ಬೆಂಗಳೂರು: ನಾಡಿನಾದ್ಯಂತ ಮಂಗಳವಾರ ಆಯುಧ ಪೂಜೆ (Ayudha Pooja) ನೆರವೇರಿತು. ದಸರಾ ಹಬ್ಬದ ಒಂಭತ್ತನೇ ದಿನವಾದ ನವಮಿಯಂದು ಆಯುಧಗಳ ಪೂಜೆ ಮಾಡಿ ಹಬ್ಬ ಮಾಡುವುದು ಸಂಪ್ರದಾಯ. ಸಿಲಿಕಾನ್ ಸಿಟಿಯಲ್ಲಿ ಆಯುಧ ಪೂಜೆಯ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು.
ಕನ್ನಡದ ಸುದ್ದಿವಾಹಿನಿ ‘ಪಬ್ಲಿಕ್ ಟಿವಿ’ ಕಚೇರಿಯಲ್ಲೂ ಆಯುಧಪೂಜೆ ಆಚರಿಸಲಾಯಿತು. ಇಂದು ಬೆಳಗ್ಗೆ ಕಚೇರಿಯಲ್ಲಿ ಕ್ಯಾಮೆರಾ, ಮೈಕ್, ಉಪಕರಣಗಳು ಹಾಗೂ ವಾಹನಗಳಿಗೆ ಪೂಜೆ ನೆರವೇರಿಸಿ ಸಿಬ್ಬಂದಿಗೆ ಸಿಹಿ ಹಂಚಲಾಯಿತು. ಇದನ್ನೂ ಓದಿ: ದಸರಾ, ಆಯುಧ ಪೂಜೆ ಸಂಭ್ರಮ: ಕೆ.ಆರ್ ಮಾರ್ಕೆಟ್ನಲ್ಲಿ ಖರೀದಿ ಭರಾಟೆ ಜೋರು
ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್, ಸಿಇಒ ಅರುಣ್ ಕುಮಾರ್, ಸಿಒಒ ಪಿ.ಕೆ ಹರೀಶ್ ಕುಮಾರ್, ಸಂಪಾದಕರಾದ ದಿವಾಕರ್ ಹಾಗೂ ಸಿಬ್ಬಂದಿ ಪೂಜೆಯಲ್ಲಿ ಭಾಗವಹಿಸಿದ್ದರು. ಪೂಜೆ ಬಳಿಕ ಕಚೇರಿಯ ಸಿಬ್ಬಂದಿ ವರ್ಗದವರಿಗೆ ಸಿಹಿ ವಿತರಿಸಲಾಯಿತು.
ಆಯುಧ ಪೂಜೆ ಹಿನ್ನೆಲೆ ಬೆಂಗಳೂರಿನ ದೇವಸ್ಥಾನಗಳ ಮುಂದೆ ವಾಹನಗಳ ಪೂಜೆ ನೆರವೇರಿಸಲಾಯಿತು. ಸರ್ಕಲ್ ಮಾರಮ್ಮ ದೇಗುಲದಲ್ಲಿ ವಾಹನಗಳಿಗೆ ಪೂಜೆ ಮಾಡಲಾಯಿತು. ಕಾರು, ಆಟೋ, ಬೈಕ್, ಬಸ್, ಲಾರಿಗಳನ್ನು ಬಾಳೆಕಂದು, ಹೂಗಳಿಂದ ಸಿಂಗಾರಗೊಳಿಸಿ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು.

