ಇತ್ತೀಚೆಗೆ ಆಯುಷ್ ಹೆಸರಿನ ಸ್ಕಿನ್ಕೇರ್ ಮತ್ತು ಬ್ಯೂಟಿ ಪ್ರೊಡಕ್ಟ್ಸ್ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ. ಅರಿಶಿನ, ಬೇವು, ಅಲೋವೆರಾ, ಆಮ್ಲಾ, ಶ್ರೀಗಂಧ, ಎಳ್ಳೆಣ್ಣೆ, ತೆಂಗಿನೆಣ್ಣೆ ಸೇರಿದಂತೆ ಸಸ್ಯ ಮೂಲದ ಪದಾರ್ಥಗಳನ್ನು ಬಳಸುವ ಪ್ರೊಡಕ್ಟ್ಸ್ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ, ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಮಾರುಕಟ್ಟೆಯಲ್ಲಿರುವ ಪ್ರತಿಯೊಂದು ಆಯುಷ್ ಪ್ರೊಡಕ್ಟ್ ಅನ್ನು ಕೇಂದ್ರ ಸರ್ಕಾರವೇ ತಯಾರಿಸಿ ಮಾರಾಟ ಮಾಡುವುದಿಲ್ಲ. ಸರ್ಕಾರದ ಪಾತ್ರ ಮುಖ್ಯವಾಗಿ ನಿಯಮ, ಗುಣಮಟ್ಟ, ಸುರಕ್ಷತೆ ಮತ್ತು ಪ್ರಮಾಣೀಕರಣಕ್ಕೆ ಸಂಬಂಧಿಸಿದೆ.
AYUSH ಎಂದರೇನು?
AYUSH ಅನ್ನೋದು ಭಾರತ ಸರ್ಕಾರದ ಸಾಂಪ್ರದಾಯಿಕ ಮತ್ತು ಪರ್ಯಾಯ ಆರೋಗ್ಯ ಪದ್ಧತಿಗಳಿಗೆ ಸಂಬಂಧಿಸಿದ ಸಚಿವಾಲಯದ ಹೆಸರು. AYUSH ಎನ್ನುವುದು Ayurveda, Yoga & Naturopathy, Unani, Siddha, Homoeopathy ಎಂಬ ಪದ್ಧತಿಗಳ ಸಂಕ್ಷಿಪ್ತ ರೂಪ.
2014ರ ನವೆಂಬರ್ 9ರಂದು ಕೇಂದ್ರ ಸರ್ಕಾರ ಪ್ರತ್ಯೇಕ Ministry of AYUSH ಅನ್ನು ಸ್ಥಾಪಿಸಿತು. ಈ ಸಚಿವಾಲಯದ ಕೆಲಸ ಈ ಆರೋಗ್ಯ ಪದ್ಧತಿಗಳ ಅಭಿವೃದ್ಧಿ, ಶಿಕ್ಷಣ, ಸಂಶೋಧನೆ, ಗುಣಮಟ್ಟದ ಮಾನದಂಡಗಳು ಮತ್ತು ಆರೋಗ್ಯ ಸೇವೆಗಳ ವಿಸ್ತರಣೆಗೆ ಸಂಬಂಧಿಸಿದೆ.
ಆಯುಷ್ ಸ್ಕಿನ್ಕೇರ್ ಪ್ರೊಡಕ್ಟ್ಸ್ ಅಂದ್ರೇನು?
