್ಲಿ ರೈತರಿಗೆ ಸರಿಯಾದ ಸಮಯದಲ್ಲಿ ಗೊಬ್ಬರ ಹಾಗೂ ಬಿತ್ತನೆ ಬಿಜೆಪಿ ಪೂರೈಕೆಗೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಬಿತ್ತನೆ ಕಾರ್ಯ ಮುಗಿದಿರುವ ಪ್ರದೇಶಗಳಲ್ಲಿ ಸರಿಯಾದ ಸಮಯಕ್ಕೆ ಗೊಬ್ಬರ ಪೂರೈಕೆ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದರು.