ಮಾಸ್ಕೋ: ರಷ್ಯಾದ (Russia) ನೆಲದಲ್ಲಿ ಗುಂಡಿನ ದಾಳಿಯಿಂದಲೇ ವಿಮಾನ ಪತನವಾಗಿದೆ ಎಂದು ಅಜರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ದೂರಿದ್ದಾರೆ.
ರಷ್ಯಾದ ವಾಯು ಪ್ರದೇಶದಲ್ಲಿ ಅಜರ್ಬೈಜಾನ್ ವಿಮಾನ ಪತನಗೊಂಡು (Azerbaijan Plane Crash) 38 ಜನರ ಸಾವಿಗೆ ಕಾರಣವಾದ ಈ ದುರಂತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಕ್ಷಮೆ ಕೇಳಿದ ಒಂದು ದಿನದ ನಂತರ ಅಜರ್ಬೈಜಾನ್ ಅಧ್ಯಕ್ಷ ಈ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಅಜರ್ಬೈಜಾನ್ ವಿಮಾನ ಪತನದಿಂದ 38 ಸಾವು – ʻದುರಂತʼಕ್ಕೆ ಕ್ಷಮೆ ಕೋರಿದ ಪುಟಿನ್
Advertisement
Advertisement
ರಷ್ಯಾದ ಗುಂಡಿನ ದಾಳಿಯಿಂದಲೇ ವಿಮಾನ ಪತನಗೊಂಡಿದೆ. ಆದ್ರೆ ಮಾರಣಾಂತಿಕ ಜೆಟ್ ಅಪಘಾತ ಪ್ರಕರಣವನ್ನು ಮರೆಮಾಚಲು ಮಾಸ್ಕೋ ಪ್ರಯತ್ನಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Advertisement
ರಷ್ಯಾದ ಕೆಲವು ವಲಯಗಳು ಅಪಘಾತದ ಪ್ರಕರಣದ ಬಗ್ಗೆ ಸತ್ಯ ಮುಚ್ಚಿಡಲು ಪ್ರಯತ್ನಿಸುತ್ತಿವೆ. ವಿಮಾನದಲ್ಲಿದ್ದ 67 ಪ್ರಯಾಣಿಕರಲ್ಲಿ 38 ಮಂದಿ ಸಾವನ್ನಪ್ಪಿದ್ದಾರೆ. ಆದ್ರೆ ಅಪಘಾತದ ಕಾರಣಗಳ ಬಗ್ಗೆ ಸುಳ್ಳು ನಿರೂಪಣೆಯನ್ನು ರಷ್ಯಾ ಬಿತ್ತರಿಸುತ್ತಿದೆ ಎಂದರಲ್ಲದೇ ರಷ್ಯಾ ತನ್ನ ತಪ್ಪನ್ನು ಒಪ್ಪಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕೊರಿಯಾ | ಲ್ಯಾಂಡಿಂಗ್ ಗೇರ್ ವೈಫಲ್ಯದಿಂದ ವಿಮಾನ ಪತನ – 179 ಮಂದಿ ದುರ್ಮರಣ
Advertisement
ಕ್ಷಮೆ ಕೇಳಿದ ಪುಟಿನ್:
38 ಜನ ಸಾವನ್ನಪ್ಪಿದ ದುರಂತ ನೆನೆದು ಅಜರ್ಬೈಜಾನ್ ಅಧ್ಯಕ್ಷ ಇಲ್‌ಹ್ಯಾಮ್ ಅಲಿಯೆವ್ ಅವರಿಗೆ ಶನಿವಾರ ಕರೆ ಮಾಡಿದ ಪುಟಿನ್ ಕ್ಷಮೆ ಯಾಚಿಸಿದ್ದರು. ದೊಂದು ಘೋರ ದುರಂತ ಎಂದು ಸಹ ಕರೆದಿದ್ದರು.
ವಿಮಾನ ದುರಂತಕ್ಕೂ ಮುನ್ನ ಅಜರ್ಬೈಜಾನ್ ಏರ್‌ಲೈನ್ಸ್‌ಗೆ ಸೇರಿದ ವಿಮಾನವು ಗೋಝಿ ಪ್ರಾಂತ್ಯದ ಬಳಿ ಲ್ಯಾಂಡಿಂಗ್ ನಡೆಸಲು ಪ್ರಯತ್ನಿಸುತ್ತಿತ್ತು. ಈ ಸಂದರ್ಭದಲ್ಲಿ ಉಕ್ರೇನ್‌ನ ಡೋನ್‌ಗಳು ಹಾಗೂ ರಷ್ಯಾದ ವಾಯು ಸೇನೆ ನಡುವೆ ಯುದ್ಧ ನಡೆಯುತ್ತಿತ್ತು. ಇದರಲ್ಲಿ ಪ್ರಯಾಣಿಕರಿದ್ದ ಈ ವಿಮಾನ ಪತನಗೊಂಡಿತು. ವಿಮಾನ ಪತನಕ್ಕೆ ಯಾರು ಕಾರಣ ಎಂಬ ವಿಷಯದಲ್ಲಿ ರಷ್ಯಾ ಮತ್ತು ಉಕ್ರೇನ್ ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪ ನಡೆಸಿದ್ದವು. ಅಜರ್ಬೈಜಾನ್ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಹೊರಗಿನ ದಾಳಿಯಿಂದ ವಿಮಾನ ಪತನಗೊಂಡಿದೆ ಎಂದು ವರದಿಯಾಗಿತ್ತು.
ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಈ ವಿಮಾನ ಪತನಗೊಂಡಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇನ್ನೂ ಕೆಲವು, ಉಕ್ರೇನ್ ನಡೆಸಿದ ದಾಳಿಯಿಂದ ದುರಂತ ಸಂಭವಿಸಿದೆ ಎಂದೆನ್ನಲಾಗಿತ್ತು.