ಆಯುರ್ವೇದದಲ್ಲಿ ಚರ್ಮ, ಕೂದಲು ಮತ್ತು ದೇಹದ ಆರೈಕೆಗೆ ಸಂಬಂಧಿಸಿದ ಹಲವು ಫಾರ್ಮುಲೇಷನ್ಗಳ ಉಲ್ಲೇಖಗಳಿವೆ. Drugs Rules ಅಡಿಯಲ್ಲಿ ನಿರ್ದಿಷ್ಟ ಆಯುರ್ವೇದಿಕ್ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಕೆಲವು ಪದಾರ್ಥಗಳನ್ನು ಹೊಂದಿರುವ ಮತ್ತು ಸ್ಕಿನ್, ಹೇರ್ ಹಾಗೂ ಬಾಡಿ ಕೇರ್ಗೆ ಬಳಸುವ ಫಾರ್ಮುಲೇಷನ್ಗಳನ್ನು ‘ಸೌಂದರ್ಯ ಪ್ರಸಾದಕ’ (Saundarya Prasadak) ಎಂದು ಪರಿಗಣಿಸಲಾಗುತ್ತದೆ. ಅಂದರೆ, ‘ಆಯುಷ್’ ಎನ್ನುವ ಹೆಸರು ಕಂಡ ತಕ್ಷಣ ಅದು ಸರ್ಕಾರದ ಸ್ವಂತ ಬ್ರ್ಯಾಂಡ್ ಎಂದು ಅರ್ಥ ಮಾಡಿಕೊಳ್ಳಬಾರದು.
ಇಂತಹ ಪ್ರೊಡಕ್ಟ್ಸ್ನಲ್ಲಿ ಯಾವ ಪದಾರ್ಥಗಳನ್ನು ಬಳಸುತ್ತಾರೆ?
ಪ್ರೊಡಕ್ಟ್ ಮತ್ತು ಅದರ ಫಾರ್ಮುಲೇಷನ್ಗೆ ಅನುಗುಣವಾಗಿ ಅರಿಶಿನ, ಬೇವು, ಅಲೋವೆರಾ, ಆಮ್ಲಾ, ಶ್ರೀಗಂಧ, ಎಳ್ಳೆಣ್ಣೆ, ತೆಂಗಿನೆಣ್ಣೆ ಸೇರಿದಂತೆ ವಿವಿಧ ಸಸ್ಯ ಮೂಲದ ಪದಾರ್ಥಗಳನ್ನು ಬಳಸಬಹುದು. ಆದರೆ, ಒಂದು ಪ್ರೊಡಕ್ಟ್ನಲ್ಲಿ ಯಾವ ಪದಾರ್ಥ ಎಷ್ಟು ಪ್ರಮಾಣದಲ್ಲಿದೆ ಎಂಬುದು ಅದರ Ingredients List ನೋಡಿದಾಗ ಮಾತ್ರ ಗೊತ್ತಾಗುತ್ತದೆ. ಹೀಗಾಗಿ ಕೇವಲ ‘ಹರ್ಬಲ್’ ಅಥವಾ ‘ನ್ಯಾಚುರಲ್’ ಎಂಬ ಪದ ನೋಡಿ ಪ್ರೊಡಕ್ಟ್ ಆಯ್ಕೆ ಮಾಡುವುದು ಸರಿಯಲ್ಲ.
ಸ್ಕಿನ್ಕೇರ್ನಲ್ಲಿ ಇವುಗಳ ಬಳಕೆ ಹೇಗೆ?
ಕೆಲವು ಆಯುರ್ವೇದಿಕ್ ಅಥವಾ ಹರ್ಬಲ್ ಫಾರ್ಮುಲೇಷನ್ಗಳನ್ನು ಕ್ಲೀನಿಂಗ್, ಮಾಯಿಶ್ಚರೈಸಿಂಗ್ ಮತ್ತು ಸಾಮಾನ್ಯ ಸ್ಕಿನ್ ಕೇರ್ಗಾಗಿ ಬಳಸಲಾಗುತ್ತದೆ. ಆದರೆ, ಎಲ್ಲರ ಸ್ಕಿನ್ ಒಂದೇ ರೀತಿ ಇರುವುದಿಲ್ಲ. ಆಯ್ಲಿ, ಡ್ರೈ, ಕಾಂಬಿನೇಷನ್ ಅಥವಾ ಸೆನ್ಸಿಟಿವ್ ಸ್ಕಿನ್ಗೆ ಒಂದೇ ಪ್ರೊಡಕ್ಟ್ ಒಂದೇ ರೀತಿಯ ಪರಿಣಾಮ ನೀಡುವುದಿಲ್ಲ.
ಹೊಸ ಪ್ರೊಡಕ್ಟ್ ಬಳಸುವ ಮೊದಲು Ingredients, ಉತ್ಪನ್ನದ ಲೇಬಲ್, ಬಳಕೆಯ ವಿಧಾನ ಮತ್ತು ನಿಮ್ಮ ಸ್ಕಿನ್ ಟೈಪ್ಗೆ ಅದು ಸೂಕ್ತವೇ ಎಂಬುದನ್ನು ಗಮನಿಸುವುದು ಮುಖ್ಯ.
ಆಯುಷ್ ಪ್ರೊಡಕ್ಟ್ಸ್ಗಳ ವಿಶೇಷತೆ ಏನು?
ಆಯುಷ್ ಪ್ರೊಡಕ್ಟ್ಸ್ಗಳ ಪ್ರಮುಖ ವ್ಯತ್ಯಾಸವನ್ನು ಅವುಗಳಲ್ಲಿ ಬಳಸುವ ಆಯುರ್ವೇದಿಕ್ ಫಾರ್ಮುಲೇಷನ್ಗಳು ಮತ್ತು ಸಸ್ಯ ಮೂಲದ ಪದಾರ್ಥಗಳ ಬಳಕೆಯಲ್ಲಿ ನೋಡಬಹುದು.
“ಕೆಮಿಕಲ್ ಫ್ರೀ”, “100% ಸೈಡ್ ಎಫೆಕ್ಟ್ ಇಲ್ಲ”, “ಕ್ಯಾನ್ಸರ್ಕಾರಕ ರಾಸಾಯನಿಕಗಳಿಲ್ಲ” ಎಂಬ ಹೇಳಿಕೆಗಳನ್ನು ಎಲ್ಲಾ ಆಯುಷ್ ಸ್ಕಿನ್ಕೇರ್ ಪ್ರೊಡಕ್ಟ್ಸ್ಗಳಿಗೂ ಸಾಮಾನ್ಯವಾಗಿ ಅನ್ವಯಿಸಬಾರದು. ಸರ್ಕಾರದ ಅಧಿಕೃತ ಉತ್ತರದಲ್ಲೂ ಆಯುರ್ವೇದಿಕ್ ಕಾಸ್ಮೆಟಿಕ್ಸ್ಗಳಿಗೆ ಇಂತಹ ಸಾಮಾನ್ಯ ಹೋಲಿಕೆ ಮಾಡಲು ಸಾಕಷ್ಟು ಪುರಾವೆ ಇಲ್ಲ ಎಂದು ಹೇಳಲಾಗಿದೆ.
ಆಯುಷ್ ಹೆಸರಿದೆ ಎಂಬ ಕಾರಣಕ್ಕೆ ಮಾತ್ರ ಪ್ರೊಡಕ್ಟ್ ಖರೀದಿಸಬೇಡಿ. ಲೇಬಲ್, Ingredients List, ತಯಾರಕರ ವಿವರ, ಲೈಸೆನ್ಸ್/ಪ್ರಮಾಣೀಕರಣ, ಬಳಕೆಯ ವಿಧಾನ ಮತ್ತು ಎಕ್ಸ್ಪೈರಿ ಡೇಟ್ ಪರಿಶೀಲಿಸಿ. ಆಯುಷ್ ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷತೆಗಾಗಿ ಸರ್ಕಾರ GMP, ಗುಣಮಟ್ಟದ ಮಾನದಂಡಗಳು, ಪರೀಕ್ಷೆ ಮತ್ತು ಫಾರ್ಮಕೋವಿಜಿಲೆನ್ಸ್ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಜಾರಿಗೊಳಿಸಿದೆ.

